ಇನ್ಮೇಲಾದರೂ ಕೊಬ್ಬು ಇಳಿಸಿಕೊಂಡು ಸುಮ್ಮನಿದ್ದರೆ ಸರಿ, ಅಜಿತ್ ಹನುಮಕ್ಕನವರ್ ವಾ ರ್ನಿಂಗ್
Dec 15, 2024, 09:43 IST

ಮೊನ್ನೆಯಷ್ಟೆ ಸುಪ್ರೀಂ ಕೋರ್ಟ್ ನಟ ದರ್ಶನ್ ಅವರಿಗೆ ಜಾಮೀನು ನೀಡಿದ ವಿಚಾರ ಇದೀಗ ಬಾರಿ ಸದ್ದು ಮಾಡುತ್ತಿದೆ. ಹೌದು, ಖ್ಯಾತ ಪತ್ರಕರ್ತ ಅಜಿತ್ ಹನುಮಕ್ಕನವರ್ ದರ್ಶನ್ ಅವರ ವಿಚಾರವಾಗಿ ಸಾಕಷ್ಟು ಸದ್ದು ಮಾಡುತ್ತಿದ್ದರು. ರೇಣುಕಾಸ್ವಾಮಿ ಕೊ ಲೆ ಮಾಡಿ ಜೈಲು ಸೇರಿದರೂ ದರ್ಶನ್ ಕೊಬ್ಬು ಇಳಿದಿಲ್ಲ ಅಂತ ವ್ಯಂಗ್ಯ ಮಾಡಿದ್ದರು. ಆದರೆ ಇದೀಗ ದರ್ಶನ್ ಅವರಿಗೆ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪಿನಿಂದ ಅಜಿತ್ ಹನುಮಕ್ಕನವರ್ ಮತ್ತೆ ಗರಂ ಆಗಿದ್ದಾರೆ.
ಹೌದು, ಅಜಿತ್ ಹನುಮಕ್ಕನವರ್ ಇದೀಗ ತನ್ನ ನ್ಯೂಸ್ ಸ್ಟುಡಿಯೋದಲ್ಲಿ ಮತ್ತೆ ದರ್ಶನ್ ಬಗ್ಗೆ ಸಿಡಿದೆದ್ದು ಮಾತನಾಡುವ ಮೂಲಕ ದರ್ಶನ್ ಅವರ ಅಭಿಮಾನಿಗಳಿಗೆ ಆಹಾರವಾಗಿದ್ದಾರೆ. ನಟ ದರ್ಶನ್ ಅವರಿಗೆ ರಾಜ್ಯಾದ್ಯಂತ ಸಾಕಷ್ಟು ಅಭಿಮಾನಿಗಳಿದ್ದಾರೆ. ಹಾಗಾಗಿ ದರ್ಶನ್ ಅವರ ಬಗ್ಗೆ ಮಾತಾನಾಡಲು ಕೆಲ ನಟರು ಹಿಂದೇಟು ಹಾಕುತ್ತಾರೆ. ಆದರೆ ಪತ್ರಕರ್ತ ಅಜಿತ್ ಅವರು ಸದಾ ದರ್ಶನ್ ಅವರ ಮೇಲೆ ಮಾತಿನ ಮೂಲಕ ಸಿಡಿದ್ದೇಳುತ್ತಾರೆ.
<a href=https://youtube.com/embed/FkhGRivdmo8?autoplay=1&mute=1><img src=https://img.youtube.com/vi/FkhGRivdmo8/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ದರ್ಶನ್ ಅವರು ಜಾಮೀನು ಸಿಕ್ಕ ತಕ್ಷಣ KD ಸಿನಿಮಾ ಹಾಗೂ ಡೆವಿಲ್ ಸಿನಿಮಾ ಶೂಟಿಂಗ್ ಗೆ ತಯಾರಾಗಲು ಮುಂದಾಗಿದ್ದಾರೆ. ಕನ್ನಡದ ಖ್ಯಾತ ನಿರ್ಮಾಪಕ ಪ್ರೇಮ್ ಅವರು ದರ್ಶನ್ ಅವರಿಗೆ KD ಸಿನಿಮಾ ಡೈರೆಕ್ಟ್ ಮಾಡಲಿದ್ದಾರೆ. ಇನ್ನೇನು ಸ್ಪಲ್ಪ ದಿನದಲ್ಲೇ ದರ್ಶನ್ ಅವರು ಮತ್ತೆ ಸಿನಿಮಾಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ.

