ಕುಮಾರಸ್ವಾಮಿಯನ್ನು ಖರೀದಿ ಮಾಡಲು‌ ಮುಂದಾದ ಜಮೀರ್; ರಣರಂಗವಾದ ರಂಗಣ್ಣ

 
ರಾಜಕಾರಣವೇ ಹಾಗೇ, ಇಲ್ಲಿ ಯಾರೂ ಶತ್ರುಗಳಲ್ಲ ಮಿತ್ರರೂ ಇಲ್ಲ. ಮೊನ್ನೆಮೊನ್ನೆಯವರೆಗೆ ಡಿಕೆ ಬ್ರದರ್ಸ್ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸುತ್ತಿದ್ದ ಸಿ.ಪಿ.ಯೋಗೇಶ್ವರ್ ಈಗ, ಅವರದೇ ಪಕ್ಷದ ಅಭ್ಯರ್ಥಿ. ಎಂತೆಂತಹ ಮಾತುಗಳನ್ನು ಇಬ್ಬರು ನಾಯಕರು ಆಡಿಕೊಂಡಿದ್ದರು. 
ಅದೇ ರೀತಿ, ಅಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸುತ್ತಮುತ್ತ ಇದ್ದದ್ದು ಅವರ ಪರಮಾಪ್ತರಾಗಿದ್ದವರು ಮೂವರು. ಅವರೆಂದರೆ, ಚೆಲುವರಾಯಸ್ವಾಮಿ, ಮಾಗಡಿ ಬಾಲಕೃಷ್ಣ ಮತ್ತು ಜಮೀರ್ ಅಹ್ಮದ್ ಖಾನ್. ಜಮೀರ್ ಅಹ್ಮದ್ ಗೆ ರಾಜಕೀಯ ಜೀವನವನ್ನು ನೀಡಿದ್ದ ದೇವೇಗೌಡರ ಕುಟುಂಬವನ್ನು ಖರೀದಿಸುವ ಮಾತನ್ನು ಜಮೀರ್ ಈಗ ಆಡುತ್ತಿದ್ದಾರೆ.
ಇನ್ನು ಅಂದು ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ವೇಳೆ, ಶಾಸಕರ ತಂಡವನ್ನು ತಮ್ಮದೇ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಬಸ್ಸಿನಲ್ಲಿ, ಖುದ್ದು ತಾವೇ ಓಡಿಸಿಕೊಂಡು, ವಿಧಾನಸೌಧಕ್ಕೆ ಜಮೀರ್ ಅಹ್ಮದ್ ಬಂದಿದ್ದರು. ಕುಮಾರಸ್ವಾಮಿ, ಚೆಲುವರಾಯಸ್ವಾಮಿ, ಬಾಲಕೃಷ್ಣ ಮತ್ತು ಜಮೀರ್ ಮಧ್ಯೆ, ಏನಾಯಿತೋ, ಎಲ್ಲರೂ ಕುಮಾರಸ್ವಾಮಿ ಸಂಗವನ್ನು ತೊರೆದರು, ಜೊತೆಗೆ, ಜೆಡಿಎಸ್ ಪಕ್ಷವನ್ನೂ ತೊರೆದರು. <a href=https://youtube.com/embed/jdNNJ4ngXnY?autoplay=1&mute=1><img src=https://img.youtube.com/vi/jdNNJ4ngXnY/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಅಷ್ಟೇ ಆಗಿದ್ರೆ ಇದು ಸುದ್ದಿ ಆಗ್ತಾನೇ ಇರಲಿಲ್ಲ ಬದಲಾಗಿ ಚನ್ನಪಟ್ಟಣದ ಉಪಚುನಾವಣೆಯ ಕೊನೆಯ ದಿನ ವೋ.. ಕಾಲಾ ಕುಮಾರಸ್ವಾಮಿ ಎನ್ನುವ ಜನಾಂಗೀಯ ನಿಂದನೆ ಪದವನ್ನು ಬಳಸಿದರು. ಮುಸ್ಲಿಮರ ಮತ ಬೇಡ ಎನ್ನುವ ನಿನಗೆ ಒಂದು ಮಾತು ಹೇಳುತ್ತೇನೆ ಕೇಳು. ನಿನ್ನ ಕುಟುಂಬವನ್ನು ಖರೀದಿಸುವಷ್ಟು ತಾಕತ್ ಮುಸ್ಲಿಮರಿಗಿದೆ ಎನ್ನುವ ಮಾತನ್ನು ಬಳಸಿದರು.
ರಾಜಕಾರಣದಲ್ಲಿ ಆರೋಪ/ಪ್ರತ್ಯಾರೋಪ ಸಹಜವಾಗಿದ್ದರೂ, ಕುಮಾರಸ್ವಾಮಿಯವರನ್ನು ಕರಿಯಾ ಎಂದು ಕರೆದದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಅವರು ಈ ಹಿಂದೆ ಈ ಪದವನ್ನು ಬಳಸಿದ್ದರು. ಅವರು ಕಪ್ಪಗೆ ಇದ್ದಾರೆ ಅದಕ್ಕೆ ಕರಿಯಾ ಅಂತೀನಿ, ನಾನು ಹೈಟ್ ಕಮ್ಮಿ ಇದ್ದೇನೆ, ಅದಕ್ಕೆ ಕುಳ್ಳ ಎನ್ನುತ್ತಾರೆ ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದರು. 
ಇದೀಗ ಸುದ್ದಿ ಓದತಾ ಜಮೀರ್ ಅಹ್ಮದ್ ಅವರನ್ನ ಪಬ್ಲಿಕ್ ಟಿವಿಯ ರಂಗಣ್ಣ ಅವರು ಗೌರವ ಕೊಟ್ಟು ತಗೊಳೋದು ಕಲೀರಿ ಎಂದು ಕಿಡಿ ಕಾರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.