ಕೇರಳ ಕಾಲೇಜು ಪ್ರಿನ್ಸಿಪಲ್ ಗೆ ಅವಾಜ್ ಹಾಕಿದ ವಿದ್ಯಾರ್ಥಿ, ಹೊರಗಡೆ ಬಾ ನಿನ್ನ ಬಿಡಲ್ಲ
Jan 25, 2025, 14:15 IST

ಈಗೆಲ್ಲಾ ಕಾಲ ಬದಲಾಗಿದೆ. ಗುರು ದೇವರಲ್ಲ. ಹೌದು ಸಾಮಾನ್ಯವಾಗಿ ಯಾವ ಶಾಲೆಗಳಲ್ಲೂ ಮೊಬೈಲ್ಗಳೊಟ್ಟಿಗೆ ಮಕ್ಕಳು ಬರುವಂತಿಲ್ಲ, ಅದನ್ನು ವಶಪಡಿಸಿಕೊಂಡು ಪೋಷಕರಿಗೆ ಕರೆ ಮಾಡಿ ಎಚ್ಚರಿಕೆ ನೀಡಲಾಗುತ್ತದೆ. ಯಾಕೆಂದರೆ ಮಕ್ಕಳು ಮೊಬೈಲ್ ಕಡೆಗೆ ಗಮನ ಕೊಟ್ಟರೆ ವಿದ್ಯಾಭ್ಯಾಸದಲ್ಲಿ ಹಿಂದುಳಿಯಬೇಕಾಗುತ್ತದೆ. ಹೀಗಾಗಿ ಶಾಲೆ ಹಾಗೂ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.
ಆದರೆ ಮಕ್ಕಳು ಮೊಬೈಲ್ಗಳನ್ನು ತೆಗೆದುಕೊಂಡು ಶಿಕ್ಷಕರ ಬಳಿ ಸಿಕ್ಕಿಬೀಳುವ ಪ್ರಕರಣಗಳೂ ಹೆಚ್ಚಾಗಿದೆ.ಅದು ಇದು ಸಬೂಬು ಹೇಳಿ ಅವರಿಂದ ಮೊಬೈಲ್ ವಾಪಸ್ ಪಡೆಯುವುದು ಹೇಗೆ ಎಂಬುದನ್ನು ನೋಡುತ್ತಾರೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಶಿಕ್ಷಕರಿಗೇ ಜೀವ ಬೆದರಿಕೆಯೊಡ್ಡಿದ್ದಾರೆ.ಮೊಬೈಲ್ ವಶಪಡಿಸಿಕೊಂಡಿದ್ದಕ್ಕೆ ವಿದ್ಯಾರ್ಥಿಯೊಬ್ಬ ಶಿಕ್ಷಕರಿಗೆ ಜೀವ ಬೆದರಿಕೆ ಹಾಕಿರುವ ಘಟನೆ ಕೇರಳದ ಪಾಲಕ್ಕಾಡ್ನಲ್ಲಿ ನಡೆದಿದೆ.
<a href=https://youtube.com/embed/LIbmjqP5I1c?autoplay=1&mute=1><img src=https://img.youtube.com/vi/LIbmjqP5I1c/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ವಿದ್ಯಾರ್ಥಿ ತರಗತಿಯಲ್ಲಿ ಮೊಬೈಲ್ ಬಳಕೆ ಮಾಡಿ ಶಾಲಾ ನಿಯಮಗಳನ್ನು ಉಲ್ಲಂಘಿಸಿದ ಘಟನೆ ನಡೆದಿದೆ. ಶಾಲೆಯು ಕಟ್ಟುನಿಟ್ಟಾದ ನೋ-ಫೋನ್ ನೀತಿಯನ್ನು ಹೊಂದಿದೆ. ಮತ್ತು ಫೋನ್ ವಶಪಡಿಸಿಕೊಂಡಿದ್ದಕ್ಕಾಗಿ ಶಿಕ್ಷಕರ ಕ್ರಮದ ವಿರುದ್ಧ ವಿದ್ಯಾರ್ಥಿ ಆಕ್ರೋಶಗೊಂಡಿದ್ದ.ವಿದ್ಯಾರ್ಥಿಯು ತನ್ನ ಫೋನ್ ತೆಗೆದುಕೊಂಡಾಗ ಆರಂಭದಲ್ಲಿ ಗಲಾಟೆ ಮಾಡಿದ್ದಾನೆ.
ನಂತರ ಆತನನ್ನು ಪ್ರಾಂಶುಪಾಲರ ಕಚೇರಿಗೆ ಕರೆಸಿಕೊಂಡು, ಶಾಲೆಯಿಂದ ಹೊರಗೆ ಕಾಲಿಟ್ಟರೆ ತನಗೆ ಕೊಲೆ ಮಾಡುವುದಾಗಿ ಹೇಳಿ ಶಿಕ್ಷಕರಿಗೆ ಬೆದರಿಕೆ ಹಾಕಿದ್ದಾನೆ. ಈ ಘಟನೆ ಶುಕ್ರವಾರ ನಡೆದಿದ್ದು, ಶಿಕ್ಷಕರು ಇದುವರೆಗೆ ಯಾವುದೇ ದೂರು ದಾಖಲಿಸಿಲ್ಲ. ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಒಟ್ಟಿನಲ್ಲಿ ಹೇಳುವುದಾದರೆ ಶಿಕ್ಷಕರು ಇನ್ಮುಂದೆ ಬಯ್ಯಲು ಕೂಡಾ ಭಯ ಪಡುವಂತಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.

