ನನಗೂ ಮಗು ಬೇಕು; ಬೇಡಿಕೆ ಇಟ್ಟ ಸಮಂತಾ

 
ಸಮಂತಾ ರುತ್ ಪ್ರಭು ಮಾಜಿ ಪತಿ ನಾಗಚೈತನ್ಯ ಎರಡನೇ ಮದುವೆ ಆಗುತ್ತಿದ್ದಾರೆ. ಈ ಬೆನ್ನಲ್ಲೇ ಸಮಂತಾ ಕೂಡ ಎರಡನೇ ಮದುವೆ ಆಗುವ ಸುಳಿವು ನೀಡಿದಂತಿದೆ. ಸಮಂತಾ ರುತ್ ಪ್ರಭು ಪ್ರಸ್ತುತ ಸ್ಪೈ-ಥ್ರಿಲ್ಲರ್ ಸಿಟಾಡೆಲ್: ಹನ್ನಿ ಬನ್ನಿ ಮೂಲಕ ಸದ್ದು ಮಾಡುತ್ತಿದ್ದಾರೆ. ಇದರ ಪ್ರಚಾರದ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ನಾಗ ಚೈತನ್ಯ ಅವರೊಂದಿಗೆ ವಿಚ್ಛೇದನದ 3 ವರ್ಷಗಳ ನಂತರ ತಾಯ್ತನದ  ಹಂಬಲವನ್ನು ವ್ಯಕ್ತಪಡಿಸಿದ್ದಾರೆ. 
ನನಗೆ ತಾಯಿಯಾಗುವ ಆಸೆಯಿದೆ. ನಾನು ತಾಯ್ತನವನ್ನು ಅನುಭವಿಸಬೇಕು. ತುಂಬಾ ತಡವಾಗಿದೆ ಎಂದು ನಾನು ಭಾವಿಸುವುದಿಲ್ಲ. ನಾನು ಇನ್ನೂ ತಾಯಿಯಾಗುವ ಕನಸು ಹೊಂದಿದ್ದೇನೆ. ಖಂಡಿತವಾಗಿ, ಈಗಲೂ ನಾನು ತಾಯಿಯಾಗಲು ಇಷ್ಟಪಡುತ್ತೇನೆ ಎಂದಿದ್ದಾರೆ.ನಾನು ಯಾವಾಗಲೂ ತಾಯಿಯಾಗಲು ಬಯಸುತ್ತೇನೆ. ಇದು ತುಂಬಾ ಸುಂದರವಾದ ಅನುಭವವಾಗಿದೆ. 
ನಾನು ಅದನ್ನು ಎದುರು ನೋಡುತ್ತಿದ್ದೇನೆ. ಜನರು ಆಗಾಗ್ಗೆ ವಯಸ್ಸಿನ ಬಗ್ಗೆ ಚಿಂತಿಸುತ್ತಾರೆ, ಆದರೆ ವಯಸ್ಸಿಗೂ ತಾಯ್ತನಕ್ಕೂ ಸಂಬಂಧವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಸಮಂತಾ ಹೇಳಿದ್ದಾರೆ. ಸಿಟಾಡೆಲ್: ಹನ್ನಿ ಬನ್ನಿ ಸರಣಿಯಲ್ಲಿ ತನ್ನ ಮಗುವನ್ನು ರಕ್ಷಿಸಲು ಗೂಢಚಾರಿಕೆ ಮಾಡುವ ತಾಯಿಯಾಗಿ ಸಮಂತಾ ರುತ್ ಪ್ರಭು ನಟಸಿದ್ದಾರೆ. ಇದರಲ್ಲಿ ಬಾಲ ನಟಿಯಾಗಿರುವ ಪುಟ್ಟ ಹುಡುಗಿಯೇ ಸ್ವಂತ ಮಗಳೆಂದು ಭಾಸವಾಗುತ್ತಿದೆ ಎಂದು ಸಮಂತಾ ಹೇಳಿದ್ದಾರೆ. 
ತೆಲುಗು ನಟ ನಾಗಚೈತನ್ಯ ಅವರನ್ನು ಸಮಂತಾ ಪ್ರೀತಿಸಿ ಮದುವೆ ಆಗಿದ್ದರು. ಬಳಿಕ ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರಾಗಿದ್ದಾರೆ. ಡಿವೋರ್ಸ್ ಪಡೆದಿದ್ದಾರೆ. ನಟಿ ಶೋಭಿತಾ ಧುಲಿಪಾಲ ಜೊತೆ ಚೈತು ಮದುವೆಗೆ ಸಿದ್ಧರಾಗಿದ್ದಾರೆ. ಡಿಸೆಂಬರ್‌ನಲ್ಲಿ ಅದ್ಧೂರಿಯಾಗಿ ಮದುವೆಗೆ ಸಿದ್ಧತೆ ನಡೀತಿದೆ. ಇದೆಲ್ಲದರ ನಡುವೆ ಸಮಂತಾ ತಾಯಿ ಆಗುವ ಬಯಕೆಯನ್ನು ಮತ್ತೊಮ್ಮೆ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.