90 ವಯಸ್ಸಿನಲ್ಲೂ ಕಲ್ಲು ಬಂಡೆಯಂತಿರುವ ಹಿರಿಯ ಕಲಾವಿದೆ ಲಕ್ಷ್ಮೀದೇವಿ;
ಕೆಲವೊಂದಿಷ್ಟು ಕಲಾವಿದರಿಗೆ ಕಲೆ ಎಂಬುದು ಬರೀ ನಟನೆ, ದುಡಿಮೆ ಅಲ್ಲ. ಅದೇ ಜೀವನ. ಹಿಂದಿನ ಕಾಲದಲ್ಲಿ ಕಲಾವಿದರೆಲ್ಲಾ ನಟನೆಯನ್ನು ದೇವರಂತೆಯೇ ಪೂಜಿಸುತ್ತಿದ್ದರು. ಸಿಕ್ಕ ಪಾತ್ರಗಳಿಗೆ ಜೀವ ತುಂಬುತ್ತಿದ್ದರು. ಕೆಲವರು ಇಂದು ದೈಹಿಕವಾಗಿ ಅಗಲಿದ್ದರೂ, ಅವರ ನಟನೆ, ಅವರ ಪಾತ್ರಗಳೇ ಇಂದಿಗೂ ಜನರನ್ನು ಕಾಡುತ್ತಿವೆ.
ಇನ್ನು ಅದೆಷ್ಟೋ ಹಿರಿಯ ಕಲಾವಿದರಿಗೆ ನಟಿಸುವ ತುಡಿತವಿದ್ದರು, ನಟನೆಯ ಅವಕಾಶಗಳು ಕಡಿಮೆ. ಇಂಥ ಪರಿಸ್ಥಿತಿಗೆ ಹಿರಿಯ ಕಲಾವಿದರು ಕೂಡ ಬೇಸರ ಮಾಡಿಕೊಳ್ಳುತ್ತಾರೆ. ನಮ್ಮನ್ನ ಸೈಡ್ ಲೈನ್ ಮಾಡಿದ್ದು ಯಾಕೆ..? ಅವಕಾಶ ಸಿಕ್ಕರೆ ಖಂಡಿತಾ ನಟಿಸುತ್ತೇವೆ ಎನ್ನುತ್ತಾರೆ. ಅಂಥ ಬದ್ದತೆಯುಳ್ಳ ಕಲಾವಿದರಲ್ಲಿ ಲಕ್ಷ್ಮೀದೇವಿ ಅವರು ಕೂಡ ಒಬ್ಬರು.
ಜೀ ಕನ್ನಡದಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿ ಆರಂಭವಾಗಿ ಎಲ್ಲರ ಮನಸ್ಸು ಗೆಲ್ಲುತ್ತಿದೆ. ಕೌಟುಂಬಿಕ ಕಥೆಯನ್ನು ಹೊಂದಿರುವ ಧಾರಾವಾಹಿ. ಕೂಡು ಕುಟುಂಬದ ಧಾರಾವಾಹಿ. ಈ ಧಾರಾವಾಹಿಯಲ್ಲಿ ಮಧ್ಯಮ ವರ್ಗದ ಕುಟುಂಬದ ತಂದೆ-ತಾಯಿ ಹೆಣ್ಣು ಮಕ್ಕಳ ಮದುವೆ ಮಾಡಬೇಕೆಂಬ ಆಸೆ ಹಾಗೂ ಒಂದು ಮನೆಯನ್ನು ಕಟ್ಟಬೇಕು ಎಂಬುದು ಆಸೆಯನ್ನು ಇಟ್ಟುಕೊಂಡಿದ್ದಾರೆ. ಈ ಕೂಡು ಕುಟುಂಬದಲ್ಲಿ ಮನೆಯ ಹಿರಿಯವರಾಗಿ ಲಕ್ಷ್ಮೀದೇವಿ ಕಾಣಿಸಿಕೊಂಡಿದ್ದಾರೆ.
ಲಕ್ಷ್ಮೀದೇವಿ ಒಂದ್ಕಾದಲ್ಲಿ ಬಹುಬೇಡಿಕೆಯ ನಟಿಯಾಗಿದ್ದವರು. ಅದರಲ್ಲೂ ಯಜಮಾನ ಸಿನಿಮಾ ಯಾರಿಗೆ ಮರೆಯುವುದಕ್ಕೆ ಸಾಧ್ಯ ಹೇಳಿ. ಆ ಸಿನಿಮಾದಲ್ಲಿ ಮಕ್ಕಳಿಗೆ ಅಮ್ಮಮ್ಮನಾಗಿ ಕಾಣಿಸಿಕೊಂಡಿದ್ದವರು. ಈಗಲೂ ಅಭಿಮಾನಿಗಳ ನೆಚ್ಚಿನ ಅಮ್ಮಮ್ಮನೇ ಆಗಿದ್ದಾರೆ. ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನಟಿಸುತ್ತಿರುವ ಅಮ್ಮಮ್ಮ, ಮೇಕಪ್ ಕೂಡ ಮಾಡುತ್ತಾರೆ.
ತಲೆ ಕೂದಲಿಗೆ ಕ್ಲಿಪ್‌ಗಳನ್ನು ಹಾಕಿ, ಈ ವಯಸ್ಸಲ್ಲೂ ಆ ರೀತಿಯ ಮೇಕಪ್ ಮಾಡುತ್ತಿರುವುದನ್ನು ನೋಡಿದ ಜನ ವಾವ್ ಎನ್ನುತ್ತಿದ್ದಾರೆ. ಅವರ ಕೆಲಸದ ಮೇಲಿನ ಬದ್ಧತೆಗೆ ಹಾರ್ಟ್ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.