ಕೆಲವರು ಒಳಗಡೆ ಇದ್ರೆನೇ ಒಳ್ಳೆಯದ್ದು; ದುನಿಯಾ ವಿಜಯ್
Aug 21, 2024, 16:44 IST
ಕನ್ನಡ ಚಿತ್ರರಂಗದ ಒಂಟಿ ಸಲಗ ದುನಿಯಾ ವಿಜಯ್ ನಿರ್ದೇಶಕನಾಗಿ ಹಾಗೂ ನಟನಾಗಿ ಮತ್ತೊಮ್ಮೆ ಗೆದ್ದಿದ್ದಾರೆ. ವಿಜಯ್ ಪ್ರೀತಿಯ ಸಿನಿಮಾ ಭೀಮಾ ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ರಿಲೀಸ್ ದಿನದಿಂದ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿರುವ ಸಿನಿಮಾದ ಸಕ್ಸಸ್ ಮೀಟ್ ಹಮ್ಮಿಕೊಂಡಿದ್ದರು ಆಗ ದರ್ಶನ್ ಅಭಿಮಾನಿಗಳು ನೀಡಿದ ವೈರಲ್ ಹೇಳಿಕೆಗೆ ವಿಜಯ್ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು! ದರ್ಶನ್ ಜೈಲು ಸೇರಿದ ಮೇಲೆ ಯಾವ ಸ್ಟಾರ್ ನಟರ ಸಿನಿಮಾನೂ ರಿಲೀಸ್ ಆಗಿಲ್ಲ. ದರ್ಶನ್ ಹೊರ ಬರುವವರೆಗೂ ನಾವು ಯಾವ ಸಿನಿಮಾನೂ ನೋಡಲ್ಲ ಎಂದು ಅಭಿಮಾನಿಗಳು ಪ್ರಾಮಿಸ್ ಮಾಡಿದ್ದರು. ಅಲ್ಲದೆ ರಿಲೀಸ್ ಆದ ಸಿನಿಮಾಗಳು ಒಂದು ವಾರವೂ ಮುಟ್ಟಿಲ್ಲ ಹೀಗಾಗಿ ದರ್ಶನ್ ಸಿನಿಮಾ ನೋಡುವುದನ್ನು ಬಿಟ್ಟಿರುವುದಕ್ಕೆ ಚಿತ್ರರಂಗಕ್ಕೆ ಈ ಹೊಡೆತ ಎಂದು ರೊಚ್ಚಗೆದಿದ್ದರು. ಭೀಮಾ ಸಿನಿಮಾ ರಿಲೀಸ್ ಆಗಿ ಅವರ ಹೇಳಿಕೆಯನ್ನು ರಾಂಗ್ ಎಂದು ಪ್ರೂವ್ ಮಾಡಿದೆ ಎಂದು ಎಲ್ಲೆಡೆ ಸುದ್ದಿಯಾಗಿದೆ.
ಅವರವರ ವೈಯಕ್ತಿಕ ಭಾವನೆಗಳಿಗೆ ನಾನು ಗೌರವ ಕೊಡೋಣ. ಯಾರು ನೋಡಲ್ಲ ಅಂದವರಿಗೆ ನಾನು ಗೌರವ ಕೊಡೋಣ. ಸಂತೋಷ, ಅದು ನಿಮ್ಮ ಭಾವನೆ. ಹಾಗಿದ್ದರೆ ನೋಡುತ್ತಿರುವವರು ಯಾರು? ಹಾಗಾಗಿ ನಿಮ್ಮ ವೈಯಕ್ತಿಕ ಭಾವನೆಗೆ ನಮ್ಮ ಗೌರವಿ ಇದೆ. ಇದನ್ನು ನಾನು ಪಾಸಿಟಿವ್ ಆಗಿಯೇ ತೆಗೆದುಕೊಳ್ಳುತ್ತೀನಿ ಎಂದು ವಿಜಯ್ ಹೇಳಿದ್ದಾರೆ.
ದರ್ಶನ್ ಜೈಲು ಸೇರಿರುವುದಕ್ಕೆ ಬೇಸರ ವ್ಯಕ್ತ ಪಡಿಸುವ ಬದಲು ಈ ರೀತಿ ಗೌರವಿಸುತ್ತೀನಿ ಹಾಗೆ ಹೀಗೆ ಎಂದು ವಿಜಯ್ ನೀಡಿರುವ ಹೇಳಿಕೆ ಸರಿ ಅಲ್ಲ ಎಂದು ದರ್ಶನ್ ಅಭಿಮಾನಿಗಳು ಮತ್ತೆ ಅದಕ್ಕೂ ಕಿರಿಕಿರಿ ಮಾಡುತ್ತಿದ್ದಾರೆ. ಇನ್ನು ಒಬ್ಬಬ್ಬ ನಟನ ಹೆಸರು ಹೇಳುತ್ತಿದ್ದಂತೆ ಅವರ ಬಗ್ಗೆ ವಿಜಯ್ ಮಾತನಾಡಿದ್ದರು.
ಅಪ್ಪು ಸೇರಿ ಹಲವರ ಬಗ್ಗೆ ಒಡನಾಟ ಹಂಚಿಕೊಂಡರು. ದರ್ಶನ್ ಹೆಸರು ಕೇಳುತ್ತಿದ್ದಂತೆ 'ಒಳ್ಳೆಯದಾಗಲಿ' ಎಂದಷ್ಟೇ ಹೇಳಿ ಸುಮ್ಮನಾಗಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.