ನನ್ನ ಕೈಯಾರೆ ನನ್ನ ಮಗುವನ್ನ ಕಳೆದುಕೊಂಡೆ; ಕನ್ನಡಿಗರ ಮುಂದೆ ಅನುಶ್ರೀ ಮಾತು

 

ನಮ್ಮ ಜನರನ್ನು ಹಲವು ವರ್ಷಗಳಿಂದಲೂ ನಗಿಸುತ್ತಾ ಬಂದಿರುವ ಜೀ ಕನ್ನಡ ವಾಹಿನಿಯ ಜನಮೆಚ್ಚಿದ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಇದೀಗ ಹೊಸ ಅವತಾರದಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದೆ. ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌' ಹೆಸರಿನಲ್ಲಿ ವೀಕೆಂಡ್‌ನಲ್ಲಿ ನಗುವಿನ ಟಾನಿಕ್‌ ನೀಡುತ್ತಿದೆ. ಮಕ್ಕಳಿಂದ ಹಿಡಿದು ಮುದುಕರವರೆಗೂ ನೋಡಬಹುದಾದ ನಕ್ಕು ನಗಿಸುವ ಶೋ ಇದಾಗಿದೆ.

ಈ ಕಾರ್ಯಕ್ರಮಕ್ಕೆ ನವರಸ ನಾಯಕ ಜಗ್ಗೇಶ್ ತೀರ್ಪುಗಾರರು. ನಗಿಸುವವರ ಹಿಂದೆ ನೋವಿರುತ್ತದೆ ಎನ್ನುವ ಮಾತು ನೂರಕ್ಕೆ ನೂರರಷ್ಟು ಸತ್ಯ ಎಂದು ಅನೇಕರು ಪದೇ ಪದೇ ಹೇಳುತ್ತಾರೆ. ತೆರೆ ಮೇಲೆ ಎಲ್ಲರನ್ನು ನಗಿಸುವ ಜಗ್ಗೇಶ್ ಮತ್ತು ಅನುಶ್ರೀ ಜೀವನದಲ್ಲಿ ನಡೆದ ಕಹಿ ಘಟನೆಯ ಬಗ್ಗೆ ಈ ಸುದ್ದಿಯಲ್ಲಿ ವಿವರಿಸಲಾಗಿದೆ. ಸ್ಯಾಂಡಲ್‌ವುಡ್‌ನ ನವರಸ ನಾಯಕ ಜಗ್ಗೇಶ್ ಅವರಿಗೆ ಒಬ್ಬ ಮೊಮ್ಮಗ ಇದ್ದಾನೆ. ಈತನ ಹೆಸರು ಅರ್ಜುನ್ ಅಂತಲೇ ಇದೆ.

ಈತನೊಂದಿಗೆ ಜಗ್ಗೇಶ್ ಅವರು ತುಂಬಾನೆ ಅಟ್ಯಾಚ್ ಆಗಿದ್ದಾರೆ. ಇವರ ಈ ಒಂದು ಅಟ್ಯಾಚ್‌ಮೆಂಟ್‌ಗೆ ಕಾರಣವೂ ಇದೆ.ಇದರೊಟ್ಟಿಗೆ ಜಗ್ಗೇಶ್ ಅವರ ಈ ಮೊಮ್ಮಗನ ಹೆಸರು ಅರ್ಜುನ್ ಅಂತ ಇಡಲು ಒಂದು ಎಮೋಷನಲ್ ಕಾರಣವೂ ಇದೆ. ಆ ಕಾರಣ ಮತ್ತು ಜಗ್ಗೇಶ್ ಅವರ ಮೊಮ್ಮಗ ಹಾಗೂ ಪ್ರಕೃತಿ ಪ್ರಾಣಿ ಪಕ್ಷಿಗಳಿಗೆ ಎರಡೂ ತುಂಬಾನೆ ಕನೆಕ್ಟ್ ಇದೆ. ಇದರ ಬಗ್ಗೆ ಹೇಳ್ತಾ ಹೋದ್ರೆ, ಅಲ್ಲಿ ಪ್ರಾಣಿ ಪ್ರೀತಿಯ ಅಗಾಧ ಲೋಕ ತೆರೆದಕೊಳ್ಳುತ್ತದೆ. 

ಜಗ್ಗೇಶ್ ಅವರ ಹಿರಿಯ ಮಗ ಗುರುರಾಜ್ ಪುತ್ರ ಈ ಅರ್ಜುನ್. ಈತನ ಮೇಲೆ ಜಗ್ಗೇಶ್ ಅವರಿಗೆ ತುಂಬಾನೆ ಪ್ರೀತಿ ಇದೆ. ಜೊತೆಗೆ ಮನೆಯ ಸ್ಪೆಷಲ್ ಸದಸ್ಯನೂ ಆಗಿದ್ದಾನೆ. ತಮ್ಮ ತಾತನ ಜೊತೆಗೆ ಜಗ್ಗೇಶ್ ಹೇಗೆ ಕನೆಕ್ಟ್ ಆಗಿ ಇರ್ತಿದ್ರೋ, ಅದೇ ರೀತಿನೇ ಜಗ್ಗೇಶ್ ತಮ್ಮ ಮೊಮ್ಮಗ ಅರ್ಜುನ್ ಜೊತೆಗೆ ಅಟ್ಯಾಚ್ ಆಗಿದ್ದಾರೆ. ಆ ಒಂದು ಪ್ರೀತಿ ಆ ಒಂದು ಅಟ್ಯಾಚ್‌ಮೆಂಟ್‌ ಕುರಿತು ಜಗ್ಗೇಶ್ ಆಗಾಗ ಹೇಳ್ತಾನೇ ಇರ್ತಾರೆ. 

ಕಾಮಿಡಿ ಕಿಲಾಡಿಗಳು ಶೋನಲ್ಲಿ ಜಗ್ಗೇಶ್ ಅವರು ಅರ್ಜುನ ಎಂಬ ಹೆಸರಿನ ಸಾಕು ನಾಯಿಯ ಜೊತೆ ಇರುವ ಫೋಟೊವನ್ನು ತೋರಿಸಿದಾಗ, ಇವನ ಹೆಸರನ್ನೇ ನಾನು ನನ್ನ ಮೊಮ್ಮಗನಿಗೆ ಇಟ್ಟಿದ್ದೇನೆ. ಕಾರಣವೆನೆಂದರೆ, ಲ್ಯಾಬ್ರೇಡರ್ ನಾಯಿ ಜಾಸ್ತಿ ದಿನ ಬದುಕುವುದಿಲ್ಲ. ಆದರೆ ಅವನು ಹದಿನಾಲ್ಕುವರೆ ವರ್ಷ ನಮ್ಮ ಜೊತೆ ಬದುಕಿದ್ದ ಎಂದು ತಿಳಿಸಿದರು. ಆಗ ಅಂಕರ್ ಅನುಶ್ರೀ ಕೂಡಾ ನಾನು ಚಿನ್ನು ಅನ್ನೊ ನಾಯಿಯನ್ನು ಕಳೆದುಕೊಂಡೆ ಎಂದು ಕಣ್ಣೀರು ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.