ಸಾಲು ಮರದ ತಿಮ್ಮಕ್ಕನನ್ನು ನೋಡಿದ ಸಿದ್ದರಾಮಯ್ಯ ಮಾಡಿದ್ದೇನು ಗೊತ್ತಾ, ಬೆಚ್ಚಿಬಿದ್ದ ಕನ್ನಡಿಗರು

 

ಮರಗಳ ಮಾತೇ ಎಂದೇ ಖ್ಯಾತಿ ಪಡೆದಿರುವ ಸಾಲು ಮರದ ತಿಮ್ಮಕ್ಕ ಇತ್ತೀಚಿಗೆ ಬೆಂಗಳೂರಿಗೆ ಆಗಮಿಸಿದ್ದರು. ಹೌದು ನಾಡೋಜ ಹಾಗೂ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಶುಭ ಹಾರೈಸಿದರು.‌ ನಾಡಿನಲ್ಲಿ ಮಳೆ, ಬೆಳೆ ಆಗಿ ಸಮೃದ್ಧವಾಗಿ ಆಡಳಿತ ನಡೆಸುವಂತೆ ಆಗಲಿ ಎಂದು ತಿಮ್ಮಕ್ಕ ಶುಭ ಹಾರಿಸಿದರು.

ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ, ಸರ್ಕಾರ ನಿಮ್ಮ ಬಗ್ಗೆ ಕಾಳಜಿ ವಹಿಸುತ್ತದೆ ಎಂದು ಸಿದ್ದರಾಮಯ್ಯನವರು ತಿಮ್ಮಕ್ಕ ಅವರಿಗೆ ಕಿವಿ ಮಾತು ಹೇಳಿದರು. ಅಪಾರ ಪರಿಸರ ಕಾಳಜಿ ಹೊಂದಿರುವ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರು  ರಾಜ್ಯ ಸರ್ಕಾರದ ಅಧಿಕೃತ ಪರಿಸರ ರಾಯಭಾರಿ. ಮುಂದಿನ ಆದೇಶ ಪ್ರಕಟವಾಗುವ ತನಕವೂ ಅವರಿಗೆ ಕ್ಯಾಬಿನೆಟ್‌ ಸಚಿವರ ಸ್ಥಾನಮಾನವೂ ಇರಲಿದೆ. 

ಇದಕ್ಕೆ ಸಂಬಂಧಿಸಿದ ಅಧಿಕೃತ ಆದೇಶವನ್ನು ಈಗಾಗಲೇ ನೀಡಲಾಗಿದೆ. ಸಾಲುಮರದ ತಿಮ್ಮಕ್ಕನವರಿಗೆ ಸರ್ಕಾರವೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನದಲ್ಲಿಮನೆ ನಿಮಾಣ ಮಾಡಿ ಉಡುಗೊರೆಯಾಗಿ ನೀಡಲಿದೆ. ರಾಜ್ಯದ ಯಾವುದೇ ಪ್ರದೇಶಕ್ಕೆ ಪರಿಸರ ರಕ್ಷಣೆ ಮಾಡುವುದಕ್ಕೆ ತೆರಳುವುದಾದರೂ ಸರ್ಕಾರವೇ ಅದರ ಖರ್ಚು ವೆಚ್ಚವನ್ನು ನೋಡಿಕೊಳ್ಳಲಿದೆ.  <a href=https://youtube.com/embed/EvARq3uQkeY?autoplay=1&mute=1><img src=https://img.youtube.com/vi/EvARq3uQkeY/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಹೊರ ರಾಜ್ಯಕ್ಕೆ ತೆರಳುವುದಾದರೂ ಅದರ ಖರ್ಚು ವೆಚ್ಚ ಕೂಡ ಸರ್ಕಾರವೇ ವಹಿಸಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಸಾಕು ಮಗ ಬಳ್ಳೂರು ಉಮೇಶ್ ಕೂಡ ವೃಕ್ಷ ಮಾತೆಯ ಆಶೀರ್ವಾದ ಪಡೆದರು. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.