ತರಕಾರಿ ಬದಲು, ತನ್ನ ಸ್ವಂತ ಮಗುವನ್ನೇ ರೆಫ್ರಿಜರೇಟರ್ ನಲ್ಲಿಟ್ಟ ತಾಯಿ; ಬೆಚ್ಚಿಬಿದ್ದ ಕರುನಾಡು

 

ಕೆಲವು ವಿಲಕ್ಷಣ ವರ್ತನೆಗಳು ಸೋಷಿಯಲ್ ಮೀಡಿಯಾದಲ್ಲಿ ಬಹುಬೇಗ ಗಮನಸೆಳೆಯುತ್ತವೆ. ಅಂತಹ ವಿಡಿಯೋಗಳು ವೈರಲ್ ಆಗುತ್ತವೆ. ಇದಕ್ಕೆ ಹೊಸ ಸೇರ್ಪಡೆ ಈ ತಾಯಿಯ ಕೃತ್ಯ. ಮೊಬೈಲ್‌ ಫೋನ್‌ನಲ್ಲಿ ಮಾತನಾಡುತ್ತ, ಬಾಕಿ ಉಳಿದ ತರಕಾರಿಯನ್ನು ರೆಫ್ರಿಜರೇಟರ್ ಒಳಗೆ ಇಡುವ ಬದಲು ಮಗುವನ್ನೇ ಇಟ್ಟ ವರ್ತನೆ ಮೈ ನಡುಗಿಸುವಂತೆ ಇದೆ.

ಹೌದು ಈಗ ಎಲ್ಲೆಲ್ಲೂ ಮೊಬೈಲ್ ಯುಗ. ಊಟ ಮಾಡುವಾಗ, ತಿಂಡಿ ತಿನ್ನುವಾಗ ಕೂಡಾ ಮೊಬೈಲ್ ಬಳಸುವವರಿದ್ದಾರೆ. ಅಷ್ಟೇ ಅಲ್ಲದೇ ಮೊಬೈಲ್ ಫೋನ್ ಬಿಟ್ಟು ಒಂದು ಕ್ಷಣವೂ ಇರಲಾರದವರಿದ್ದಾರೆ.ಮೊಬೈಲ್‌ ಫೋನ್‌, ಮಾತಿಗಿಳಿದರೆ ಹೊರ ಜಗತ್ತಿನ ಪರಿವೆಯೇ ಇಲ್ಲ ಎಂಬ ಟೀಕೆಗೆ ಪೂರಕವಾಗಿದೆ ಆ ತಾಯಿಯ ವರ್ತನೆ.

ವೈರಲ್ ವಿಡಿಯೋವನ್ನು ಎಕ್ಸ್‌ನಲ್ಲಿ ಶೇರ್ ಮಾಡಲಾಗಿದ್ದು, ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಈ ದೃಶ್ಯ ನಿಜವಾದುದಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ವೈರಲ್ ಆಗಿರುವ ವಿಡಿಯೋ ಒಂದು ನಿಮಿಷ 7 ಸೆಕೆಂಡ್‌ ಅವಧಿಯದ್ದು. ಅದೊಂದು ರೀತಿ ಜಾಗೃತಿ ಮೂಡಿಸುವ ವಿಡಿಯೋದಂತೆಯೇ ಕಾಣುತ್ತಿದೆಯಾದರೂ  ಕಾರಣ ಮಗುವನ್ನು ಅವರು ಬಳಸಿಕೊಂಡ ರೀತಿ ಒಂದು ಕ್ಷಣ ಮೈ ನಡುಗುವಂತೆ ಮಾಡುತ್ತದೆ.

ಮೊಬೈಲ್ ಫೋನ್ ಅಲ್ಲಿ ಮಾತಾಡುತ್ತಾ ತಾಯಿ ತರಕಾರಿ ಕಟ್ ಮಾಡಿ ಫ್ರೀಜ್ ಅಲ್ಲಿ ಹಾಕಿಡುತ್ತಿರುತ್ತಾಳೆ. ಹಾಗೆ ಮಾಡುತ್ತ ಅಲ್ಲಿಯೇ ಆಟ ಅಡಿಕೊಂಡಿದ್ದ ಮಗುವನ್ನು ಕೂಡಾ ಫ್ರಿಜ್ ಅಲ್ಲಿ ಹಾಕಿ ಬಾಗಿಲು ಮುಚ್ಚುತ್ತಾಳೆ. ಕೆಲ ಸಮಯದ ನಂತರ ಗಂಡ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಾನೆ ಆಗ ಮಗುವಿನ ಬಗ್ಗೆ ಕೇಳಿದಾಗ ಎಲ್ಲೆಡೆ ಹುಡುಕ ತೊಡಗುತ್ತಾಳೆ. 

ಆಗ ಫ್ರಿಜ್ ನಲ್ಲಿ ಅಳುವ ಸದ್ದು ಕೇಳಿ ಬಾಗಿಲು ತೆರೆದು ನೋಡಿದರೆ ಮಗು ಅಲ್ಲಿರುತ್ತದೆ. ಇದು ಜಾಗೃತಿ ಮೂಡಿಸುವ ವೀಡಿಯೊ ಆಗಿರುತ್ತದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.