ಮೊದಲ ಮಗುವಿಗೆ ಕಾಯುತ್ತಿರುವ ಕೃಷ್ಣ ಮಿಲನ ಜೋಡಿ; ಅವಳಿ ಜವಳಿ ಎಂದ ಡಾಕ್ಟರ್

 

ಚಂದನವನದ ಚೆಲುವೆ ಮಿಲನ ನಾಗರಾಜ್ ಸುಂದರ ಬೇಬಿ ಬಂಪ್ ಫೋಟೋಗಳನ್ನು  ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಗೋಲ್ಡನ್  ಕಲರ್ ಕುರ್ತಾ, ಕೆಂಪು ದುಪ್ಪಟ್ಟ ಧರಿಸಿರುವ ಕೃಷ್ಣನ ಮಡದಿ ಸುಂದರವಾಗಿ ಕಾಣುತ್ತಿದ್ದಾರೆ. ಹೌದು ಗರ್ಭಿಣಿ ಆಗಿರುವ ಇವರು ಇನ್ನಷ್ಟು ಮುದ್ದಾಗಿ ಕಾಣ್ತಿದ್ದಾರೆ.

ಕಟ್ಟಡವೊಂದರ ಬಾಲ್ಕನಿಯಲ್ಲಿ ನಿಂತಿರುವ ಮಿಲನಾ ಫೋಟೋಗೆ ಪೋಸ್ ನೀಡಿದ್ದಾರೆ. ತದೇಕಚಿತ್ತದಿಂದ ಕಟ್ಟಡದ ಮೇಲ್ಭಾಗದಿಂದ ನಗರದ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿರೋದನ್ನು ಫೋಟೋದಲ್ಲಿ ಕಾಣಬಹುದು. ಒಟ್ಟು ಎರಡು ಫೋಟೋಗಳನ್ನು ಮಿಲನ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ಅಭಿಮಾನಿಗಳು ತಮ್ಮ ಸೋಶಿಯಲ್ ಮೀಡಿಯಾ ಖಾತಯಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಈ ಪೋಸ್ಟ್‌ಗೆ ಅಭಿಮಾನಿಗಳು ಕಮೆಂಟ್‌ನಲ್ಲಿ ಹಾರ್ಟ್ ಸಿಂಬಲ್ ಹಾಕಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಗಮನ ನೀಡಿ, ಹೆಚ್ಚು ಪ್ರವಾಸ ಮಾಡಬೇಡಿ ಎಂದು ಕೆಲವರು ಬರೆದ್ರೆ, ನಾವು ಜೂನಿಯರ್ ಕೃಷ್ಣನಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಬಹುತೇಕರು ಕ್ಯೂಟ್ ಫೋಟೋ, ತುಂಬಾ ಮುದ್ದಾಗಿ ಕಾಣಿಸುತ್ತಿದ್ದೀರಿ ಎಂದಿದ್ದಾರೆ.

ಎರಡು ದಿನಗಳ ಹಿಂದೆ  ಬೇಬಿಮೂನ್ ಪ್ರವಾಸದ ಎಲ್ಲಾ ಫೋಟೋಗಳ ವಿಡಿಯೋವನ್ನು ಮಿಲನ ಪೋಸ್ಟ್ ಮಾಡಿದ್ದರು. ಪತಿ ಸೇರಿದಂತೆ ಕುಟುಂಬಸ್ಥರ ಜೊತೆಗೆ ಕಳೆದ ಸುಂದರ ಕ್ಷಣಗಳು ವಿಡಿಯೋದಲ್ಲಿ ಸೆರೆಯಾಗಿತ್ತು. ಈ ವಿಡಿಯೋದಲ್ಲಿ ಅಲ್ಲಿಯ ಸ್ಥಳೀಯ ಸಂಸ್ಕೃತಿಯನ್ನು ತೋರಿಸಲಾಗಿತ್ತು. ಈ ವಿಡಿಯೋಗೆ 90 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.