12 ಗಂಟೆ ರಾತ್ರಿಗೆ ಸ್ಮಶಾನದಲ್ಲಿ ಬಾಡೂಟ ಮಾಡಿದ ಕನ್ನಡದ ಯೂಟ್ಯೂಬರ್; ನಿಜವಾದ ದೆವ್ವ ಕಂಡು ಎಸ್ಕೇಪ್
Aug 23, 2024, 18:41 IST
ಇತ್ತೀಚಿನ ದಿನಗಳಲ್ಲಿ ಹೊಸದೇನೂ ಮಾಡಬೇಕು ಹೆಚ್ಚು ಲೈಕ್ಸ್ ವ್ಯೂವ್ಸ್ ಪಡೆಯಬೇಕು ಎಂದು ಹೊಸದೇನೂ ಮಾಡಹೊರಡುತ್ತಾರೆ. ಹೌದು ವಿಕಾಸ್ ಗೌಡ ಎನ್ನುವ ಯೂಟ್ಯೂಬ್ ವಿಡಿಯೋಗಳು ನೋಡಿದ್ರೆ ನಾವು ಎನ್ ಹೇಳೋಕೆ ಹೋಗ್ತಿದ್ದೇವೆ ನಿಮಗೆ ಅರ್ಥವಾಗಿ ಬಿಡುತ್ತದೆ.
ಗರುಡ ಪುರಾಣದ ಪ್ರಕಾರ, ಸ್ಮಶಾನದ ನೆಲದಲ್ಲಿ ದೀರ್ಘಕಾಲ ಉಳಿಯಬಾರದು ಎಂದು ಹೇಳಲಾಗಿದೆ. ನೀವು ಯಾರೊಬ್ಬರ ಶವ ಸಂಸ್ಕಾರಕ್ಕೆ ಹೋದರೆ, ನಂತರ ಬೇಗನೆ ಅಲ್ಲಿಂದ ಹೊರಬರಲು ಪ್ರಯತ್ನಿಸಿ. ಇದಕ್ಕೆ ಕಾರಣವೆಂದರೆ, ಸಾವಿನ ನಂತರ, ಮೃತ ವ್ಯಕ್ತಿಯ ದೇಹದಲ್ಲಿ ಉತ್ಪತ್ತಿಯಾದ ಬ್ಯಾಕ್ಟೀರಿಯಾಗಳು ಗಾಳಿಯಲ್ಲಿ ಸೇರಿಕೊಳ್ಳಲು ಪ್ರಾರಂಭಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಆ ಬ್ಯಾಕ್ಟೀರಿಯಾಗಳು ನಿಮ್ಮ ದೇಹಕ್ಕೂ ಹೋಗಬಹುದು.
ಸ್ಮಶಾನದಲ್ಲಿ ಒಂದಲ್ಲ ಒಂದು ಶವಗಳ ಅಂತ್ಯಕ್ರಿಯೆಯನ್ನು ಮಾಡುತ್ತಲೇ ಇರುತ್ತಾರೆ. ಆದ್ದರಿಂದ ಆ ಸ್ಥಳದಲ್ಲಿ ಬ್ಯಾಕ್ಟೀರಿಯಗಳು ಹೆಚ್ಚಾಗಿರುತ್ತದೆ. ಅದ್ರೆ ಅಲ್ಲಿ ಅದೂ ಅಮಾವಾಸ್ಯೆ ದಿನ ಹೋಗಿ ಕ್ಯಾಂಪ್ ಹಾಕಿ ಬಿರಿಯಾನಿ ತಿಂದು ಬಂದಿದ್ದಾರೆ ಈ ಮಹಾನುಭಾವರು. ದೆವ್ವ ಭೂತಗಳು ಇದೆಯೋ ಇಲ್ಲವೋ ಕೊನೆಯ ಮಾತು ಆದರೆ ಜೀವವನ್ನು ಕೈಲಿಟ್ಟುಕೊಂಡು ವಿಡಿಯೋ ಅಂತೂ ಮಾಡ ಬೇಕು.
<a href=https://youtube.com/embed/vFdB9S-68qE?autoplay=1&mute=1><img src=https://img.youtube.com/vi/vFdB9S-68qE/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ವಿಕಾಸ್ ಗೌಡ ಯೂಟ್ಯೂಬ್‌ನಲ್ಲಿ ಟ್ರಾವೆಲ್, ಫುಡ್ ಸೇರಿದಂತೆ ವಿಶೇಷ ರೀತಿಯ ಕಟೆಂಟ್‌ಗಳನ್ನು ಮಾಡುತ್ತಿದ್ದರು. ಈಗಾಗಲೇ ವಿಕಾಸ್ ಗೌಡ ಯೂಟ್ಯೂಬ್‌ನಲ್ಲಿ 113K ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಈ ಹಿಂದೆ ಕೂಡ ವ್ಯೂವ್ಸ್ ಹೆಚ್ಚಿಸುವ ಭರದಲ್ಲಿ ಮಾಡಿದ ವಿಡಿಯೋವೊಂದು ವಿಕಾಸ್ ಗೌಡಗೆ ಕುತ್ತು ತಂದಿತ್ತು. ಈ ಸಲ ಆದರೂ ಏನೂ ಆಗದಿರಲಿ ಅನ್ನೊದು ಇವರ ಫ್ಯಾನ್ಸ್ ಆಶಯ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.