ಇದು ಬರೀ ಸೆಲ್ಫಿ ಅನ್ಕೊಂಡ್ರಾ, ಗುಂ ಡಿಗೆ ಗಟ್ಟಿ ಇರುವವರು ಮಾತ್ರ ವಿಡಿಯೋ ನೋಡಿ
Oct 14, 2024, 10:15 IST
ಕೇಕ್ ಅಂದ್ರೆ ಯಾರಿಗ್ ತಾನೇ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬರೂ ಖುಷಿ ಖುಷಿಯಿಂದಲೇ ಕೇಕ್ ಸವಿಯುತ್ತಾರೆ. ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ಕೇಕ್ ಪ್ರಮುಖ ಪಾತ್ರ ವಹಿಸುತ್ತದೆ. ಇಂದಿನ ದಿನಗಳಲ್ಲಿ ಕೇಕ್ ಕತ್ತರಿಸದೆ ಯಾವುದೇ ಪಾರ್ಟಿ ಪೂರ್ಣಗೊಳ್ಳುವುದಿಲ್ಲ. ಜನರ ಬೇಡಿಕೆಗೆ ತಕ್ಕಂತೆ ವಿವಿಧ ಬಗೆಯ ಕೇಕ್‍ಗಳು ಮಾರುಕಟ್ಟೆಯಲ್ಲಿ ಲಭ್ಯ.
ಜನರು ತಮ್ಮ ಪಾರ್ಟಿಗೆ ಮತ್ತಷ್ಟು ರಂಗು ನೀಡಲು ವಿಶಿಷ್ಟವಾದ ಕೇಕ್‍ಗಳನ್ನು ಆರ್ಡರ್ ಮಾಡುತ್ತಾರೆ. ತರಹೇವಾರಿ ಕೇಕ್‍ಗಳನ್ನು ಇಂದು ನಾವು ಕಾಣಬಹುದಾಗಿದೆ. ನೀವು ಯಾವ ರೂಪದ ಕೇಕ್ ಬೇಕು ಅಂತೀರೋ ಆ ರೀತಿಯ ಕೇಕ್ಅನ್ನು ಸಿದ್ಧಪಡಿಸಿ ಕೊಡುತ್ತಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಶಿಷ್ಟವಾದ ಕೇಕ್ ಸಖತ್ ವೈರಲ್ ಆಗುತ್ತಿದೆ. ಈ ಕೇಕ್‌ನ ವಿಡಿಯೋ ಜನರನ್ನು ಗೊಂದಲಕ್ಕೀಡು ಮಾಡಿದೆ.
https://tv9kannada.com/videos/short-videos/realistic-selfie-cake-video-viral-on-social-media-aks
ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ತಮ್ಮದೇ ಮುಖವನ್ನು ಹೋಲುವ ಕೇಕ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ಇದು ನೋಡುಗರಿಗೆ ಕನ್ಫೂಸ್ ಮಾಡುತ್ತದೆ. ಜನರಿಗೆ ಅಸಲಿ ಮತ್ತು ನಕಲಿ ಮುಖಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಈ ವಿಶಿಷ್ಟವಾದ ಕೇಕ್ ನೋಡಿದ್ರೆ ನೀವು ಸಹ ಕನ್ಫೂಸ್ ಆಗುವುದು ಗ್ಯಾರಂಟಿ.
ಯುವತಿ ತನ್ನ ಕೈಯಲ್ಲಿ ತನ್ನದೇ ಮುಖ ಹೋಲುವ ಕೇಕ್ ಹಿಡಿದುಕೊಂಡು ಕಾಣಿಸಿಕೊಂಡಿರುವುದು ಅನೇಕರಿಗೆ ಗೊಂದಲ ಮೂಡಿಸಿದೆ. ಇಲ್ಲಿ ಯುವತಿಯ ಅಸಲಿ ಮುಖ ಮತ್ತು ಕೇಕ್‍ನ ಮುಖ ಯಾವುದು ಅನ್ನೋದೆ ನಿಮಗೆ ಗೊತ್ತಾಗುವುದಿಲ್ಲ. ಕೈಯಲ್ಲಿ ಚಾಕು ಹಿಡಿದು ಕಟ್ ಮಾಡಿದ ಮೇಲೆ ಮಾತ್ರ ತಿಳಿಯುವುದು ಅದು ಮುಖವನ್ನು ಹೋಲುವ ಕೇಕ್ ಎಂದು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.