ನಿವೇದಿತಾ ಗೌಡ ಸೌಂದಯ೯ಕ್ಕೆ ಕಾರಣ ಇದೇನಾ, ಈ ಮಾಹಿತಿ ನಿಜಾನಾ

 
 ನಿವೇದಿತಾ ಗೌಡ ಅವರು ಬಿಗ್‌ಬಾಸ್ ಬಳಿಕ ರೀಲ್ಸ್‌ ಮಾಡಿಕೊಂಡೇ ಕಾಲ ಕಳೆಯುತ್ತಿದ್ದವರು. ಚಂದನ್‌ ಶೆಟ್ಟಿ ಜೊತೆಗೆ ಡಿವೋರ್ಸ್ ಬಳಿಕ ನಟಿ ಟ್ರೋಲ್‌ಗೆ ಒಳಗಾಗುತ್ತಲೇ ಇನ್ನಷ್ಟು ಹೆಸರು ಮಾಡಿದ್ದಾರೆ. ಇದೀಗ ನಟಿಯ ಅದೃಷ್ಟ ಖುಲಾಯಿಸಿದಂತೆ ಕಾಣುತ್ತಿದೆ. ಹಲವು ಆಫರ್‌ಗಳು ಬರುತ್ತಿವೆ. ಕೆಲವು ಜಾಹೀರಾತು ಕಂಪೆನಿಗಳೂ ನಟಿಗೆ ಬೇಡಿಕೆ ಇಟ್ಟಿರುವ ನಡುವೆಯೇ ಕಲರ್ಸ್ ವಾಹಿನಿಯಿಂದಲೂ ಬೇಡಿಕೆ ಬಂದಿದೆ. 
ಈ ವಾಹಿನಿಯ ಅನುಬಂಧ ಅವಾರ್ಡ್​ಗೆ ಆ್ಯಂಕರ್​ ಆಗಿದ್ದಾರೆ ನಿವೇದಿತಾ. ಇದಾಗಲೇ ಹಲವು ಟಿ.ವಿ ಸೀರಿಯಲ್​ ತಂಡದ ಜೊತೆ ಮಾತನಾಡಿದ್ದು ಅದರ ಪ್ರೊಮೋಗಳು ಒಂದೊಂದಾಗಿ ಬಿಡುಗಡೆಯಾಗುತ್ತಿವೆ. ಇದು ಬಿಡುಡೆಯಾಗುತ್ತಲೇ ಅದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಟ್ರೋಲ್​ ಆಗುತ್ತಿದೆ. ಒಟ್ಟಿನಲ್ಲಿ ನಿವೇದಿತಾ ಎಂದರೆ ಟ್ರೋಲ್​ಗೆ ಇನ್ನೊಂದು ಹೆಸರು ಎನ್ನುವಂತಾಗಿದೆ. ಈ ಟ್ರೋಲ್​ಗಳಿಂದಲೇ ತಾವು ಈ ಪರಿಯಲ್ಲಿ ಫೇಮಸ್​ ಆಗ್ತಿರೋದು ಎನ್ನುವ ಸತ್ಯ ನಟಿಗೂ ಗೊತ್ತಾಗಿದೆ. ಅದಕ್ಕಾಗಿಯೇ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಮುನ್ನುಗ್ಗುತ್ತಿದ್ದಾರೆ.  <a href=https://youtube.com/embed/mkDsCmjcTLY?autoplay=1&mute=1><img src=https://img.youtube.com/vi/mkDsCmjcTLY/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇದೀಗ ಪ್ರೀತಿ, ಹೃದಯ ಎಂಬೆಲ್ಲಾ ಅರ್ಥ ಬರುವ ರೀಲ್ಸ್​ ಮಾಡಿದ್ದರಿಂದ ನಿವೇದಿತಾ ಬಾಳಲ್ಲಿ ಮತ್ತೊಬ್ಬರ ಎಂಟ್ರಿ ಆಗಿದೆ ಎಂದೇ ಹೇಳಲಾಗುತ್ತಿದ್ದು, ಯಾರೀತ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ನಿವೇದಿತಾ  ಮಬ್ಬುಕತ್ತಲಿನಲ್ಲಿ ವಿಚಿತ್ರವಾಗಿ ಕಾಣಿಸ್ತಿರೋ ವಿಡಿಯೋ ಶೇರ್​ ಮಾಡಿಕೊಂಡಿದ್ದರು.  ಇದರಲ್ಲಿ ಈಕೆ  ಕೂದಲನ್ನು ಹಿಡಿದುಕೊಂಡು ಜಗ್ಗುತ್ತಲೇ ಸ್ಟೆಪ್​ ಹಾಕಿದ್ದರು.  ನಿನ್ನೆಯವರೆಗೂ ಚೆನ್ನಾಗಿದ್ದ ನಟಿಗೆ ಇದೇನಾಯ್ತು ಎಂದು ಫ್ಯಾನ್ಸ್​ ಗಾಬರಿ ಬಿದ್ದಿದ್ದರು. ಇದರ ಬಳಿಕ ನಿವೇದಿತಾ ಮತ್ತಷ್ಟು ರೀಲ್ಸ್​ ಹಾಕಿರುವ ಕಾರಣದಿಂದ ಈಕೆ ಚೆನ್ನಾಗಿಯೇ ಇದ್ದಾರೆ ಎನ್ನುವುದು ಅಭಿಮಾನಿಗಳ ಸಮಾಧಾನ.
ಅಷ್ಟಕ್ಕೂ ನಿವೇದಿತಾ ಅವರಿಗೆ ಈಗ 26 ವರ್ಷ ವಯಸ್ಸು. ಇದಾಗಲೇ ಮದುವೆಯಾಗಿ ಚಂದನ್‌ ಶೆಟ್ಟಿ ಜೊತೆ ಡಿವೋರ್ಸ್ ಕೂಡ ಪಡೆದುಕೊಂಡಾಗಿದೆ. ನಿವೇದಿತಾ ಈಗಲೂ ನೋಡಲು ಮಾತ್ರವಲ್ಲದೇ ಅವರ ನಡವಳಿಕೆಯೂ ಇನ್ನೂ ಚಿಕ್ಕ ಮಕ್ಕಳಂತೆಯೇ ಇದೆ. ಇನ್ನು ಜೀರೋ ಸೈಜ್‌ ಎನ್ನುವಂಥ ಶರೀರ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ದೇಹ ಪ್ರದರ್ಶನ ಹೆಚ್ಚಾಗುತ್ತಿದ್ದು, ಅದನ್ನು ನೋಡಿದವರ ಕಣ್ಣು ಕುಕ್ಕಿದೆ. ಪ್ಲಾಸ್ಟಿಕ್‌ ಸರ್ಜರಿ ಯಾವಾಗ ಮಾಡಿಸಿಕೊಂಡದ್ದು ಎಂದುಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ, ಸ್ವಲ್ಪ ಫೇಮಸ್‌ ಆದ ಸೆಲೆಬ್ರಿಟಿಗಳು ಏನು ಮಾಡಿದರೂ ತಪ್ಪು ಎನ್ನುವ ಸ್ಥಿತಿ ಉಂಟಾಗಿದೆ. ಇದಕ್ಕಾಗಿ ಅವರು ಟ್ರೋಲ್‌ಗೆ ಒಳಗಾಗುತ್ತಲೇ ಇರಬೇಕಿದೆ.  
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.