ತನ್ನ ಸ್ಥಾನವನ್ನು ರಿಷಬ್ ಶೆಟ್ಟಿ ಗೆ ಬಿಟ್ಟುಕೊಟ್ಟ ಕಿಚ್ಚ ಸುದೀಪ್? ಇನ್ಮುಂದೆ ಟಿವಿ ನೋಡಲ್ಲ ಎಂದ ಜನ

 
 ಬಿಗ್‌ ಬಾಸ್‌ ಕನ್ನಡ ಸೀಸನ್‌ 11ಶುರುವಾಗಿ ಎರಡು ವಾರಗಳು ಕಳೆದಿದ್ದು, ಇದನ್ನು ನಿರ್ವಹಿಸುತ್ತಿರುವ ಕಿಚ್ಚ ಸುದೀಪ್‌, ‘ಇದೇ ಕೊನೆಯ ಸೀಸನ್‌, ಇನ್ನು ಮುಂದೆ ಬಿಗ್‌ ಬಾಸ್‌ ಕಾರ್ಯಕ್ರಮ ನಿರೂಪಣೆ ಮಾಡುವುದಿಲ್ಲ’ ಎಂದು ಹೇಳಿಕೊಂಡಿದ್ದಾರೆ. ಸುದೀಪ ಅವರ ಈ ನಿರ್ಧಾರದ ಹಿಂದೆ ಕಾರಣವೇನಿರಬಹುದು ಎಂಬ ಪ್ರಶ್ನೆ ಸುದೀಪ್‌ ಅವರ ಹಾಗೂ ಬಿಗ್‌ಬಾಸ್‌ ಅಭಿಮಾನಿಗಳಲ್ಲಿ ಮೂಡಿದೆ. ಈ ಬಗ್ಗೆ ಕಿಚ್ಚ ಸುದೀಪ್ ಅವರು ಇನ್ನೊಂದು ಟ್ವೀಟ್ ಮಾಡಿ ಸಮರ್ಥನೆ ನೀಡಿದ್ದಾರೆ.
ಅನೇಕರು ಸುದೀಪ ಅವರಿಗೋಸ್ಕರವೇ ‘ಬಿಗ್‌ ಬಾಸ್‌’ ನೋಡುವ ರೂಢಿಯನ್ನು ಇಟ್ಟುಕೊಂಡಿದ್ದಾರೆ. ಈ ಸೀಸನ್‌ ಶುರುವಾಗುವ ಮುನ್ನ ಸುದೀಪ, ಹೆಚ್ಚೆಚ್ಚು ಸಿನಿಮಾ ಮಾಡಬೇಕು ಎಂದು ಹೇಳಿದ್ದರು. ಆ ನಿಟ್ಟಿನಲ್ಲಿ ಸದ್ಯಕ್ಕೆ ಅವರು ‘ಮ್ಯಾಕ್ಸ್‌’ ರಿಲೀಸ್‌ಗೆ ಎದುರು ನೋಡುತ್ತಿದ್ದು, ಅದರ ಜತೆಗೆ ಅನೂಪ್‌ ಭಂಡಾರಿ ನಿರ್ದೇಶನದ ‘ಬಿಲ್ಲರಂಗ ಬಾಷಾ’ ಚಿತ್ರಕ್ಕೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. 
ಈ ಕಾರಣಕ್ಕೆ ಈ ನಿರ್ಧಾರ ಇರಬಹುದು ಎಂಬ ಊಹೆ ಒಂದೆಡೆಯಾದರೆ, ಇನ್ನೊಂದೆಡೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 9ರ ಸ್ಪರ್ಧಿ ರೂಪೇಶ್‌ ರಾಜಣ್ಣ, ಕಿಚ್ಚ ಸುದೀಪ ಬಿಗ್‌ ಬಾಸ್‌ ನಿರೂಪಣೆಯಿಂದ ಹೊರನಡೆಯಲು ತೀರ್ಮಾನಿಸಿದ್ದರ ಹಿಂದೆ ಬೇರೆಯದ್ದೇ ವಿಷಯ ಇದೆ ಎಂದಿದ್ದಾರೆ. ಸುದೀಪರಿಗೆ ಅವಮಾನ ಆಗಿದೆ ಎಂಬರ್ಥದ ಪೋಸ್ಟ್‌ ಅನ್ನು ಅವರು ಹಂಚಿಕೊಂಡಿದ್ದರು. ಈಗ ಇದಕ್ಕೆಲ್ಲ ಕಿಚ್ಚ ಸುದೀಪ್ ಅವರೇ ಸ್ಪಷ್ಟನೆ ನೀಡಿದ್ದಾರೆ. <a href=https://youtube.com/embed/5O3U_EApcBM?autoplay=1&mute=1><img src=https://img.youtube.com/vi/5O3U_EApcBM/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ನನ್ನ ಟ್ವೀಟ್ ನೋಡಿ ಎಲ್ಲರೂ ತೋರಿಸಿದ ಪ್ರೀತಿ, ಬೆಂಬಲವನ್ನು ನಾನು ಮೆಚ್ಚುವೆ. ವಾಹಿನಿ ಹಾಗೂ ನನ್ನ ಮಧ್ಯೆ ಏನೋ ನಡೆದಿದೆ ಎಂದು ಬಿಂಬಿಸುವಂತೆ ಕೆಲವರು ವಿಡಿಯೋ ಮಾಡುತ್ತಿದ್ದಾರೆ, ಕಾಮೆಂಟ್ ಮಾಡುತ್ತಿದ್ದಾರೆ. ನಾನು ವಾಹಿನಿ ಜೊತೆ ದೊಡ್ಡ ಪ್ರಯಾಣ ಮಾಡಿದ್ದೇನೆ, ಪಾಸಿಟಿವ್ ಜರ್ನಿಯಿತ್ತು. ಇದರ ಜೊತೆಗೆ ಅಗೌರವ ಎನ್ನುವ ಪದ ಇರಬಾರದು. ನಾನು ಬಿಗ್ ಬಾಸ್ ಬಿಟ್ಟೆ ಎನ್ನುವ ವಿಷಯದ ಹಿಂದೆ ಇದ್ದ ಊಹೆಗಳು ಆಧಾರರಹಿತವಾಗಿವೆ, ಅಷ್ಟೇ ಅಲ್ಲದೆ ಸಮರ್ಥನೆಯ ಕೊರತೆಯಿದೆ. 
ನಾನು ಮಾಡಿದ ಟ್ವೀಟ್ ನೇರ, ಪ್ರಾಮಾಣಿಕವಾಗಿದೆ. ಕಲರ್ಸ್ ಜೊತೆಗೆ ಇರುವ ನನ್ನ ಸಂಬಂಧ ಅದ್ಭುತವಾಗಿದೆ. ವಾಹಿನಿಯು ನನ್ನನ್ನು ಯಾವಾಗಲೂ ಗೌರವದಿಂದ ನಡೆಸಿಕೊಂಡಿದ್ದಾರೆ. ನಿರ್ದೇಶಕ ಪ್ರಕಾಶ್ ನಂಬಲಾಗದಷ್ಟು ಪ್ರತಿಭಾವಂತ ಮತ್ತು ಶಕ್ತಿಯುತ ವ್ಯಕ್ತಿ. ಅವರ ಮೇಲೆ ನನಗೆ ಉತ್ತಮ ಗೌರವ ಇದೆ. ನನ್ನ ತಂಡದಲ್ಲಿರುವವರ ಮೇಲೆ ಅನಗತ್ಯ ಆರೋಪ ಬಂದಾಗ ಸುಮ್ಮನೆ ಕುಳಿತು ಆನಂದಿಸುವವನು ನಾನಲ್ಲ ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.