ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಬಗ್ಗೆ ಕೇಳಿಬರುತ್ತಿದೆ ಅಪಸ್ಪರ, ಯಾಕೆ ಏನಾಯಿತು ಗೊತ್ತಾ
ಕನ್ನಡದ ಬಿಗ್ಬಾಸ್ ಕಾರ್ಯಕ್ರಮ ನಡೆಸಿಕೊಡುತ್ತಿರುವ ಕಿಚ್ಚ ಸುದೀಪ್ ಬಗ್ಗೆಯೇ ಅಪಸ್ವರ ಕೇಳಿ ಬರ್ತಿದೆ ಹೌದು ಇಂದು ಸೋಶಿಯಲ್ ಮೀಡಿಯಾ ತುಂಬ ಸ್ಟ್ರಾಂಗ್ ಆಗಿದೆ. ಎಲ್ಲರೂ ವಿಮರ್ಶಕರೇ. ಈ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಜೊತೆ ಕಿಚ್ಚ ಸುದೀಪ್ ಅವರು ನಡೆಸುತ್ತಿರುವ ಸಂವಹನದ ಬಗ್ಗೆ ಕೂಡ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ಪದೇ ಪದೇ ರೂಲ್ಸ್ ಮುರಿದಿರುವ ವಿನಯ್ ಗೌಡ ಅವರು, ಎಲ್ಲ ಸ್ಪರ್ಧಿಗಳ ಜೊತೆಯೂ ಬಹುತೇಕ ಜಗಳ ಆಡಿದ್ದಾರೆ, ಜೋಕ್ ಮಾಡಿದ್ದಾರೆ. ಇವರಿಗೆ ಬುದ್ಧಿ ಹೇಳೋದು ಯಾರು? ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಸ್ಪರ್ಧಿಗಳಿಗೆ ವೀಕ್ಷಕರಿಗೆ ಒಂದು ಸಲಹಾ ಪತ್ರ ಬಂತು. ಅದರಲ್ಲಿ ವಿನಯ್ ಗೌಡ ಅವರಿಗೆ ಈ ಮನೆಯಲ್ಲಿ ನಿಮ್ಮಂಥ ಆನೆಯನ್ನ ಕೆಡವಿ ಬೀಳಿಸುವವರು ಇಲ್ಲ.
ಖಡಕ್ ಆಗಿ ಮಾತನಾಡಿ ಖೆಡ್ಡಾ ತೋಡುವವರೂ ಕೂಡ ಇಲ್ಲ. ನೀವು ಸಾಟಿನೇ ಇಲ್ಲದಿರುವ ಸಲಗ ಅಂತ ಅಂದುಕೊಂಡು ದಿಕ್ಕು ತಪ್ಪಬೇಡಿ. ಅದು ತುಂಬಾ ಡೇಂಜರ್ ಎಂದು ಇತ್ತು. ಇದನ್ನು ನೋಡಿ ಕಿಚ್ಚ ಸುದೀಪ್ ಅವರು ಸಿಂಪಲ್ ಆಗಿ ವಿನಯ್‌ಗೆ ಇದು ನಿಮಗೆ ಕಾಂಪ್ಲಿಮೆಂಟ್ ಕೂಡ ಹೌದು, ಎಚ್ಚರಿಕೆ ಕೂಡ ಹೌದು ಎಂದು ಹೇಳಿ ಮುಗಿಸಿಬಿಟ್ಟರು.
ಸಂಗೀತಾ ಶೃಂಗೇರಿ ಜೊತೆ ವಿನಯ್ ಗೌಡ ಜಗಳ ನಡೆದಿದ್ದು ಹೇಗಿತ್ತು ಎನ್ನೋದನ್ನು ನೀವೆಲ್ಲ ನೋಡಿದ್ದಿರಿ. ವಿನಯ್ ಮಾತು ಹೆದರಿಸುವಂತಿದೆ ಅಂತ ಸಂಗೀತಾ ಹೇಳಿದ್ದರು. ಅದನ್ನು ಕೇಳಿಸಿಕೊಂಡು ವಿನಯ್ ಗೌಡ ಅವರು ಅವಳು ಯಾವಳು? ನಾನೇನು ಅವಳನ್ನ ಲವ್ ಮಾಡಿದ್ನಾ? ಹಾಗೆ ಹೀಗೆ ಅಂತೆಲ್ಲ ಸಿಕ್ಕಾಪಟ್ಟೆ ಮಾತುಗಳನ್ನಾಡಿದ್ದರು. ಆಮೇಲೆ ಇವರಿಬ್ಬರ ಮಧ್ಯೆ ಇರುವ ಸಮಸ್ಯೆ ಬಗೆಹರಿಯಿತು.
ಆದರೆ ವಿನಯ್ ಆಡಿದ ಮಾತುಗಳು, ಸಂಗೀತಾ ಮಾತುಗಳಿಗಿಂತ ಕಟುವಾಗಿತ್ತು. ಇದರ ಬಗ್ಗೆ ಯಾಕೆ ಸುದೀಪ್ ಅವರು ಪ್ರಶ್ನೆ ಮಾಡಲಿಲ್ಲ? ಎನ್ನುತ್ತಿದ್ದಾರೆ ನೆಟ್ಟಿಗರು. ಮೈಕಲ್ ಅಜಯ್ ಅವರ ಜೊತೆ ವಿನಯ್ ಗೌಡ ಅವರು ಏಕಕಾಲಕ್ಕೆ ಸ್ಮೋಕಿಂಗ್ ರೂಮ್ ಬಳಕೆ ಮಾಡಿದ್ದರು. ಇದರಿಂದ ಇಡೀ ಮನೆಯವರಿಗೆ ಶಿಕ್ಷೆ ಸಿಕ್ಕಿತು. ಈ ಬಗ್ಗೆ ಕೂಡ ಸುದೀಪ್ ಅವರು ವಿನಯ್‌ಗೆ ಹೆಚ್ಚು ಕ್ಲಾಸ್ ತಗೊಂಡಿಲ್ಲ.
ವಿನಯ್ ಗೌಡ, ಕಾರ್ತಿಕ್ ಮಹೇಶ್ ಅವರು ಇನ್ನೊಂದು ತಂಡ ಸೋತಾಗ ಮನಸ್ಸಿಗೆ ಬಂದ ಹಾಗೆ ಜೋಕ್ ಮಾಡಿದರು, ರೇಗಿಸಿದರು, ಕಾಮೆಂಟ್ ಮಾಡಿದರು. ಆರಂಭದಲ್ಲಿ ಗೆದ್ದೆ ಅಂತ ಬೀಗಿದ್ದ ವಿನಯ್ ಗೌಡ ಟೀಂ ಆಮೇಲೆ ಸೋತು ಸುಣ್ಣವಾಯ್ತು. ಆದರೆ ಸೋತಿತು ಅಂತ ಬೇರೆ ಟೀಂನ್ನು ರೇಗಿಸಿದ್ದು ಸರಿಯೇ? ಈ ಬಗ್ಗೆ ಕೂಡ ಕಿಚ್ಚ ಸುದೀಪ್ ಅವರು ಕಿವಿ ಹಿಂಡಿರಲಿಲ್ಲ.
ವಿನಯ್ ಗೌಡ ಅವರ ಮುಂದೆ ಮಾತನಾಡೋಕೆ ಹೆದರುತ್ತೀರಾ ಅಂತ ಸ್ಪರ್ಧಿಗಳ ಬಳಿ ಕಿಚ್ಚ ಸುದೀಪ್ ಕೇಳಿದ್ದರು.
ವಿನಯ್ ಗೌಡ ಮುಂದೆ ಮಾತನಾಡುತ್ತಿಲ್ಲ ಯಾಕೆ ಅಂತ ಕಿಚ್ಚ ಸುದೀಪ್ ಕೇಳಿದ್ದಾರೆ. ಆದರೆ ವಿನಯ್ ಗೌಡ ಮಿಸ್ಟೇಕ್ ಬಗ್ಗೆ ನೇರವಾಗಿ ಸುದೀಪ್ ಮಾತನಾಡಿಲ್ಲ. ತನ್ನ ಮಾತನ್ನು ಸಮರ್ಥಿಸಿಕೊಳ್ಳುವ ವಿನಯ್ ಅವರನ್ನು ಸುದೀಪ್ ಮೆಚ್ಚುತ್ತಾರೆ, ಆದರೆ ತಪ್ಪುಗಳ ಬಗ್ಗೆ ಮಾತನಾಡಬೇಕಲ್ಲ ಎಂದು ಅಭಿಮಾನಿಗಳು ನುಡಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.