ರಾಮ ಮಂದಿರಕ್ಕೆ ಒಂದು ಲಕ್ಷ ದೇಣಿಗೆ ಕೊಟ್ಟು, ಹಿಂದೂ ಧರ್ಮದ ರಕ್ಷಣೆಗೆ ನಿಂತ ಕನ್ನಡದ ಕಲಾವಿದೆ
Jan 10, 2024, 13:09 IST
ಸೌತ್ ಸಿನಿಮಾ ಇಂಡಸ್ಟ್ರಿಯ ನಟಿ ಪ್ರಣಿತಾ ಸುಭಾಷ್ ಅವರು ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೊಡ್ಡ ದೇಣಿಗೆಯನ್ನು ಘೋಷಿಸಿದ್ದಾರೆ. ದೇವರ ಮೇಲೆ ಅಪಾರ ನಂಬಿಕೆ ಹೊಂದಿದ್ದ ಪ್ರಣಿತಾ ರಾಮಮಂದಿರ ನಿರ್ಮಾಣಕ್ಕೆ ಕೈಲಾದ ಸಹಾಯ ಮಾಡಿದ್ದಾರೆ. ಅಯೋಧ್ಯೆಯ ಶ್ರೀ ರಾಮಮಂದಿರ ನಿಧಿ ಸಮರ್ಪಣ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿರುವ ನಟಿ ಪ್ರಣಿತಾ ಸುಭಾಷ್ ಅವರು 1 ಲಕ್ಷ ರೂ. ಹಣ ನೀಡಿದ್ರು.
ಇನ್ನು ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ರು. ಇದೊಂದು ಐತಿಹಾಸಿಕ ಚಳವಳಿ ಎಂದು ಬರೆದಿದ್ದ ನಟಿ ತಮ್ಮ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ರು. ನೀವೆಲ್ಲರೂ ಕೈಜೋಡಿಸಿ ಇದರ ಭಾಗವಾಗಬೇಕೆಂದು ನಾನು ವಿನಂತಿಸುತ್ತೇನೆ ಎಂದಿದ್ರು. ನಟಿ ಪ್ರಣಿತಾ ವಿಡಿಯೋ ಕೂಡ ಶೇರ್ ಮಾಡಿದ್ರು.
ನಿಮ್ಮೆಲ್ಲರಿಗೂ ನಮಸ್ಕಾರ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ನಿಧಿ ಸಮರ್ಪಣಾ ಕಾರ್ಯಕ್ರಮ ಆರಂಭಿಸಿದ್ದಾರೆ. ಇದರಲ್ಲಿ ನಾನೂ ಕೂಡ ಕೈಜೋಡಿಸಿದ್ದು, ನೀವೆಲ್ಲರೂ ಕೈಜೋಡಿಸಬೇಕಾಗಿ ವಿನಂತಿಸುವೆ. ಜೈ ಶ್ರೀ ರಾಮ್. ಎಂದಿದ್ರು. ಪ್ರಣಿತಾ ಸುಭಾಷ್ ಅವರು ತಮ್ಮ ಎಲ್ಲಾ ಅಭಿಮಾನಿಗಳು ಕೈ ಜೋಡಿಸಲು ಮತ್ತು ಈ ಐತಿಹಾಸಿಕ ಆಂದೋಲನದ ಭಾಗವಾಗಲು ವಿನಂತಿಸಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕಾಗಿ ಬೃಹತ್ ದೇಣಿಗೆ ಅಭಿಯಾನವನ್ನು ಪ್ರಾರಂಭಿಸಿದಾಗಲೇ ನಟಿ ಪ್ರಣಿತಾ ಹಣ ನೀಡಿದ್ರು. ಜನವರಿ 15, 2021 ರಿಂದ ಈ ಅಭಿಯಾನವು ಶುರುವಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಸಾಮಾನ್ಯ ನಾಗರಿಕರು ಸೇರಿ 65 ಕೋಟಿ ಜನರನ್ನು ತಲುಪಿತು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹಿಸಲು ಆರ್‌ಎಸ್‌ಎಸ್ 5 ಲಕ್ಷ ಗ್ರಾಮಗಳು ಮತ್ತು 10 ಕೋಟಿ ಕುಟುಂಬಗಳನ್ನು ತಲುಪಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.