ಮೈಸೂರು ಹೈವೇಲಿ ಭೀಕರ ಅಪ ಘಾತ, ಕನ್ನಡದ ಖ್ಯಾತ ನಟ ಇಹಲೋಕ

 

 ಅದ್ಯಾಕೋ ಗೊತ್ತಿಲ್ಲ ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇನಲ್ಲಿ ಅಪಘಾತಗಳ ಸರಣಿ ಮತ್ತೆ ಮುಂದುವರಿದಿದೆ. ಇಂದು ಮುಂಜಾನೆ ಸಂಭವಿಸಿದ ಬೈಕ್​ ಅಪಘಾತದಲ್ಲಿ ಯುವ ನಟ ಲೋಕೇಶ್​ ದುರಂತ ಸಾವಿಗೀಡಾಗಿದ್ದಾರೆ. ಈ ಘಟನೆ ಮಂಡ್ಯ ತಾಲೂಕಿನ ಹುಲಿಯೂರು ಬಳಿ ನಡೆದಿದೆ.

ಹೌದು ನೂರೆಂಟು ಕನಸುಗಳ ಹೊತ್ತು ಚಿತ್ರರಂಗಕ್ಕೆ ಕಾಲಿಟ್ಟಿದ್ದ ಅವರು ಇನ್ನಿಲ್ಲವಾಗಿದ್ದಾರೆ.ಲೋಕೇಶ್​ ಅವರು ಬೆಂಗಳೂರಿನಿಂದ ಮೈಸೂರಿನ ಕಡೆಗೆ ಬೈಕ್​ನಲ್ಲಿ ತೆರಳುತ್ತಿದ್ದಾಗ ಪಾರ್ಕ್​ ಮಾಡಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಅಪಘಾತದ ತೀವ್ರತೆ ಎಷ್ಟಿದೆ ಅಂದರೆ, ಲೋಕೇಶ್​ ಅವರ ಮೃತದೇಹ ಎರಡು ಕೈ, ಎರಡು ಕಾಲು ತುಂಡಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ನಡೆದ ಸ್ಥಳದಲ್ಲಿ ಕಾರಿನ ನಂಬರ್​ ಪ್ಲೇಟ್​ ಸಹ ದೊರಕಿದೆ. ಆದರೆ, ಕಾರು ನಾಪತ್ತೆಯಾಗಿದ್ದು, ಅದರ ಹುಡುಕಾಟದಲ್ಲಿ ಪೊಲೀಸರು ಬಿಜಿಯಾಗಿದ್ದಾರೆ.

ಅಂದಹಾಗೆ ಮೃತ ಲೋಕೇಶ್​ ಅವರು ಚಾಮರಾಜನಗರದ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ದೊಡ್ಡತುಪ್ಪೂರು ಗ್ರಾಮದವರು. ಇವರಿಗೆ ಸಿನಿಮಾ ಕ್ಷೇತ್ರದ ಮೇಲೆ ತುಂಬಾ ಒಲವಿತ್ತು. ಈ ಕ್ಷೇತ್ರದಲ್ಲಿ ಏನಾದರೂ ಒಂದನ್ನು ಸಾಧಿಸುವ ಹಂಬಲವನ್ನು ಹೊಂದಿದ್ದರು. ಆದರೆ, ವಿಧಿಯಾಟವೇ ಬೇರೆ ಇತ್ತೆಂದು ಕಾಣಿಸುತ್ತದೆ. ಭೀಕರ ಅಪಘಾತದಲ್ಲಿ ಲೋಕೇಶ್​ ಅಸುನೀಗಿದ್ದು, ಅವರ ಆಸೆಗಳು ಅವರೊಂದಿಗೆ ಕಮರಿ ಹೋಗಿದೆ.

ಲೋಕೇಶ್​ ಅವರು ಕೆಲ ಕಿರುಚಿತ್ರಗಳಲ್ಲಿ ನಟಿಸಿದ್ದರು. ಹಲವು ಕಲಾ ನಿರ್ದೇಶಕರ ಜತೆ ಕೆಲಸ ಮಾಡಿದ್ದರು. ಫ್ಯಾಮಿಲಿ ಪ್ಯಾಕ್​ ಚಲನಚಿತ್ರದಲ್ಲಿ ನಟಿಸಿದ್ದರು. ಇತ್ತೀಚೆಗಷ್ಟೇ ಹೊಸಬೈಕ್​ ಖರೀದಿ ಮಾಡಿದ್ದ ಲೋಕೇಶ್​, ಶುಕ್ರವಾರ ಸಂಜೆ ರೀಲ್ಸ್​ ಮಾಡಿ ಪೋಸ್ಟ್​ ಮಾಡಿದ್ದರು. ಆದರೆ, ಅದೇ ಬೈಕ್​ನಲ್ಲಿ ಅವರ ಪ್ರಾಣ ಹೋಗಿರುವುದು ದುರಂತವೇ ಸರಿ. ಶುಕ್ರವಾರ ತಡರಾತ್ರಿ ಊರಿಗೆ ಹೊರಡುವಾಗ ಮುಂಜಾನೆ ವೇಳೆ ಮಂಡ್ಯದ ಬಳಿ ಅಪಘಾತವಾಗಿದೆ. ಲೋಕೇಶ್​ ಅವರು ಪತ್ನಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಲೋಕೇಶ್​ ಅವರ ಸಾವು ಕುಟುಂಬಕ್ಕೆ ಭಾರೀ ಆಘಾತವನ್ನು ಉಂಟು ಮಾಡಿದ್ದು, ಅವರ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಇವರ ಸಾವಿಗೆ ಚಿತ್ರರಂಗದ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ.

ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.