ವೇದಿಕೆಯಲ್ಲಿ ದೈವಕ್ಕೆ ಅಪಮಾನ, ರೊಚ್ಚಿಗೆದ್ದ ತುಳುವನಿಂದ ಶಿಕ್ಷಕಿಗೆ ಕ್ಲಾಸ್
ಇತ್ತೀಚಿಗೆ ಎಲ್ಲೆಡೆ ದೈವ ಆರಾಧಾನೆಯ ದೃಶ್ಯ ಕಾಮನ್ ಆಗಿದ್ದೂ ಅದರಲ್ಲಂತು ಕಾಂತಾರ ತೆರೆ ಕಂಡಮೇಲೆ ಶಾಲೆ ಕಾಲೇಜು ಗಳಲ್ಲಿ ವರಾಹ ರೂಪಂ ಹಾಡಿಗೆ ಹೆಜ್ಜೆ ಹಾಕಿಸಿ ಮಕ್ಕಳನ್ನು ಕುಣಿಸುವುದು ಸಾಮಾನ್ಯವಾಗಿದೆ. ಅದರಲ್ಲೂ ಅದರ ಬಗ್ಗೆ ಗಂದ ಗಾಳಿ ಇಲ್ಲದ ಶಿಕ್ಷಕರು ವಿದ್ಯಾರ್ಥಿಗಳ ಕುಣಿಸುತ್ತಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಇನ್ನು ಇತ್ತೀಚಿಗೆ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭ ಒಂದರಲ್ಲಿ ಮಕ್ಕಳಿಗೆ ಪಂಜುರ್ಲಿ ವೇಷ ಭೂಷಣ ಹಾಕಿ ವರಾಹ ರೂಪಂ ಹಾಡಿಗೆ ಹೆಜ್ಜೆ ಹಾಕಿಸಿದ್ದಾರೆ. ಅದನ್ನು ಕಂಡ ತಳು ನಾಡಿನ ರೋಷನ್ ರೊನಾಲ್ಡ್ ಅವರು ಫೋನ್ ಮಾಡಿ ಶಿಕ್ಷಕಿಯನ್ನು ನೀವು ಮಾಡಿದ್ದು ಸರಿಯೇ ಎಂಬ ಪ್ರಶ್ನೆ ಮಾಡಿದ್ದಾರೆ. ಆದರೆ ಈ ಬಗ್ಗೆ ಶಿಕ್ಷಕಿ ಕೂಡ ತನಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಎಲ್ಲರೂ ಮಾಡಿಸಿದ್ದರು ಹಾಗಾಗಿ ನಾವು ಸಹ ಮಾಡಿದ್ದೇವೆ ಎಂದಿದ್ದಾರೆ.
ಯಕ್ಷಗಾನ ಮತ್ತು ವರಾಹರೂಪಂ ಹಾಡು ಎಲ್ಲ ಒಂದೇ ಅಂದುಕೊಂಡಿದ್ದೆ. ಹಾಗಾಗಿ ಮೇಕಪ್ ಮಾಡಿಕೊಂಡು ನೃತ್ಯ ಮಾಡಿದ್ದೆ. ಆದರೆ, ನಾನು ಇನ್‌ಸ್ಟಾದಲ್ಲಿ ಹಾಕುತ್ತಿದ್ದಂತೆಯೇ ದೊಡ್ಡ ಮಟ್ಟದಲ್ಲಿ ಆಕ್ರೋಶ ಕೇಳಿಬಂದಾಗ ಭಯವಾಯಿತು. ಕೂಡಲೇ ಡಿಲೀಟ್ ಮಾಡಿದೆ. ಆದರೂ ನಾನು ತಪ್ಪು ಮಾಡಿದ್ದೇನೆ. ಮಾಡಬಾರದಿತ್ತು ಅಂತೆಲ್ಲ ಅನಿಸ್ತಾ ಇತ್ತು. ನನ್ನಿಂದ ದೊಡ್ಡ ತಪ್ಪಾಗಿರುವುದನ್ನು ಅರ್ಥ ಮಾಡಿಕೊಂಡೆ. ತುಂಬಾ ಜನರಿಗೆ ನೋವಾಗಿದೆ ಎನ್ನುವುದು ಗೊತ್ತಾಯಿತು. ಹೀಗಾಗಿ ಯಾರಿಗೂ ನೋವಾಗಬಾರದು ಎಂಬ ಕಾರಣಕ್ಕಾಗಿ ಕ್ಷಮೆ ಯಾಚಿಸಿದ್ದೇನೆ.
ನಾನು ಮಾಡಿದ ತಪ್ಪಿಗಾಗಿ ತಪ್ಪು ಕಾಣಿಕೆ ಹಾಕುತ್ತೇನೆ ಎಂದು ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದಾರೆ.ದೈವಾರಾಧನೆ ನಮ್ಮ ಸಮಾಜದ ಕರ್ತವ್ಯ. ಸೀಮಿತ ಸಮಾಜದವರು ಮಾತ್ರ ದೈವ ನರ್ತನ ಮಾಡಬೇಕು. ಈಗ ಚದ್ಮವೇಷದಂತೆ ಪ್ರತಿಯೊಬ್ಬರು ವೇಷ ಹಾಕಿಕೊಂಡು ಮಾಡುತ್ತಿದ್ದಾರೆ. ಈ ರೀತಿಯ ಘಟನೆಗಳಿಂದ ದೈವಾರಾಧನೆಗೆ ಅಪಮಾನ ಮಾಡಲಾಗುತ್ತಿದೆ. ಸಾಂಪ್ರದಾಯಿಕವಾಗಿ ದೈವ ನರ್ತನ ಸೇವೆ ನಡೆಯುವಲ್ಲಿಯೇ ಅದು ನಡೆಯಬೇಕು. ಸಿನಿಮಾ, ಧಾರವಾಹಿ, ಶಾಲೆ ಕಾಲೇಜುಗಳಲ್ಲಿ ವೇದಿಕೆಗಳಲ್ಲಿ ದೈವಾರಾಧನೆ ಪ್ರದರ್ಶನ ಸಲ್ಲದು. ನಾವು ಆ ರೀತಿಯ ಪ್ರದರ್ಶನಗಳಿಗೆ ಅವಕಾಶ ನೀಡೋದಿಲ್ಲ. ಇದರ ವಿರುದ್ಧ ನಾವು ಹೋರಾಟ ನಡೆಸುತ್ತೇವೆ. ಸಿನಿಮಾ, ಧಾರವಾಹಿ ಯಾವುದರಲ್ಲೂ ದೈವಾರಾಧನೆಯನ್ನ ಬಳಸಿಕೊಳ್ಳಬಾರದು ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.