ಇಸ್ರೇಲ್ ಮುಗಿಸಲು ಇರಾನ್ ಸಂಚು, ಪ್ರಧಾನಿಗೆ ಚಳಿ ಬಿಡಿಸಿದ ಪಬ್ಲಿಕ್ ಟಿವಿ ರಂಗಣ್ಣ
Jun 20, 2025, 10:37 IST

ಇಸ್ರೇಲ್ ವಿರುದ್ದ ಇದೀಗ ತೊಡೆತಟ್ಟಿ ನಿಂತಿರುವ ಇರಾನ್ ತನ್ನ ಬಳಿ ಇರುವ ಎಲ್ಲಾ ರೀತಿ ಅಸ್ತ್ರಗಳನ್ನು ಪ್ರಯೋಗ ಮಾಡುತ್ತಾ, ಶತ್ರು ಪಡೆಯನ್ನ ಸರ್ವನಾಶ ಮಾಡುತ್ತೇವೆ ಅಂತಿದೆ. ಅದೇ ರೀತಿಯಾಗಿ ಮತ್ತೊಂದು ಕಡೆ ಇಸ್ರೇಲ್ ಕೂಡ ಭಾರಿ ಭರ್ಜರಿ ದಾಳಿಯನ್ನ ನಡೆಸುತ್ತಾ ತೊಡೆತಟ್ಟಿದೆ. ಹೀಗೆ ಇಸ್ರೇಲ್ & ಇರಾನ್ ನಡುವೆ ಭಾರಿ ದೊಡ್ಡ ಕಲಹ ಏರ್ಪಟ್ಟಿದ್ದು ಫೈಟ್ ಜೋರಾಗಿದೆ. ನೋಡ ನೋಡುತ್ತಲೇ ಇಸ್ರೇಲ್ & ಇರಾನ್ ನೆಲದಲ್ಲಿ ಗಗನಚುಂಬಿ ಕಟ್ಟಡಗಳು ಕೂಡ ಪೀಸ್ ಪೀಸ್ ಆಗುತ್ತಿವೆ.
ಇರಾನ್ ಪರಮಾಣು ಬಾಂಬ್ ಸಿದ್ಧಪಡಿಸುತ್ತಿದೆ ಎಂದು ಆರೋಪ ಮಾಡಿ ಇಸ್ರೇಲ್ ಅಟ್ಯಾಕ್ ಶುರು ಮಾಡಿತ್ತು. ಹೀಗಿದ್ದಾಗ ಇರಾನ್ ಕೂಡ ಇಸ್ರೇಲ್ ಸೇನೆಗೆ ಆಘಾತ ನೀಡುತ್ತಿದ್ದು, ಈ ರೀತಿ ಇಬ್ಬರೂ ಒಬ್ಬರ ಮೇಲೆ ಮತ್ತೊಬ್ಬರು ಭಾರಿ ದೊಡ್ಡ ಮಟ್ಟದಲ್ಲಿ ಅಸ್ತ್ರಗಳನ್ನ ಬಳಕೆ ಮಾಡಿ ಬಡಿದಾಡುತ್ತಿದ್ದಾರೆ. ಈಗಿನ ಪರಿಸ್ಥಿತಿ ನೋಡಿದರೆ ಇನ್ನು ಕೆಲವು ದಿನಗಳ ಕಾಲ ಈ ಯುದ್ಧ ಮುಂದುವರಿದರೆ, ಲಕ್ಷಾಂತರ ಜನರ ಜೀವಕ್ಕೆ ಕುತ್ತು ಎದುರಾಗುವುದು ಗ್ಯಾರಂಟಿ. ಹೀಗಾಗಿಯೇ ಯುದ್ಧ ನಿಲ್ಲಿಸಲು ಪ್ರಯತ್ನ ಆರಂಭವಾಗಿದೆ.
<a href=https://youtube.com/embed/Ftsk3YwAeBk?autoplay=1&mute=1><img src=https://img.youtube.com/vi/Ftsk3YwAeBk/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಹೌದು, ಇಸ್ರೇಲ್ & ಇರಾನ್ ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದರು ಅದು ಪ್ರಯೋಜನಕ್ಕೆ ಬರುತ್ತಿಲ್ಲ. ವಿಶ್ವಸಂಸ್ಥೆ ಕೂಡ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿ, ಸಮಾಧಾನ ಹೇಳುವ ಚಿಂತನೆ ಮಾಡುತ್ತಿದೆ. ಹೀಗಿದ್ದರೂ ಇಸ್ರೇಲ್ ದೇಶವನ್ನ ಒಪ್ಪಿಸುವುದೇ ಇದೀಗ ಭಾರಿ ದೊಡ್ಡ ಸವಾಲಿನ ಕೆಲಸವಾಗಿದೆ. ಇಸ್ರೇಲ್ ಸೇನೆಯನ್ನ ಯುದ್ಧ ನಿಲ್ಲಿಸಲು, ಆ ಮೂಲಕ ಸೈಲೆಂಟ್ ಆಗುವಂತೆ ಮಾಡಲು ಒಪ್ಪಿಸುವುದೇ ಇದೀಗ ದೊಡ್ಡ ಸರ್ಕಸ್ ಆಗಿ ಹೋಗಿದೆ.
ಇರಾನ್ ಜನರನ್ನು ಉದ್ದೇಶಿಸಿ ತನ್ನ ರಹಸ್ಯ ಅಡಗುತಾಣದಿಂದ ಶತ್ರುಗಳಿಗೆ ಸಂದೇಶವನ್ನು ಕಳುಹಿಸಿರುವ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ, ಟೆಹ್ರಾನ್ ಎಂದಿಗೂ ಶರಣಾಗುವುದಿಲ್ಲ” ಎಂದು ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೀಡಿದ ಸ್ಪಷ್ಟ ಸಂದೇಶದಲ್ಲಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ, ಇರಾನ್ ಶರಣಾಗುವುದಿಲ್ಲ ಎಂದು ಹೇಳಿದ್ದಾರೆ ಮತ್ತು ಯಾವುದೇ ಅಮೇರಿಕನ್ ಮಿಲಿಟರಿ ಹಸ್ತಕ್ಷೇಪವು ಸರಿಪಡಿಸಲಾಗದ ಹಾನಿಯನ್ನು ಉಂಟು ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.