ನನಗೆ ಬೇಕಾದಾಗ ಬಟ್ಟೆ ಹಾಕ್ತೀನಿ, ಬೇಡ ಎಂದಾಗ ಎಲ್ಲವೂ ತೆಗಿತೀನಿ, ನಿಮಗೆ ಏನಾದರೂ ಸಮಸ್ಯೆ ಇದೆಯಾ ಎಂದ ಅನಸೂಯಾ
Jul 15, 2025, 10:13 IST
ಜಬರ್ದಸ್ತ್ ಭಾಮಾ ಆಗಿ ಭಾರೀ ಜನಪ್ರಿಯತೆ ಗಳಿಸಿದ ತೆಲುಗು ನಟಿ ಅನಸೂಯಾ. ಸ್ಮಾಲ್ ಸ್ಕ್ರೀನ್ ಗ್ಲಾಮರ್ ಈಗ ಬೆಳ್ಳಿತೆರೆಯಲ್ಲಿ ತನ್ನ ಪವರ್ ತೋರಿಸುತ್ತಿದ್ದಾರೆ. ಈ ಚೆಲುವೆ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದು ಸದಾ ಒಂದಿಲ್ಲೊಂದು ವಿಚಾರದಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಇತ್ತೀಚೆಗೆ ಮತ್ತೊಮ್ಮೆ ಸೆನ್ಸೇಷನಲ್ ಕಾಮೆಂಟ್ಸ್ ಮಾಡಿದ್ದಾರೆ.
ಅನಸೂಯಾ ಸ್ವಯಂ ಪ್ರಚಾರದಲ್ಲಿ ಎತ್ತಿದ ಕೈ. ಬರೀ ಕಮೆಂಟ್ ಮೂಲಕವೇ ಸುದ್ದಿ ಮಾಡ್ತಾರೆ. ಅನಸೂಯಾ ಸೋಷಿಯಲ್ ಮೀಡಿಯಾವನ್ನು ಸಂಪೂರ್ಣವಾಗಿ ಬಳಸಿಕೊಂಡು ಆನ್‌ಲೈನ್ ಮಾಧ್ಯಮದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಅವರು ಇದರಿಂದಲೇ ಹಾಟ್ ಟಾಪಿಕ್ ಆಗಿದ್ದಾರೆ.ಅನಸೂಯಾ ಫೋಟೋ ಹಾಕಿದರೆ ಯುವಕರು ಸಿಕ್ಕಾಪಟ್ಟೆ ಕಾಲೆಳೆಯುತ್ತಾರೆ. ಇನ್ನು ಕೆಲವರು ಈ ವಯಸ್ಸಿಗೆ ಇದೆಲ್ಲಾ ಬೇಕಾ ಎಂದು ಟ್ರೋಲ್ ಮಾಡುತ್ತಾರೆ.
<a href=https://youtube.com/embed/sPasd4Nl7P4?autoplay=1&mute=1><img src=https://img.youtube.com/vi/sPasd4Nl7P4/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಕೆಲವರು ಕಮೆಂಟ್ ಮಾಡಿ ಎರಡು ಮಕ್ಕಳ ತಾಯಿ ಎಂಬುದನ್ನು ನೀವು ಮರೆತಿದ್ದೀರಾ? ಎಂದು ಕೋಪದ ಕಾಮೆಂಟ್‌ಗಳನ್ನು ಮಾಡುತ್ತಾರೆ. ತನ್ನ ಮೇಲಿನ ಟ್ರೋಲಿಂಗ್ ಆದರೂ ಅವಮಾನ ಎದುರಿಸುವಾಗ ಅನಸೂಯಾ ಮಾತ್ರ ಪ್ರಚಾರ ಎಂದೇ ಪರಿಗಣಿಸುತ್ತಾರೆ. ಮೀಡಿಯಾ ಫೋಕಸ್ ಎಷ್ಟೇ ಕಡಿಮೆಯಾದರೂ ಒಂದಿಷ್ಟು ಪೋಸ್ಟ್ ಹಾಕುವ ಮೂಲಕ ನೆಟ್ಟಿಗರನ್ನು ಸೆಳೆಯುತ್ತಿರುವ ಅನಸೂಯಾ ಇತ್ತೀಚೆಗೆ ತಮ್ಮ ಬಟ್ಟೆಯ ಬಗ್ಗೆ ಕಮೆಂಟ್ ಮಾಡಿದವರಿಗೆ ಸಖತ್ ಕೌಂಟರ್ ಕೊಟ್ಟಿದ್ದಾರೆ.
ಯೂಟ್ಯೂಬರ್ ನಿಖಿಲ್ ಜೊತೆಗಿನ ಸಂದರ್ಶನದಲ್ಲಿ ಭಾಗವಹಿಸಿದ್ದ ಅನಸೂಯಾ ಕೋಪದಿಂದ ಕಾಮೆಂಟ್ ಮಾಡಿದ್ದಾರೆ. ನನ್ನ ಬಟ್ಟೆ ನನಗೆ ಇಷ್ಟ. ಬಿಕಿನಿ ತೊಡುತ್ತಾಳೋ, ಇಲ್ಲವೇ ಬಟ್ಟೆ ಬಿಚ್ಚುತ್ತಾಳೋ. ಯಾರೇನಂದರೂ ನನ್ನ ಬಟ್ಟೆ ನನಗೆ ಬಿಟ್ಟಿದ್ದು. ಕೇಳಲು ನೀವು ಯಾರು ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.ಕಿರುತೆರೆಯಲ್ಲಿ ಮಿಂಚಿ ಬೆಳ್ಳಿತೆರೆಯಲ್ಲಿಯೂ ತಮ್ಮ ಛಾಪು ಮೂಡಿಸುತ್ತಿದ್ದಾರೆ ಅನಸೂಯಾ. ರಂಗಸ್ಥಳಂ ಸಿನಿಮಾದಲ್ಲಿ ರಂಗಮ್ಮನ ಪಾತ್ರದಲ್ಲಿ ಸೂಪರ್ ರೆಸ್ಪಾನ್ಸ್ ಪಡೆದಿದ್ದ ಈ ಚೆಲುವೆ, ಪುಷ್ಪ 2 ಸಿನಿಮಾದಲ್ಲಿ ದಾಕ್ಷಾಯಣಿಯಾಗಿ ಇಂಪ್ರೆಸ್ ಮಾಡಿದ್ದರು. ಅವರು ಅನೇಕ ಲೇಡಿ ಓರಿಯೆಂಟೆಡ್ ಚಿತ್ರಗಳನ್ನು ಮಾಡುತ್ತಿದ್ದಾರೆ.