ಮುದ್ದಾದ ಪತ್ನಿಗಾಗಿ ಸ್ವಂತ ತಂದೆಯನ್ನು ಕಡೆಗಣಿಸಿದ ಜಡೇಜಾ, MLA ಹೆಂಡತಿಗಾಗಿ ಪೋಷಕರು ಬೀದಿಗೆ
Feb 12, 2024, 15:36 IST
ತಮ್ಮ ತಂದೆ ಅನಿರುದ್ಧ್ ಸಿನ್ಹ ಜಡೇಜಾ ಮಾಡಿದ ಆರೋಪಗಳನ್ನು ಕ್ರಿಕೆಟಿಗ ರವೀಂದ್ರ ಜಡೇಜಾ ತಳ್ಳಿಹಾಕಿದ್ದಾರೆ. ಇತ್ತೀಚೆಗೆ ಗುಜರಾತಿ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಜಡೇಜಾ ಅವರ ತಂದೆಯ ಹೇಳಿಕೆಗಳನ್ನು ‘ಸ್ಕ್ರಿಪ್ಟೆಡ್’ ಎಂದು ಜಡೇಜಾ ದೂಷಿಸಿದ್ದಾರೆ. ಅಲ್ಲದೆ ಆ ಎಲ್ಲಾ ಆರೋಪಗಳು ಅಸಂಬದ್ಧವಾಗಿದ್ದು, ತನ್ನ ಪತ್ನಿ ರಿವಾಬಾ ಅವರ ಘನತೆಗೆ ಕಳಂಕ ತರುವ ಪ್ರಯತ್ನ ಎಂದು ಹೇಳಿದ್ದಾರೆ.
ದಿವ್ಯಾ ಭಾಸ್ಕರ್ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ ಅನಿರುದ್ಧ್ ಸಿನ್ಹ ಅವರು, ಜಾಗತಿಕ ಖ್ಯಾತಿ ಪಡೆದಿರುವ ತಮ್ಮ ಮಗನಿಂದ ದೂರವಿದ್ದು ಸರಳ ಜೀವನವನ್ನು ನಡೆಸುತ್ತಿರುವುದಾಗಿ ಹೇಳಿದ್ದರು. ಮಗ ರವೀಂದ್ರ ಜಡೇಜಾ ಜಾಮ್‌ನಗರದಲ್ಲಿ ಫಾರ್ಮ್ ಹೌಸ್‌ನಲ್ಲಿ ವಾಸಿಸುತ್ತಿದ್ದರೂ, ಅವರ ತಂದೆ ಅನಿರುದ್ಧ್ 2ಬಿಎಚ್‌ಕೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ.
ನನ್ನ ಹಳ್ಳಿಯಲ್ಲಿ ನನಗೆ ಸ್ವಲ್ಪ ಜಾಗವಿದೆ. ನನ್ನ ಹೆಂಡತಿಯ 20,000 ರೂಪಾಯಿ ಪಿಂಚಣಿ ಹಣದಿಂದ ನನ್ನ ಖರ್ಚುಗಳನ್ನು ನಾನೇ ನಿರ್ವಹಿಸುತ್ತೇನೆ. ನಾನು 2BHK ಫ್ಲ್ಯಾಟ್‌ನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದೇನೆ. ಅಡುಗೆ ಮಾಡಲು ಮನೆಕೆಲಸದವರು ಇದ್ದಾರೆ. ನಾನು ನನ್ನ ಜೀವನವನ್ನು ನನ್ನದೇ ಆದ ಶೈಲಿಯಲ್ಲಿ ಬದುಕುತ್ತಿದ್ದೇನೆ. ನನ್ನ 2 ಬಿಎಚ್‌ಕೆ ಫ್ಲ್ಯಾಟ್‌ನಲ್ಲಿಯೂ ರವೀಂದ್ರನಿಗೆ ಪ್ರತ್ಯೇಕ ಕೋಣೆ ಇದೆ ಎಂದು ಜಡೇಜಾ ತಂದೆ ಹೇಳಿದ್ದಾರೆ.
<a href=https://youtube.com/embed/t-J4pTeOZeg?autoplay=1&mute=1><img src=https://img.youtube.com/vi/t-J4pTeOZeg/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ನಾನು ರವೀಂದ್ರನಿಗೆ ಕರೆ ಮಾಡುವುದಿಲ್ಲ. ನನಗೆ ಅವನ ಅಗತ್ಯವೂ ಇಲ್ಲ. ಅವ ನನ್ನ ತಂದೆಯಲ್ಲ; ನಾನು ಅವನ ತಂದೆ. ಅವನು ನನಗೆ ಕಾಲ್ ಮಾಡಬೇಕು. ಇದೆಲ್ಲವೂ ನೆನಪು ಮಾಡಿಕೊಂಡಾಗ ನನಗೆ ಅಳು ಬರುತ್ತದೆ. ಅವನ ಸಹೋದರಿ ಕೂಡ ರಕ್ಷಾಬಂಧನದಂದು ಅಳುತ್ತಾಳೆ ಎಂದು ಅವರು ಹೇಳಿಕೊಂಡಿದ್ದಾರೆ. ರವೀಂದ್ರ ಜಡೇಜಾನನ್ನು ಒಬ್ಬ ಕ್ರಿಕೆಟಿಗನಾಗಿ ಮಾಡಲು ನಾವು ತುಂಬಾ ಶ್ರಮಿಸಿದ್ದೇವೆ. ನಾನು ಹಣ ಸಂಪಾದಿಸುವ ಸಲುವಾಗಿ 20 ಲೀಟರ್ ಹಾಲಿನ ಕ್ಯಾನ್‌ಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದೆ.
ಅಲ್ಲದೆ ವಾಚ್‌ಮ್ಯಾನ್ ಆಗಿಯೂ ಕೆಲಸ ಮಾಡಿದ್ದೇನೆ. ನಾವು ಸಭ್ಯ ಕುಟುಂಬದವರು. ಅವನ ಸಹೋದರಿ ಆತನಿಗಾಗಿ ನನಗಿಂತ ಹೆಚ್ಚು ಕಷ್ಟ ಪಟ್ಟಿದ್ದಾಳೆ. ಅವಳು ಅವನನ್ನು ತಾಯಿಯಂತೆ ನೋಡಿಕೊಳ್ಳುತ್ತಿದ್ದಳು. ಆದಾರೂ, ಆತ ಮಾತ್ರ ತನ್ನ ಸಹೋದರಿಯೊಂದಿಗೂ ಯಾವುದೇ ಸಂಬಂಧ ಉಳಿಸಿಕೊಂಡಿಲ್ಲಎಂದು ತಂದೆ ಆರೋಪಿಸಿದ್ದರು. ಆದರೆ ಅದೆಲ್ಲ ಸುಳ್ಳು ಎಂದಿದ್ದಾರೆ ಜಡೇಜಾ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.