ಅನುಶ್ರೀ ಜೊತೆ ಲಾಯರ್ ಜಗದೀಶ್ ಡ್ಯಾನ್ಸ್; ವೇದಿಕೆಯಲ್ಲಿದ್ದ ಶಿವಣ್ಣ ಮುಜುಗರ
Nov 4, 2024, 10:56 IST
ಬಿಗ್ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ಸಖತ್ ಫೇಮಸ್ ಆಗಿದ್ದರು.ಹೌದು ಬಿಗ್ಬಾಸ್ ಮನೆಯಲ್ಲಿ ಹವಾ ಕ್ರಿಯೇಟ್ ಮಾಡಿದ್ದು ಲಾಯರ್ ಜಗದೀಶ್. ಅವರು ಹೊರಕ್ಕೆ ಬಂದಿರುವುದಕ್ಕೆ ಇದಾಗಲೇ ಹಲವರಿಗೆ ಸಿಕ್ಕಾಪಟ್ಟೆ ಬೇಸರವಾಗಿದೆ. ಲಾಯರ್ಗೆ ಗೇಟ್ ಪಾಸ್ ಕೊಟ್ಟಿದ್ದನ್ನ ನೋಡಿ ಈ ಸಾರಿಯ ಬಿಗ್ ಬಾಸ್ ಫಿನಿಶ್ ಅಂತಿದ್ದಾರೆ ಫ್ಯಾನ್ಸ್. ಒಬ್ಬರಾದ್ಮೇಲೆ ಒಬ್ಬರ ಮೇಲೆ ಎಗರಾಡ್ತಿರುವ ಅವರು ಕರ್ನಾಟಕದ ಕ್ರಶ್ ಎಂಬ ಪಟ್ಟ ಪಡೆದಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಇನ್ನೋರ್ವ ಸ್ಪರ್ಧಿ ಹಂಸಾ ಜೊತೆ ಇವರ ರೊಮ್ಯಾನ್ಸ್ ಸಕತ್ ಸದ್ದು ಮಾಡಿತ್ತು.
ಆದರೆ ಇದೇ ವೇಳೆ ಅವರ ಪತ್ನಿ ಸೌಮ್ಯಾ ಮಾತ್ರ ಪತಿಯ ಕುರಿತು ಬೇರೆದೇ ಹೇಳಿಕೆ ನೀಡಿದ್ದರು. ಜಗದೀಶ್ ರೋಮ್ಯಾಂಟಿಕ್ ಅಲ್ಲ. ಆದ್ರೆ ಬಿಗ್ ಬಾಸ್ ಮನೆಯಲ್ಲಿ ಅವರ ಡಾನ್ಸ್ ನೋಡಿ ಖುಷಿಯಾಗಿದ್ದೇನೆ. ಮನೆಯಲ್ಲಿ ನಾನು ಡಾನ್ಸ್ ಮಾಡ್ತೇನೆ. ಅವರು ನಗ್ತಾ ಕುಳಿತಿರ್ತಾರೆ. ಸ್ವಲ್ಪ ನಾಚಿಕೆ ಸ್ವಭಾವ ಅವರದ್ದು ಎಂದಿದ್ದರು. ಪತ್ನಿ ಏನೇ ಹೇಳಿದರೂ ಜಗದೀಶ್ ಅವರು ರೊಮ್ಯಾಂಟಿಕ್ ಮ್ಯಾನ್ ಎಂದೇ ಬಿಗ್ಬಾಸ್ನಿಂದ ಫೇಮಸ್ ಆದವರು.
ಇದೀಗ ಅವರಿಗೆ ಬಿಗ್ಬಾಸ್ನಿಂದ ಬಂದ ಮೇಲೆ ಸಹಜವಾಗಿ ಡಿಮ್ಯಾಂಡ್ ಹೆಚ್ಚಾಗಿದೆ. ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಗೆ ಅವರು ಆಗಮಿಸಿದ್ದಾರೆ. ಬಿಗ್ಬಾಸ್ನಿಂದ ಬರುವ ಸ್ಪರ್ಧಿಗಳಿಗೆ ಸಾಮಾನ್ಯವಾಗಿ ಎಲ್ಲಾ ರಿಯಾಲಿಟಿ ಷೋಗಳಲ್ಲಿ ಅವಕಾಶ ನೀಡುವುದು ಹಿಂದಿನಿಂದಲೂ ನಡೆದು ಬಂದಿದೆ. ಅದೇ ರೀತಿ ಡಿಕೆಡಿಯಲ್ಲಿ ಜಗದೀಶ್ ಅವರು ಡಾನ್ಸ್ ಮಾಡಿದ್ದಾರೆ.
ಇದೇ ವೇಳೆ ಕೆಲವು ಮಾತನಾಡಿರುವ ಜಗದೀಶ್ ಅವರು, ಪಕ್ಕದಲ್ಲೇ ಇರುವ ಆ್ಯಂಕರ್ ಅನುಶ್ರೀ ತಮ್ಮ ಸ್ವರ್ಗ ಎಂದೂ ಹೇಳಿದ್ದಾರೆ! ವೇದಿಕೆಯ ಮೇಲೆ ತಮಾಷೆ ಮಾಡುವ ಸಮಯದಲ್ಲಿ ಲಾಯರ್ ಜಗದೀಶ್ ಅವರು, ನನ್ನ ಲಕ್ಕಿ ನಂಬರ್ ಸೆವೆನ್. ನನ್ನ ಪಕ್ಕವೇ ಇದೆ ಹೆವನ್ ಎಂದು ಅನುಶ್ರೀಯವರನ್ನು ಉದ್ದೇಶಿಸಿ ಹೇಳಿದ್ದಾರೆ. ಇದನ್ನು ಕೇಳಿ ಅನುಶ್ರೀ ಅವರು ನಾಚಿ ನೀರಾಗಿದ್ದಾರೆ.
<a href=https://youtube.com/embed/oHlFF2eysYs?autoplay=1&mute=1><img src=https://img.youtube.com/vi/oHlFF2eysYs/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಆನಂತರ ಆ್ಯಂಕರ್ ಅನುಶ್ರೀ ಮತ್ತು ಜಗ್ಗು ದಾದಾ ಸೇರಿ ತುಝೆ ದೇಖಾ ತೋ ಯೇ ಜಾನಾ ಸನಮ್ ಹಾಡಿಗೆ ರೊಮಾನ್ಸ್ ಮಾಡಿದ್ದಾರೆ. ಇದನ್ನು ನೋಡಿ ನಟ ಶಿವರಾಜ್ ಕುಮಾರ್ ನಾಚಿಕೊಂಡಿದ್ದಾರೆ.ಅವರ ಹೊರತಾಗಿ ತರ್ಲೆ ಕಮೆಂಟಿಗರು ಥರಹೇವಾರಿ ಕಮೆಂಟ್ಸ್ ಹಾಕುತ್ತಿದ್ದಾರೆ.
ಬಿಗ್ಬಾಸ್ನಲ್ಲಿ ಹಂಸ ಮೇಡಂ ಆಯ್ತು, ಈಗ ಅನುಶ್ರೀ ಮೇಡಂ ಎಂದು ಕೆಲವರು ಹೇಳಿದ್ರೆ, ಜಗ್ಗು ದಾದಂಗೆ ಒಟ್ನಲ್ಲಿ ಆಂಟಿಗಳು ಬೇಕು ಎನ್ನೋದಾ ಮತ್ತೊಂದಿಷ್ಟು ಮಂದಿ? ಮತ್ತೆ ಹಲವರು ಹಿಂದಿ ಹಾಡು ಹಾಕಿದ್ದಕ್ಕೆ ಗರಂ ಆಗಿದ್ದಾರೆ. ಅನುಶ್ರೀ ಅವರ ಫ್ಯಾನ್ಸ್, ಅವರಿಗೆ ಬೇಗ ಮದುವೆಯಾಗುವಂತೆ ಸಲಹೆ ಕೊಟ್ಟಿದ್ದಾರೆ. ಇಲ್ಲದಿದ್ದರೆ ನಿಮ್ಮ ಮೇಲೆ ಏನೆಲ್ಲಾ ಕೆಟ್ಟಕೆಟ್ಟದ್ದಾಗಿ ಮಾತಾಡ್ತಾರೆ, ನೋಡಲು ಆಗಲ್ಲ ಎಂದು ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.