ಆಕೆ ಬಿಟ್ಟು ಹೋದಾಗ ನನ್ನ ವಯಸ್ಸು ಕೇವಲ 17ವಷ೯, ಜೀವನದ ರಹಸ್ಯ ಬಿಚ್ಚಿಟ್ಟ ವಿನಯ್ ಗೌಡ
Sep 22, 2024, 21:41 IST
ಬಿಗ್ಬಾಸ್ನಲ್ಲಿ ಸದಾ ಜಗಳದಿಂದಲೇ ಫೇಮಸ್ ಆಗಿರೋ ವಿನಯ್ ಗೌಡ ಅವರು ಹರ ಹರ ಮಹದೇವ ಧಾರಾವಾಹಿಯಲ್ಲಿ ಶಿವನ ಪಾತ್ರ ಮಾಡಿದ್ದರು. ನಂತರ ಅವರಿಗೆ ಬಿಗ್ ಬಾಸ್ ಕನ್ನಡ ಸೀಸನ್ 10 ಆಫರ್ ಬಂದಿದ್ದೇ ತಡ, ಸ್ಟಾರ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರು ಸಾಕಷ್ಟು ಗಮನ ಸೆಳೆದರು. ಮೂರನೆ ರನ್ನರ್ ಅಪ್ ಆಗಿ ಮಿಂಚಿದರು. ಈಗ ಅವರಿಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬರುತ್ತಿವೆ.
ಮೂರು ಸಿನಿಮಾಗಳಿಗೆ ವಿಲನ್ ಆಗಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಎರಡು ದೊಡ್ಡ ಸಿನಿಮಾ ಸಹಿ ಮಾಡಿದ್ದೇನೆ. ತಮಿಳಿನ ಒಂದು ಸಿನಿಮಾ ಕೆಲಸ ನಡೆಯುತ್ತಿದೆ. ತೆಲುಗಿನ ಒಂದು ಚಿತ್ರದ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಈ ಹಿಂದಿನ ಸಂದರ್ಶನವೊಂದರಲ್ಲಿ ವಿನಯ್ ಗೌಡ ಹೇಳಿದ್ದರು. ‘ಒಂದು ಕರೆಕ್ಟ್ ಆಗಿರೋ ಚಾನ್ಸ್ ಹಾಗೂ ಪಾತ್ರ ಸಿಗಬೇಕು. ಬಂದಿರೋ ಎರಡೂ ಸಿನಿಮಾಗಳು ದೊಡ್ಡ ಸ್ಟಾರ್ಗಳ ಸಿನಿಮಾ. ಇದಾದ ಬಳಿಕ ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನ ಫ್ಯೂಚರ್ ಚೆನ್ನಾಗಿರುತ್ತೆ ಎಂದು ನಾನು ಭಾವಿಸಿದ್ದೇನೆ. ನನ್ನ ಮೇಲೆ ನನಗೆ ನಂಬಿಕೆ ಇದೆ ಎಂದಿದ್ದರು ಅವರು.
<a href=https://youtube.com/embed/s1Pv_whnUUU?autoplay=1&mute=1><img src=https://img.youtube.com/vi/s1Pv_whnUUU/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇದೀಗ ವಿನಯ್ ಗೌಡ ಅವರು ತಮ್ಮ ಬದುಕಿನ ಕರಾಳ ಅಧ್ಯಾಯವನ್ನು ತೆರೆದಿಟ್ಟಿದ್ದಾರೆ. ಅದು ಅಪ್ಪ ಮತ್ತು ಅಮ್ಮ ಪ್ರತ್ಯೇಕವಾಗಿದ್ದ ವಿಷಯ. ವಿನಯ್ ಗೌಡ ಅವರು ಎಲ್ಲಿಯೂ ತಮ್ಮ ಪರ್ಸನಲ್ ಲೈಫ್ ಬಗ್ಗೆ ಅಷ್ಟಾಗಿ ಹೇಳಿಕೊಂಡದ್ದು ಇದೆ. ಅದರಲ್ಲಿಯೂ ಅಪ್ಪ-ಅಮ್ಮ ಬೇರೆಯಾಗಿರುವ ವಿಷಯವನ್ನು ಅವರು ಪ್ರಸ್ತಾಪಿಸಿಲ್ಲ. ಇದೀಗ ಅವರು ಯೂಟ್ಯೂಬರ್ ರಾಜೇಶ್ ಗೌಡ ಅವರೊಂದಿರುವ ಸಂದರ್ಶನದಲ್ಲಿ ಕೆಲವೊಂದು ನೋವಿನ ದಿನಗಳ ಬಗ್ಗೆ ಮಾತನಾಡಿದ್ದಾರೆ.
ಅಮ್ಮ ಹೌಸ್ ವೈಫ್ ಆಗಿದ್ದರು. ಅಪ್ಪ-ಅಮ್ಮನಿಗೆ ನಾನು ಒಬ್ಬನೇ ಮಗ. ಬ್ರದರ್, ಸಿಸ್ಟರ್ ಯಾರೂ ಇಲ್ಲ. ನನ್ನ ಬಾಲ್ಯ ತುಂಬಾ ಚೆನ್ನಾಗಿಯೇ ನಡೆದಿತ್ತು. ಏನು ಕೇಳಿದ್ರೂ ಇಲ್ಲಾ ಅಂತಿರಲಿಲ್ಲ. ಅಪ್ಪ ಅಂತೂ ಒಂದು ದಿನವೂ ಬೈದದ್ದೇ ಇಲ್ಲ. ಅಮ್ಮ ಸ್ವಲ್ಪ ಸ್ಟ್ರಿಕ್ಟ್ ಆಗಿದ್ರು. ನನ್ನ ಓದು, ಬಿಹೇವಿಯರ್ ಎಲ್ಲರದ ಬಗ್ಗೆ ಅವರಿಗೆ ತುಂಬಾ ಗಮನ ಇತ್ತು. ಎಲ್ಲ ಮಕ್ಕಳಂತೆಯೇ ನಾನು ಹೈಸ್ಕೂಲ್ ವರೆಗೂ ಚೆನ್ನಾಗಿಯೇ ಇದ್ದೆ. ಆದರೆ ಕಾಲೇಜು ಮೆಟ್ಟಿಲು ಏರುತ್ತಿದ್ದಂತೆಯೇ ದೊಡ್ಡ ಆಘಾತಕಾರಿ ಘಟನೆ ನಡೆಯಿತು ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ ವಿನಯ್ ಗೌಡ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.