ಈ ರೀತಿ ಉಪಾಯ ಮಾಡಿದರೆ ನಿಮ್ಮ ಗ್ಯಾಸ್ ನಾಲ್ಕು ತಿಂಗಳು ಉಳಿತಾಯವಾಗುತ್ತದೆ

 

ಸಿಲಿಂಡರ್ ಗ್ಯಾಸ್ ಬೆಲೆ ದಿನೇ ದಿನೇ ಹೆಚ್ಚಾಗುತ್ತಾ ಹೋಗುತ್ತಿರುವುದರಿಂದ, ನಮ್ಮಂತಹ ಜನ ಸಾಮಾನ್ಯರ ಮೇಲೆ ತೀವ್ರ ಹೊಡೆತ ಬೀಳುತ್ತಿದೆ. ಹೀಗಾಗಿ ಅಡುಗೆಗೆ ಮಾಡಲು ಹೆಚ್ಚಾಗಿ ಗ್ಯಾಸ್ ಬಳಕೆ ಮಾಡುವ ಜನರು ಆದಷ್ಟು ಅಡುಗೆ ಅನಿಲವನ್ನು ಉಳಿತಾಯ ಮಾಡಲು ಪ್ರಯತ್ನಿಸಬೇಕು. ಇದರಿಂದ ಹಣದ ಉಳಿತಾಯದ ಜೊತೆಗೆ, ನಮ್ಮ ತಿಂಗಳ ಖರ್ಚು ವೆಚ್ಚಗಳ ಆರ್ಥಿಕ ಹೊರೆ ಕೂಡ ಕಡಿಮೆ ಆಗುವುದು.

ಗ್ಯಾಸ್ ಬರ್ನರ್‌ನ್ನು ಸರಿಯಗಿ ಶುಚಿ ಮಾಡದೆ ಇದ್ದರೆ ಆಗ, ಪೈಪ್ ಮುಖಾಂತರ ಗ್ಯಾಸ್ ಸರಿಯಾಗಿ ಬರದೇ ಬ್ಲಾಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ಬರ್ನರ್ ಕೂಡ ಸರಿಯಾಗಿ ಉರಿಯದು. ಮೊದಲಿಗೆ ಬರ್ನರ್ ನಲ್ಲಿ ಹಳದಿ ಅಥವಾ ಕಿತ್ತಳೆ ಬೆಂಕಿಯು ಬರುತ್ತಿದೆಯಾ ಅಥವಾ ಬೆಂಕಿಯು ಅಸ್ತವ್ಯಸ್ತವಾಗಿ ಇದೆಯಾ ಎಂದು ನೋಡಿ. ಒಂದು ವೇಳೆ ಬೆಂಕಿ ಈ ಬಣ್ಣಕ್ಕೆ ತಿರುಗಿದ್ದರೆ, ಬರ್ನರ್ ನಲ್ಲಿ ಸಮಸ್ಯೆ ಇದೆಯೆಂದರ್ಥ! ಹೀಗಿದ್ದರೆ ಆಗ ನೀವು ಇದನ್ನು ತೆಗೆದು ಶುಚಿ ಮಾಡಬೇಕು ಗ್ಯಾಸ್ ನ್ನು ಉಳಿತಾಯ ಮಾಡಲು ನಿಯಮಿತವಾಗಿ ಬರ್ನರ್ ನ್ನು ಶುಚಿ ಮಾಡುತ್ತಲಿರಬೇಕು. 

ಬೆಂಕಿಯ ಬಣ್ಣವನ್ನು ಗಮನಿಸಿ ಮತ್ತು ಅದು ನೀಲಿ ಇದ್ದರೆ ಆಗ ಸರಿಯಾಗಿದೆ ಎಂದು ಹೇಳಬಹುದು. ಎರಡು ವಾರಕ್ಕೆ ಒಮ್ಮೆ ಈ ಗ್ಯಾಸ್ ಬರ್ನರ್‌ನ್ನು ತೆಗೆದು ಸರಿಯಾಗಿ ಶುಚಿ ಮಾಡಿದರೆ ಒಳ್ಳೆಯದು. ಗ್ಯಾಸ್ ಬರ್ನರ್‌‌ನ ಬೆಂಕಿಯ ಬಣ್ಣವನ್ನು ಗಮನಿಸಿ, ಅದು ನೀಲಿ ಇದ್ದರೆ ಆಗ ಸರಿಯಾಗಿದೆ ಎಂದು ಹೇಳಬಹುದು. ಒಂದು ವೇಳೆ ಅದು ಕೆಂಪು, ಹಳದಿ ಅಥವಾ ಕಿತ್ತಳೆ ಬಣ್ಣದಲ್ಲಿದ್ದರೆ, ಆಗ ಅದು ಸರಿಯಾಗಿ ಉರಿಯುತ್ತಿಲ್ಲ ಎಂದರ್ಥ.

ಕೆಲವರು ಕುಕ್ಕರ್, ಪಾತ್ರೆ ಇತ್ಯಾದಿಗಳನ್ನು ತೊಳೆದು ನೇರವಾಗಿ ಅಡುಗೆ ಮಾಡುವುದಕ್ಕಾಗಿ ಗ್ಯಾಸ್ ಒಲೆಯ ಮೇಲೆ ಇಟ್ಟುಬಿಡುವರು. ಈ ಸಮಯದಲ್ಲಿ ಇದರಲ್ಲಿರುವ ಪದಾರ್ಥಗಳು ಬಿಸಿಯಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುವುದರಿಂದ ಗ್ಯಾಸ್ ವೆಚ್ಚವಾಗುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ಪಾತ್ರೆಯನ್ನು ತೊಳೆದ ಬಳಿಕ, ಸ್ವಚ್ಛವಾಗಿರುವ ಬಟ್ಟೆಯಿಂದ ಒರೆಸಿಕೊಳ್ಳಿ. ಆಮೇಲೆ ಅಡುಗೆಗೆ ಬಳಸಿ ಇದರಿಂದ ಪಾತ್ರೆ ಬೇಗ ಬಿಸಿ ಆಗುವುದು ಹಾಗೂ ಗ್ಯಾಸ್ ವೆಚ್ಚವಾಗುವುದು ತಪ್ಪುವುದು.

ಪೈಪ್ ಮತ್ತು ರೆಗ್ಯೂಲೇಟರ್‌ನಲ್ಲಿ ಗ್ಯಾಸ್ ಲೀಕ್ ಆಗುತ್ತಿದೆಯಾ ಎಂಬುದನ್ನು ಮೊದಲು ಪತ್ತೆ ಹಚ್ಚಿ. ಗ್ಯಾಸ್ ಸಿಲಿಂಡರ್‌ ಹಾಗೂ ಇದರ ಪೈಪ್‌ನ ಸುರಕ್ಷತೆಯಷ್ಟೇ ಇದರ ರೆಗ್ಯೂಲೇಟರ್ ಬಗ್ಗೆ ಕೂಡ, ಅಷ್ಟೇ ಕಾಳಜಿ ವಹಿಸಬೇಕು ಕೆಲವೊಮ್ಮೆ ರೆಗ್ಯೂಲೇಟರ್ ನ ಕಾರಣದಿಂದ ಕೂಡ ಸೋರಿಕೆ ಉಂಟಾಗಬಹುದು. ಇದರಿಂದ ಸರಿಯಾದ ನಿರ್ವಹಣೆಯು ಅಗತ್ಯ. ಕನಿಷ್ಠಪಕ್ಷ ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೆ ಒಮ್ಮೆ ಸಿಲಿಂಡರ್ ಮತ್ತು ಸ್ಟವ್ ಮಧ್ಯ ಭಾಗದಲ್ಲಿರುವ ರಬ್ಬರ್ ಪೈಪ್ ಚೆಕ್ ಮಾಡಿಸಿಕೊಳ್ಳಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.