ಈ ವರ್ಷ ಮೈಲಾರಲಿಂಗೇಶ್ವರ ಭವಿಷ್ಯ ಕೇಳಿ ಬೆಚ್ಚಿಬಿದ್ದ ಕನ್ನಡಿಗರು

 

ಐತಿಹಾಸಿಕ ಮೈಲಾರ ಲಿಂಗೇಶ್ವರ ಜಾತ್ರೆಯ ಕಾರ್ಣಿಕ ಪ್ರಕಟವಾಗಿದ್ದು, ಸಂಪಾಯಿತಲೇ ಪರಾಕ್‌ ಎಂಬ ಎರಡು ಪದಗಳ ಕಾರ್ಣಿಕವನ್ನು ಗೊರವಪ್ಪ ನುಡಿದಿದ್ದಾನೆ. ಹೂವಿನಹಡಗಲಿ ತಾಲೂಕಿನ ಮೈಲಾರದ ಮೈಲಾರ ಲಿಂಗೇಶ್ವರ ದೇವಸ್ಥಾನದ ಬಳಿಯಿರುವ ಡಂಕನಮರಡಿಯಲ್ಲಿ 18 ಅಡಿ ಎತ್ತರದ ಬಿಲ್ಲನೇರಿ ಗೊರವಪ್ಪ ದೈವವಾಣಿ ನುಡಿದಿದ್ದಾನೆ. ಕಾರ್ಣಿಕ ಕೇಳಿ ಲಕ್ಷಾಂತರ ಭಕ್ತರು ಪುನೀತರಾಗಿದ್ದಾರೆ. ಈಗ ಕಾರ್ಣಿಕದ ಬಗ್ಗೆ ಚರ್ಚೆಯಾಗುತ್ತಿದ್ದು, ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗಲಿದೆ ಎಂದು ಕಾರ್ಣಿಕವನ್ನು ವಿಶ್ಲೇಷಣೆ ಮಾಡಲಾಗುತ್ತಿದೆ. ಈ ಮೂಲಕ ರೈತರಿಗೆ ಈ ವರ್ಷ ಸಿಹಿ ಸುದ್ದಿ ಸಿಗಲಿದೆ ಎನ್ನಲಾಗುತ್ತಿದೆ.

ಬರಗಾಲದಿಂದ ಕಂಗೆಟ್ಟಿದ್ದ ನಾಡಿನ ಜನತೆಗೆ ಮೈಲಾರಲಿಂಗದ ಕಾರ್ಣಿಕ ಸಿಹಿ ಸುದ್ದಿ ನೀಡಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿ, ಬೆಳೆ ಸಮೃದ್ಧಿಯಾಗಿ ಬರಲಿದೆ. ಇದರಿಂದ ನಾಡಿನ ರೈತರ ಮುಖದಲ್ಲಿ ನಗುವಿನ ಸಿಂಚನ ಮೂಡಿಸುವ ಭರವಸೆ ಸಿಕ್ಕಂತಾಗಿದೆ. ಇನ್ನು, ಕಾರ್ಣಿಕ ನುಡಿಯುವ ಮುನ್ನ ಗೊರವಯ್ಯ ರಾಮಪ್ಪ 9 ದಿನಗಳ ಕಾಲ ಉಪವಾಸ ಮಾಡುತ್ತಾರೆ. ಈ ಹಿನ್ನೆಲೆ ಮೈಲಾರ ಲಿಂಗದ ಕಾರ್ಣಿಕ ರಾಜ್ಯದಲ್ಲಿ ಗಮನ ಸೆಳೆದಿದೆ. <a href=https://youtube.com/embed/69BNnoPsZoM?autoplay=1&mute=1><img src=https://img.youtube.com/vi/69BNnoPsZoM/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಕಳೆದ ಬಾರಿ ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್ ಎಂಬ ಕಾರ್ಣಿಕವನ್ನು ಗೊರವಪ್ಪ ನುಡಿದಿದ್ದ. ಈ ವರ್ಷ ಲೋಕಸಭಾ ಚುನಾವಣೆ ಹಿನ್ನೆಲೆ ರಾಜಕೀಯ ಕಾರ್ಣಿಕ ನುಡಿಯುತ್ತಾರೆ ಎಂಬ ಕುತೂಹಲವಿತ್ತು. ಆದರೆ, ಕೇವಲ ಮಳೆ-ಬೆಳೆಗೆ ಸಂಬಂಧಿಸಿದಂತೆ ಕಾರ್ಣಿಕವನ್ನು ನುಡಿಯಲಾಗಿದೆ ಎನ್ನಲಾಗಿದೆ.ಇನ್ನು, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಜಿಗಣೇಹಳ್ಳಿ ಮೈಲಾರ ಲಿಂಗೇಶ್ವರನ ಕಾರ್ಣಿಕದಲ್ಲಿ ಹುಟ್ಟಿದ ಕಮಲ ಆಕಾಶ ಮೆಟ್ಟೀತು, ಮಳೆ ಬೆಳೆ ಸಂಪಾಯಿತಲೇ.. ಪರಾಕ್ ಎಂದು ನುಡಿಯಲಾಗಿತ್ತು. 

ಇನ್ನು, ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ನಡೆದ ಮೈಲಾರ ಲಿಂಗೇಶ್ವರ ಕಾರ್ಣಿಕದಲ್ಲಿ ಸಿರಿನಾಡಿಗೆ ಬಂಗಾರದ ಗಿಳಿ ಬಂದು ಕೂತಿತಲೇ ಪರಾಕ್.. ಮುತ್ತಿನ ಗುರಿ ಮುಟ್ಟೀತು, ಬೆಳ್ಳಿ ತೊಟ್ಟಿಲು ಕಟ್ಟೀತು.. ಕಷ್ಟ ಪಟ್ಟ ಮನುಷ್ಯನಿಗೆ ಮುತ್ತಿನ ದಾರಿ ಸಿಕ್ಕಿತ್ತಲೇ ಪರಾಕ್.. ಎಂದು ಮೂರು ಕಾರ್ಣಿಕಗಳನ್ನು ನುಡಿಯಲಾಗಿತ್ತು. ಎರಡು ಭವಿಷ್ಯ ವಾಣಿಗಳು ಶುಭವನ್ನೇ ಹೇಳುತ್ತಿದ್ದು, ಈಗ ಮೂರನೇ ಹಾಗೂ ರಾಜ್ಯದಲ್ಲೇ ಪ್ರಮುಖ ಮೈಲಾರ ಲಿಂಗೇಶ್ವರ ದೇವಸ್ಥಾನವಾಗಿರುವ ಮೈಲಾರದಲ್ಲಿನ ಕಾರ್ಣಿಕವು ಶುಭ ಸುದ್ದಿಯನ್ನೇ ನುಡಿದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.