Karishma kapoor ಮಗ ಸಂಜಯ್ ದತ್ ಅವರ ಹಾಗೇಯೆ ಕಾಣುತ್ತಾನೆ; ನೆಟ್ಟಿಗರಲ್ಲಿ‌ ಹೆಚ್ಚಾಯಿತು ‌ಅನುಮಾನ

 

ಬಾಲಿವುಡ್ ನಟ ಸಂಜಯ್ ದತ್ ಅವರು ಸಿನಿಮಾದ ಜೊತೆ ಜೊತೆಗೆ ಬೇರೆಯದೇ ಕಾರಣಕ್ಕೂ ಬಹಳಷ್ಟು ಸುದ್ದಿಯಾದವರು. ತಮ್ಮ ಸಿನಿಮಾ ಜೀವನದಂತೆಯೇ ಅವರ ವೈಯಕ್ತಿಕ ಜೀವನವೂ ಬಹಳ ಏಳು ಬೀಳುಗಳಿಂದ ಕೂಡಿದಿದ್ದಂತಹುದು. ಅನೇಕ ನಟಿಯರ ಜೊತೆ ಆಫೇರ್‌,  ಸಿನಿಮಾ ರಂಗದಲ್ಲಿ ನೆಲೆ ಕಾಣುವ ಮೊದಲೇ ಅಮ್ಮನ ಹಠಾತ್ ಸಾವು, ಡ್ರಗ್ ದುಶ್ಚಟ,  ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣದಲ್ಲಿ ಜೈಲು ಪಾಲಾಗಿದ್ದು, ಹೀಗೆ ಸಂಜಯ್ ದತ್ ನಿಜ ಜೀವನ, ಯಾವ ಸಿನಿಮಾಗಳಿಗೂ ಕಡಿಮೆ ಇಲ್ಲ.

 ಮೂರು ಮದುವೆಯಾಗಿರುವ ಸಂಜಯ್ ದತ್ ಅವರಿಗೆ ಮೂವರು ಮಕ್ಕಳು, ಪ್ರಸ್ತುತ ತಮ್ಮ 3ನೇ ಪತ್ನಿ ಮನ್ಯಾತಾ ಹಾಗೂ ಇಬ್ಬರು ಅವಳಿ ಮಕ್ಕಳ ಜೊತೆ ವಾಸ ಮಾಡ್ತಿರುವ ಸಂಜಯ್ ದತ್ ಅವರದ್ದು, ಸದ್ಯದ ಮಟ್ಟಿಗಂತೂ ಆರಾಮದ ಜೀವನ. ಆದರೆ ಈಗ ಸಂಜಯ್ ದತ್ ತಮ್ಮ ತಾರುಣ್ಯದಲ್ಲಿ ಹೇಗಿದ್ದರೋ ಹಾಗೆಯೇ ಬಾಲಿವುಡ್‌ ಮತ್ತೊಬ್ಬ ನಟಿ ಕರೀಷ್ಮಾ ಕಪೂರ್ ಪುತ್ರ ಕಾಣಿಸುತ್ತಿದ್ದಾರೆ.

 ಪ್ರಪಂಚದಲ್ಲಿ ಒಂದೇ ರೀತಿ ಏಳು ಜನರು ಇರುತ್ತಾರೆ ಎಂಬ ಮಾತಿದೆ. ಅದೇ ರೀತಿ ಈಗ ಸಂಜಯ್ ದತ್‌ನನ್ನು ಹೋಲುವಂತೆ ಕರೀಷ್ಮಾ ಪುತ್ರ ಇದ್ದಾನೆ.  ಸಂಜಯ್ ದತ್ ಹಾಗೂ ಕರೀಷ್ಮಾ ಪುತ್ರನ ಫೋಟೋವನ್ನು ಕೊಲಾಜ್ ಮಾಡಿರುವ ಟ್ರೋಲರ್‌ಗಳು ಇದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಕಳೆದ ವರ್ಷ ಕಪೂರ್ ಕುಟುಂಬ ಆಯೋಜಿಸಿದ್ದ ಕ್ರಿಸ್ಮಸ್‌ ಪಾರ್ಟಿಗೆ ಕರೀಷ್ಮಾ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಈ ವೇಳೆ ಕರೀಷ್ಮಾ ಪುತ್ರ ಮಾಧ್ಯಮ ಹಾಗೂ ಪಪಾರಾಜಿಗಳ ಕಣ್ಣಿಗೆ ಬಿದ್ದಿದ್ದರು.

https://youtube.com/shorts/gEMq-dEvIr0?si=Z6Zd1WzOHUCKxUNb

 ಅಂದು ಕರೀಷ್ಮಾ ಪುತ್ರನ ಫೋಟೋ ವೈರಲ್ ಆಗಿದ್ದು, ಈಗ ಸಂಜಯ್ ದತ್ ಫೋಟೋದ ಜೊತೆ ತಳುಕು ಹಾಕಿ ವೈರಲ್ ಆಗುತ್ತಿದೆ. ಅನೇಕರು ಇದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಹಾಗಂತ ಸಿನಿಮಾ ರಂಗದಲ್ಲಿದ್ದಾಗ ಸಂಜಯ್ ದತ್‌ಗೂ ಆಗಿನ ಬಹು ಬೇಡಿಕೆಯ ನಟಿ ಆಗಿದ್ದ ಕರೀಷ್ಮಾ ಕಪೂರ್‌ಗೂ ಯಾವುದೇ ಆಫೇರ್‌ಗಳು ಇರಲಿಲ್ಲ ಎಂಬದು ಆಗಿನ ಸಿನಿಮಾ ಮಂದಿ ಹೇಳುವ ಮಾತು. 

ಇತ್ತ ಕರೀಷ್ಮಾ ಕಪೂರ್ ಅವರು ಸಿಂಗಲ್ ವುಮನ್ ಉದ್ಯಮಿ ಸಂಜಯ್ ಕಪೂರ್ ಅವರನ್ನು 2003ರಲ್ಲಿ ಮದ್ವೆಯಾಗಿದ್ದ ಕರೀಷ್ಮಾ ಅವರಿಗೆ ಇಬ್ಬರು ಮಕ್ಕಳು. ಆದರೆ ದಾಂಪತ್ಯ ಕಲಹದ ಕಾರಣಕ್ಕೆ 2016ರಲ್ಲಿ ಅವರು ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. 

ಹೀಗಿರುವಾಗ ಕರೀಷ್ಮಾ ಪುತ್ರ ಸಂಜಯ್ ಹೋಲುವುದನ್ನು ನೋಡಿ ಅನೇಕರು ಕುಹಕವಾಡುತ್ತಿದ್ದಾರೆ. ಬಹುಶಃ ಅವರ ಮುತ್ತಜ್ಜಂದಿರ ಜೀನ್‌ಗಳು ಒಂದೇ ಆಗಿರಬಹುದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದರೆ, ಮತ್ತೆ ಕೆಲವರು ಭಾರತೀಯರಿಗೆ ಪಕ್ಕದ ಮನೆಯವರ ಕತೆ ಕೇಳುವುದರಲ್ಲಿ ಏನೋ ಖುಷಿ ಎಂದು ಕಾಮೆಂಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.