ಕನ್ನಡದ ಅತ್ಯಂತ ಶ್ರೀಮಂತ ನಟಿ ರಾಧಿಕಾ ಕುಮಾರಸ್ವಾಮಿ, ಸಿನಿಮಾ ಹಿಟ್ ಆಗದಿದ್ದರು ಕೈಯಲ್ಲಿ ಕೋಟ್ಯಾಂತರ ರೂಪಾಯಿ ಹಣ
Apr 15, 2025, 07:25 IST

ಕನ್ನಡ ಚಿತ್ರರಂಗದಲ್ಲಿ ಒಂದು ಅವಧಿಯಲ್ಲಿ ಅತ್ಯಂತ ಬೇಡಿಕೆ ನಟಿಯಾಗಿದ್ದ ನಟಿ ರಾಧಿಕಾ ಅವರು ಕೇವಲ 14 ವರ್ಷಕ್ಕೆ ಚಿತ್ರ ರಂಗಕ್ಕೆ ಕಾಲಿಟ್ಟಿದ್ದರು. ಆರಂಭದಲ್ಲಿ ಉದ್ಯಮಿಯನ್ನು ಪ್ರೀತಿಸಿ ಮದುವೆ ಮಾಡಿಕೊಳ್ಳಬೇಕು ಎಂದು ಬಯಸಿದ್ದರೂ, ವಿಧಿಯಾಟ ಬೇರೆಯೇ ಆಗಿತ್ತು. ಅಂದಿನ ಮುಖ್ಯಮಂತ್ರಿಯನ್ನು ಮದುವೆಯಾದ ನಂತರ ಅವರ ಅದೃಷ್ಟವೇ ಬದಲಾಗಿದೆ. ಇದೀಗ ಕನ್ನಡತಿ ಶತಕೋಟಿ ಒಡತಿ ಆಗಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಬಾಲಿವುಡ್, ಕಾಲಿವುಡ್, ಸ್ಯಾಂಡಲ್‌ವುಡ್, ಮಾಲಿವುಡ್, ಟಾಲಿವುಡ್ ಸೇರಿದಂತೆ ಅಷ್ಟೇ ಏಕೆ ಹಾಲಿವುಡ್‌ನಲ್ಲೂ ಚಿತ್ರನಟಿಯರು ಹಾಗೂ ರಾಜಕೀಯ ನಾಯಕರ ನಡುವಿನ ಸಂಬಂಧಗಳಿಗೆ ಕೊನೆಯೇ ಇಲ್ಲ. ಅನೇಕ ರಾಜಕೀಯ ನಾಯಕರು ಚಿತ್ರನಟಿಯರನ್ನು ಮದುವೆ ಮಾಡಿಕೊಂಡು ದೊಡ್ಡ ಶ್ರೀಮಂತಿಕೆಯನ್ನೇ ಅನುಭವಿಸಿದ್ದಾರೆ. ಇನ್ನು ಕೆಲವರು ಉದ್ಯಮಿಗಳನ್ನು, ಕ್ರೀಡಾಪಟುಗಳನ್ನು, ಕ್ರಿಕೆಟ್ ಆಟಗಾರರನ್ನು ಸೇರಿ ಅನೇಕ ಕ್ಷೇತ್ರಗಳ ಶ್ರೀಮಂತರನ್ನು ಮದುವೆ ಮಾಡಿಕೊಂಡಿದ್ದಾರೆ. ಇದಕ್ಕೆ ಕನ್ನಡ ಚಿತ್ರರಂಗವೇನೂ ಭಿನ್ನವಾಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ನಟಿ ರಾಧಿಕಾ ಕುಮಾರಸ್ವಾಮಿ ಅವರು ಜ್ವಲಂತ ಸಾಕ್ಷಿ ಆಗಿದ್ದಾರೆ.
<a href=https://youtube.com/embed/VYYI66wKC_s?autoplay=1&mute=1><img src=https://img.youtube.com/vi/VYYI66wKC_s/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಕನ್ನಡ ಚಿತ್ರರಂಗದ ಸ್ವೀಟಿ ಎಂತಲೇ ಖ್ಯಾತಿಯಾಗಿರುವ ನಟಿ ರಾಧಿಕಾ 14ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಕನ್ನಡ ಮಾತ್ರವಲ್ಲದೇ ದಕ್ಷಿಣ ಭಾರತದ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದರು. ಆದರೆ, ದಿನ ಕಳೆದಂತೆ ಸಿನಿಮಾದಲ್ಲಿ ಉತ್ತುಂಗದಲ್ಲಿರುವಾಗಲೇ ಉದ್ಯಮಿಯೊಬ್ಬರನ್ನು ಪ್ರೀತಿಸಿ ಅವರನ್ನು ಮದುವೆ ಮಾಡಿಕೊಂಡಿದ್ದಾರೆ ಎಂಬ ಮಾತು ಎಲ್ಲಡೆ ಕೇಳಿಬಂದಿತ್ತು. ಆದರೆ, ಉದ್ಯಮಿ ರತನ್ ಕುಮಾರ್ ಅವರು ರಾಧಿಕಾಳನ್ನು ಮದುವೆಯಾಗಿದ್ದಕ್ಕೆ ತನ್ನ ಮಗೋಳ ಸಿನಿಮಾ ಕೆರಿಯರ್ ಹಾಳಾಗುತ್ತದೆಂದು ರಾಧಿಕಾ ತಾಯಿ ಉದ್ಯಮಿ ವಿರುದ್ಧವೇ ಕಿಡ್ನಾಪ್ ದೂರು ನೀಡಿದರು.
ಇದಾದ ನಂತರ ರಾಧಿಕಾಳ ಮದುವೆ ಒಂದು ವಿವಾದದ ಸ್ವರೂಪ ಪಡೆದುಕೊಂಡಿತು. ಈ ವಿವಾದ ಜೀವಂತವಾಗಿರುವಾಗಲೇ 2002ರಲ್ಲಿ ಉದ್ಯಮಿ ರತನ್ ಕುಮಾರ್ ಸಾವನ್ನಪ್ಪಿದರು.ಇದಾದ ನಂತರ ಅಂದಿನ ಮುಖ್ಯಮಂತ್ರಿಯನ್ನು ರಾಧಿಕಾ ಮದುವೆ ಮಾಡಿಕೊಂಡಿದ್ದಾರೆ. ಆದರೆ, ಸಿಎಂ ಮದುವೆ ಮಾಡಿಕೊಂಡರೂ ಅದನ್ನು 4 ವರ್ಷಗಳ ಕಾಲ ಮುಚ್ಚಿಟ್ಟಿದ್ದರು.
2010ರಲ್ಲಿ ತಾನು 2006ರಲ್ಲಿ ಮುಖ್ಯಮಂತ್ರಿಯನ್ನು ಗುಟ್ಟಾಗಿ ಮದುವೆ ಮಾಡಿಕೊಂಡಿರುವುದಾಗಿ ತಿಳಿಸಿದ್ದರು. ಆಗ ಕೋಟಿ ಆಸ್ತಿಯನ್ನು ಹೊಂದಲೂ ಪರದಾಡುತ್ತಿದ್ದ ನಟಿ ಇದೀಗ ಶತಕೋಟಿ ಆಸ್ತಿಯ ಒಡತಿ ಆಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.