'ಮೋದಿ ಮೋದಿ ಅಂದ್ರೆ ಕಪಾಳಕ್ಕೆ ಬೀಳುತ್ರೆ; ಎಚ್ಚರಿಕೆ ಕೊಟ್ಟ ಶಿವಾರಾಜ್
Mar 26, 2024, 10:13 IST
ಯುವಕರು ಮೋದಿ ಮೋದಿ ಎಂದರೆ ಕಪಾಳಕ್ಕೆ ಹೊಡಿಬೇಕು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಕೊಪ್ಪಳದ ಕಾರಟಗಿಯಲ್ಲಿ ಭಾನುವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದಿದ್ದರು. ಹಾಗೆ ನೋಡಿದರೆ 10 ವರ್ಷದಲ್ಲಿ 20 ಕೋಟಿ ಉದ್ಯೋಗ ನೀಡಬೇಕಿತ್ತು.
ಏನಾಗಿದೆ ಇವತ್ತು ಉದ್ಯೋಗ ನೀಡಿದ್ದಾರಾ? ಇಲ್ಲವಲ್ಲ. ಆದರೂ ಇನ್ನೂ ಯುವಕರು, ವಿದ್ಯಾರ್ಥಿಗಳು ಮೋದಿ ಮೋದಿ ಎನ್ನುತ್ತಾರೆ ಎಂದರು. ಬಿಜೆಪಿಯವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಇನ್ನೂ 5 -10 ವರ್ಷ ಸುಳ್ಳು ಹೇಳ್ತಾರೆ. ಈ ಸುಳ್ಳು ಕೇಳಿಕೊಂಡು ಹೋಗಬೇಕಾ? ದೇಶದಲ್ಲಿ 100 ಸ್ಮಾರ್ಟ್ ಸಿಟಿ ಮಾಡುತ್ತೇವೆ ಎಂದಿದ್ದರು.
ಆದರೆ, ಏನು ಮಾಡಿದ್ದಾರೆ? ಸ್ಮಾರ್ಟ್ ಸಿಟಿ ಮಾಡಲಿಲ್ಲ. ಅದರ ಬದಲಾಗಿ ಅವರು ಸ್ಮಾರ್ಟ್ ಆದರು. ಈಗ ಸಮುದ್ರದಲ್ಲಿ ಹೋಗಿ ನವಿಲುಗರಿಯಿಂದ ಪೂಜೆ ಮಾಡುತ್ತಿದ್ದಾರೆ. ಇವರ ಆಟಗಳು ಇನ್ಮುಂದೆ ನಡೆಯೋದಿಲ್ಲ. ಕೆಲವು ರಾಜ್ಯದಲ್ಲಿ ಬಿಜೆಪಿಯವರು ಹೋದರೆ ಹೊಡಿಯುತ್ತಾರೆ. ದೇಶದಲ್ಲಿ ಮಿಜೋರಾಂ ಸೇರಿ ಕೆಲವು ರಾಜ್ಯಗಳಲ್ಲಿ ಅವರಿಗೆ ನೆಲೆ ಇಲ್ಲ. ಇವರ ಸುಳ್ಳುಗಳ ನಾಟಕಗಳು ಎಲ್ಲರಿಗೂ ಗೊತ್ತಾಗಿವೆ ಎಂದು ಬಿಜೆಪಿಯನ್ನ ಜರಿದರು.
<a href=https://youtube.com/embed/IrRm7w4zg-4?autoplay=1&mute=1><img src=https://img.youtube.com/vi/IrRm7w4zg-4/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಬಿಜೆಪಿಯವರು ಮೋಸ ಮಾಡುತ್ತಾರೆ. ಅದಕ್ಕೆ ನಾನೇ ಉದಾಹರಣೆ. ಈ ಹಿಂದೆ ಕನಕಗಿರಿಯಿಂದ ಪಕ್ಷೇತರನಾಗಿ ಶಾಸಕನಾಗಿ ಆಯ್ಕೆಯಾದ ನನ್ನನ್ನು ಕರೆದುಕೊಂಡು ಹೋಗಿ ಸರ್ಕಾರ ಮಾಡಿದರು. ಆದರೆ, ಆಮೇಲೆ ಅನರ್ಹಗೊಳಿಸಿದರು. ಆಗ ನಾನು ಅವರಿಂದ ಮೋಸ ಹೋದೆ. ಆದರೆ, ಈಗ ಸಂಗಣ್ಣ ಕರಡಿ ಅವರು ಮೋಸ ಹೋದರು.
ಸಂಸದ ಸಂಗಣ್ಣ ಹತ್ತು ವರ್ಷಗಳ ಕಾಲ ಮೋದಿ ಮೋದಿ ಎಂದು ಹೊಗಳಿದರು. ಆದರೂ ಅವರಿಗೆ ಈ ಬಾರಿ ಟಿಕೆಟ್ ಕೊಡಲಿಲ್ಲ. ಪಾಪ ಸಂಗಣ್ಣ ಕರಡಿ ಒಳ್ಳೆಯ ಮನುಷ್ಯ. ಅವರಿಗೆ ಟಿಕೆಟ್ ನೀಡದೇ ಮನೆಯಲ್ಲಿ ಕೂಡಿಸಿದ್ದಾರೆ. ಈಗ ಕಾಂಗ್ರೆಸ್ ಅಭ್ಯರ್ಥಿ ರಾಜಣ್ಣ ಗೆದ್ದಂತೆ ಎಂದು ಶಿವರಾಜ ತಂಗಡಗಿ ಅವರು ಹೇಳಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.