ಸೀರಿಯಲ್ ನ ಟಿಯ ಸ್ನೇಹಿತನ ಮಡದಿಯ ಆರೋಪಕ್ಕೆ ಬೆಚ್ಚಿಬಿ ದ್ದ ಕರುನಾಡು

 

ಕಿರುತೆರೆ ಧಾರಾವಾಹಿ ನಟ ಚಂದ್ರಕಾಂತ್ ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟಿ ಪವಿತ್ರಾ ಜಯರಾಮ್ ಅವರ ಅಗಲಿಕೆಯನ್ನು ಅರಗಿಸಿಕೊಳ್ಳಲಾಗದೇ ಸಾವನ್ನಪ್ಪಿದ್ದಾರೆ ಎನ್ನುತ್ತಾರೆ ಅವರ ಆಪ್ತರು. ಪವಿತ್ರಾ ನಿಧನ ಚಂದ್ರಕಾಂತ್ ಅವರನ್ನು ಎಷ್ಟು ಹಿಂಸಿಸಿತ್ತು ಎಂಬುದನ್ನು ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಹೇಳುತ್ತವೆ. ಆದರೆ, ಈ ಇಬ್ಬರು ನಟರು ಬೇರೆ ಬೇರೆಯವರನ್ನು ಮದುವೆಯಾಗಿದ್ದವರು.

ಹೌದು. ನಟಿ ಪವಿತ್ರಾ ಜಯರಾಮ್ ಕನ್ನಡ ಸೇರಿದಂತೆ ಬೇರೆ ಭಾಷೆಯ ಹಲವು ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದು ಗೊತ್ತೇ ಇದೆ. ಆದರೆ, ಚಂದ್ರಕಾಂತ್ ಕೂಡ ಮದುವೆಯಾಗಿದ್ದವರು. ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಆದರೆ, ಪವಿತ್ರಾ ಅವರ ಸ್ನೇಹವಾದ ನಂತರ ಕುಟುಂಬದಿಂದ ದೂರ ಉಳಿದಿದ್ದರು ಎಂದು ತಿಳಿದುಬಂದಿದೆ.

ಪವಿತ್ರಿ ಜಯರಾಮ್ ಮತ್ತು ಚಂದ್ರಕಾಂತ್ 'ತ್ರಿನಯನಿ' ಧಾರಾವಾಹಿಯಲ್ಲಿ ಕೆಲಸ ಮಾಡುವಾಗ ಭೇಟಿಯಾದವರು. ಸ್ನೇಹ ಪ್ರೀತಿಗೆ ತಿರುಗಿತು. ಅವರಿಬ್ಬರು ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದರು. ಶೀಘ್ರದಲ್ಲೇ ಮದುವೆಯಾಗಲು ಯೋಚಿಸುತ್ತಿದ್ದರು. ಆದರೆ, ಚಂದ್ರಕಾಂತ್ ತಮ್ಮ ಹೆಂಡತಿ ಮಕ್ಕಳನ್ನು ಬಿಟ್ಟು ಪವಿತ್ರಾ ಜೊತೆಯಲ್ಲಿಯೇ ಇದ್ದರು. ಚಂದ್ರಕಾಂತ್ ತನ್ನ ಪತ್ನಿಗೆ ವಿಚ್ಛೇದನ ನೀಡಿ ಪವಿತ್ರಾಳನ್ನು ಮದುವೆಯಾಗಲು ಬಯಸಿದ್ದರು.. <a href=https://youtube.com/embed/Vbgypvh-UnE?autoplay=1&mute=1><img src=https://img.youtube.com/vi/Vbgypvh-UnE/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಈ ಘಟನೆಗಳ ಬೆನ್ನಲ್ಲೇ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಚಂದ್ರಕಾಂತ್ ಪತ್ನಿ ಶಿಲ್ಪಾ. ಪವಿತ್ರಾ ಜಯರಾಮ್ ಅವರು ಚಂದ್ರಕಾಂತ್ ಬಾಳಿನಲ್ಲಿ ಬಂದ ಮೇಲೆ ಹೇಗೆ ತಮ್ಮ ಜೀವನ ಬದಲಾಯಿತು ಎಂದು ಹೇಳಿದ್ದಾರೆ. ಕುಡಿದು ಮನೆಗೆ ಬರುತ್ತಿದ್ದರು. ನನ್ನನ್ನು ಹೊಡೆಯುತ್ತಿದ್ದರು. ಇಬ್ಬರು ಕಾಲ್ ಮಾಡಿ ನನಗೆ ಹಿಂಸೆ ಕೊಡುತ್ತಿದ್ದರು ಎಂದಿದ್ದಾರೆ.

ಚಂದ್ರಕಾಂತ್ ಅವಳಿಲ್ಲದ ಲೋಕದಲ್ಲಿ ಬದುಕಲು ಸಾಧ್ಯವಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಚಂದ್ರಕಾಂತ್ ತೆಗೆದುಕೊಂಡ ನಿರ್ಧಾರದಿಂದ ಅವರ ತಂದೆ-ತಾಯಿ, ಪತ್ನಿ, ಮಕ್ಕಳು ನರಕ ಅನುಭವಿಸುವಂತಾಗಿದೆ. ಈಗ ಮಕ್ಕಳು ಮತ್ತು ಚಂದ್ರಕಾಂತ್ ಹೆತ್ತವರ ಜವಾಬ್ದಾರಿ ಶಿಲ್ಪಾ ಮೇಲೆ ಬಿದ್ದಿದೆ. ಅವರನ್ನು ಯಾರು ನೋಡಿಕೊಳ್ಳಬೇಕು.. ಮಕ್ಕಳ ಭವಿಷ್ಯವೇನು.. ಎಂಬುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇಂತಹ ಕಷ್ಟದ ಸಮಯದಲ್ಲಿ ಯಾರು ತನ್ನ ಬೆಂಬಲಕ್ಕೆ ನಿಲ್ಲುತ್ತಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ ಶಿಲ್ಪಾ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.