ಮತ್ತೆ ಎಂಟ್ರಿ ಕೊಟ್ಟ ಕೀರ್ತಿ, ವೀಕ್ಷಕರಿಗೆ ಭರ್ಜರಿ ಧಮಾಕ

 

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಪಾತ್ರಕ್ಕೆ ಕಾಯ್ತಿದ್ದಾರೆ ವೀಕ್ಷಕರು. ಬೇಗ ಕೀರ್ತಿಯನ್ನ ಸ್ಟೋರಿಗೆ ಕರೆತನ್ನಿ ಎಂಬುದು ನೋಡುಗರ ಬಹುದೊಡ್ಡ ಬೇಡಿಕೆ. ಈ ನಡುವೆ ಕೀರ್ತಿ ಕಾರ್​ನಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿರೋ ದೃಶ್ಯ ತೋರಿಸಲಾಗಿತ್ತು. ಮತ್ತೆ ಧಾರಾವಾಹಿಗೆ ಕೀರ್ತಿ ಬಂದಿದ್ದಾಳೆ ಎಂದು ಅವರ ಅಭಿಮಾನಿಗಳು ಖುಷಿಯಾಗಿದ್ದರು.

ಆದರೆ ಕೀರ್ತಿ ಲಕ್ಷ್ಮೀಯ ಭ್ರಮೆ ಮಾತ್ರ ಎಂದು ಗೊತ್ತಾಗಿ ವೀಕ್ಷಕರು ಬೇಸರ ಮಾಡಿಕೊಂಡಿದ್ದಾರೆ. ಧಾರಾವಾಹಿ ಬೋರ್ ಆಗ್ತಿದೆ. ನಮಗೆ ಕೀರ್ತಿ ಬೇಕೇ ಬೇಕು ಅಂತ ಕಾಮೆಂಟ್​ಗಳ ಮೂಲಕ ಬೇಸರ ಹೊರಹಾಕ್ತಿದ್ದಾರೆ. ಲಕ್ಷ್ಮೀಗೆ ಸೈಕಾಲಜಿಕಲ್ ಪ್ರಾಬ್ಲಂ ಇದೆ ಎಂದು ಕಾವೇರಿ ಪ್ರೂವ್​ ಮಾಡೋಕೆ ಹರಸಾಹಸ ಪಡ್ತಿದ್ದಾಳೆ. ಟ್ವಿಸ್ಟ್ ಇರೋದು ಇಲ್ಲೇ. ಮಗ ಕೈಬಿಟ್ಟು ಹೋಗ್ಬಾರ್ದು ಅಂತ ಪ್ರಯತ್ನ ಪಡ್ತಿರೋ ಕಾವೇರಿಗೆ ತಿರುಗೇಟು ನೀಡಿದ್ದಾನೆ ವೈಷ್ಣವ್​.  <a href=https://youtube.com/embed/MUK6DUG29mk?autoplay=1&mute=1><img src=https://img.youtube.com/vi/MUK6DUG29mk/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಲಕ್ಷ್ಮೀ ಎಲ್ಲೋ ನಾನು ಅಲ್ಲೇ ಅಂತ. ಲಕ್ಷ್ಮೀ ಪರ ಬ್ಯಾಟ್​ ಬೀಸಿದ್ದಾನೆ. ಅಲ್ಲಿಗೆ ಕಾವೇರಿ ಸೊಕ್ಕಿಗೆ ಪೆಟ್ಟು ಬಿದ್ದಂತಾಗಿದೆ. ಇತ್ತ ಅತ್ತೆಗೆ ಸವಾಲ್​ ಹಾಕಿ ಸಮರ ಸಾರಿದ್ದಾಳೆ ಲಕ್ಷ್ಮೀ.ಸೀತೆಯ ಅವತಾರದಲ್ಲಿ ಲಕ್ಷ್ಮೀ, ರಾಮನ ಅವತಾರದಲ್ಲಿ ವೈಷ್ಣವ್​ ರಾವಣನ ದಹನ ಮಾಡೋಕೆ ಸಿದ್ದರಾಗಿದ್ದಾರೆ. ರಾವಣ ನಾನೇ ಅಂತ ಕಾವೇರಿ ಮೆರಿಯುತ್ತಿದ್ದು, ಕಾವೇರಿ ಕೋಟೆಯನ್ನ ಸುಟ್ಟು ಭಸ್ಮ ಮಾಡೋಕೆ ಹನುಮನ ಅವತಾರದಲ್ಲಿ ಕೀರ್ತಿ ಎಂಟ್ರಿ ಕೊಟ್ಟಿದ್ದಾಳೆ. 

ಪ್ರೋಮೋ ಸಖತ್ ಇಂಟ್ರಸ್ಟಿಂಗ್​ ಆಗಿದ್ದು, ಕೀರ್ತಿ ಬಂದಿರೋದು ನಿಜವಾಗಿರಲಿ, ಕಾವೇರಿಗೆ ಬಿಗ್​ ಶಾಕ್​ ಕೊಡಲಿ ಅಂತ ವೀಕ್ಷಕರು ಕುತೂಹಲದಿಂದ ಕಾಯ್ತಿದ್ದಾರೆ. ಈ ಕಾಯುಕೆಗೆ ಸದ್ಯದಲ್ಲೇ ಬ್ರೇಕ್​ ಬೀಳಲಿದೆ. ಲಕ್ಷ್ಮೀಗೆ ಶಕ್ತಿ ತುಂಬೋಕೆ ಹೊಸ ಅವತಾರದಲ್ಲಿ ಕೀರ್ತಿ ಎಂಟ್ರಿ ಕೊಡ್ತಿದ್ದಾಳೆ. ವೀಕ್ಷಕರ ದೊಡ್ಡ ಸರ್​ಪ್ರೈಸ್​ ಪ್ಯಾಕೇಜ್​ ರೆಡಿ ಮಾಡಿದೆ ಲಕ್ಷ್ಮೀ ಬಾರಮ್ಮ ತಂಡ. ಇನ್ನು ಕೆಲವರು ಕೀರ್ತಿ ಬಂದ್ಲು ಲಕ್ಷ್ಮಿ ಹೋದ್ಲು. ಮುಂದೆ ಲಕ್ಷ್ಮಿ ಬರ್ತಾಳೆ ಕೀರ್ತಿ ಹೋಗ್ತಾಳೆ ಎಂದು ಕಾಲೆಳೆದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.