ಜಗತ್ತಿನ ಅನ್ನದಾತ ರೈತನಿಗೆ ಅವಮಾನ ಮಾಡಿದ GT ಮಾಲ್ ತಕ್ಷಣ ಬಂದ್ ಮಾಡಿಸಿದ ಕನ್ನಡಿಗರು;

 

ಪಂಚೆ ತೊಟ್ಟಿದಕ್ಕಾಗಿ ಒಳಗೆ ಬಿಡದೆ ಅವಮಾನ ಮಾಡಿದ, ಜಿಟಿ ಮಾಲ್‌ ವಿರುದ್ಧ ಭಾರೀ ವಿರೋಧ ಪ್ರತಿಭಟನೆಗಳು ನಡೆದಿವೆ. ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಅಷ್ಟೇ ಅಲ್ಲದೆ ರಾಜಕಾರಣಿಗಳೂ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು. ಕ್ಷಮೆ ಕೇಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು. ಹೀಗಾಗಿ ಇಂದು ಅದೇ ಮಾಲ್ ಸಿಬ್ಬಂದಿ ರೈತನ ಕ್ಷಮೆ ಯಾಚಿಸಿ, ಸನ್ಮಾನ ಮಾಡಿ ಕಳಿಸಿರುವ ಘಟನೆ ನಡೆದಿದೆ .

ಅಷ್ಟಕ್ಕೂ ಪಂಚೆ ತೊಟ್ಟಿದ್ದಕ್ಕೆ ನಗರ ಮಾಲ್‌ ಒಂದಕ್ಕೆ ರೈತನಿಗೆ ಎಂಟ್ರಿ ನಿರಾಕರಣೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಮಾಲ್‌ ಒಂದಕ್ಕೆ ಸಿನಿಮಾ ನೋಡಲು ಯುವಕನೊಬ್ಬ ತನ್ನ ತಂದೆ ಜೊತೆಗೆ ಬಂದಿದ್ದರು. ಆದರೆ ಪಂಚೆ ಹಾಕಿದ ಕಾರಣಕ್ಕಾಗಿ ರೈತನಿಗೆ ಮಾಲ್‌ ಎಂಟ್ರಿ ನಿರಾಕರಣೆ ಮಾಡಲಾಗಿತ್ತು. ಆದರೆ ಇಂದು ಅದೇ ಮಾಲ್‌ ಸಿಬ್ಬಂದಿಗಳಿಂದ ಪಂಚೆ ಉಟ್ಟ ರೈತನನ್ನು ಕರೆಸಿ ಸನ್ಮಾನ ಮಾಡಲಾಗಿದೆ. <a href=https://youtube.com/embed/Xb_pOkaOPAs?autoplay=1&mute=1><img src=https://img.youtube.com/vi/Xb_pOkaOPAs/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ರೈತ ಫಕೀರಪ್ಪ ಎಂಬುವವರು ತಮ್ಮ ಪುತ್ರನೊಂದಿಗೆ ನಗರದ ಮಾಲ್‌ ಒಂದಕ್ಕೆ ಬಂದಾಗ ಈ ಘಟನೆ ನಡೆದಿದೆ. ಈ ಘಟನೆಗೆ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಇದು ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಇದರ ಬೆನ್ನಲ್ಲೇ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿ, ಮಾಲ್‌ ಸಿಬ್ಬಂದಿ ಕ್ಷಮೆ ಕೇಳುವಂತೆ ಮಾಡಿದ್ದಾರೆ.

ರೈತ ಬೆಳೆದ ಬೆಳೆ ಬೇಕು ಆದರೆ ನಗರದಲ್ಲಿ ರೈತನಿಗೆ ಮಾಲ್‌ಗೆ ಎಂಟ್ರಿ ಇಲ್ಲವೇ ಎಂದು ಹಲವು ಪ್ರಶ್ನೆ ಮಾಡಿದ್ದಾರೆ. ಮಾಲ್‌ ಆಡಳಿತ ಮಂಡಳಿಯ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದು, ಸೂಕ್ತ ಕ್ರಮಕ್ಕೂ ಆಗ್ರಹಿಸಿದ್ದಾರೆ. ಸಿದ್ದರಾಮಯ್ಯ ಅವರು ಪಂಚೆ ಹಾಕಿಕೊಂಡು ಸಿಎಂ ಆಗಿದ್ದಾರೆ. ಇದು ಆ ಸೆಕ್ಯುರಿಟಿಗೆ ಯಾರೋ ಗೈಡ್ ಲೈನ್ಸ್ ಕೊಟ್ಟಿರಬಹುದು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.