ಕೊರಗಜ್ಜ ದೈವದ ಈ ಒಂದು ಕಥೆ ಕೇಳಿ, ನಿಮ್ಮ ಜೀವನದ ಕಷ್ಟಗಳು ಕರಗಿ ಹೋಗುತ್ತದೆ

 

ತುಳುನಾಡಿನಾದ್ಯಂತ ಹೆಚ್ಚು ಪೂಜಿಸುವ ದೈವವೆಂದರೆ ಕೊರಗಜ್ಜ. ಕಳೆದುಹೋದ ಯಾವುದನ್ನಾದರೂ ಮರಳಿ ಪಡೆಯಲು, ಮಾಡಬೇಕಾದ ಯಾವುದೇ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲು ಅಥವಾ ಯಾವುದೇ ಸಮಸ್ಯೆಯನ್ನು ಪರಿಹರಿಸಿಕೊಳ್ಳು ಮೊದಲ ಮತ್ತು ಅಗ್ರಗಣ್ಯವಾಗಿ, ಜನರು ಈ ದೈವವನ್ನು ನೆನಪಿಸಿಕೊಳ್ಳುತ್ತಾರೆ.

ಕೊರಗ ತನಿಯು ಐತಿಹಾಸಿಕ ವ್ಯಕ್ತಿಯೇ ಹೊರತು ಪೌರಾಣಿಕ ಸೃಷ್ಟಿಯಲ್ಲ. ಭಾರತೀಯ ದ್ರಾವಿಡರು ತಮ್ಮ ಪೂರ್ವಜರನ್ನು ಆರಾಧಿಸುತ್ತಾರೆ. ಅವರು ತಮ್ಮ ಸಮುದಾಯಕ್ಕೆ ಹೆಚ್ಚಿನ ಒಳಿತಿಗಾಗಿ ಅಸಾಮಾನ್ಯ ಕೆಲಸಗಳನ್ನು ಮಾಡಿದ್ದಾರೆ. ಈ ಕಾರಣದಿಂದಾಗಿ ಅವರನ್ನು ಅವರ ನಂತರದ ವಂಶಸ್ಥರು ಗುರುತಿಸಿ ಪೂಜಿಸುತ್ತಿದ್ದರು. ಕೊರಗಜ್ಜ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕೊರಗ ತನಿಯ. 

ಇಲ್ಲಿ ಕೊರಗ ಎಂಬುದು ಸಮುದಾಯದ ಹೆಸರು ಮತ್ತು ಅಜ್ಜ ಎಂಬುದು ತುಳು ಭಾಷೆಯಲ್ಲಿ ಸಾಮಾನ್ಯವಾಗಿ ಹಳೆಯ ಪುರುಷ ನಾಗರಿಕರಿಗೆ ಬಳಸುವ ಪದವಾಗಿದೆ. ತನ್ನ ಮಧ್ಯವಯಸ್ಸಿನಲ್ಲಿ ದೈವತ್ವವನ್ನು ಪಡೆದುಕೊಂಡಿದ್ದರೂ. ಮತ್ತು ಅವನ ಮೇಲಿನ ಪ್ರೀತಿ ಮತ್ತು ವಾತ್ಸಲ್ಯದಿಂದಾಗಿ ಜನರು ಅವನನ್ನು ಅಜ್ಜ ಎಂದು ಕರೆಯಲು ಪ್ರಾರಂಭಿಸಿದರು. ಕೊರಗಜ್ಜ ನ ತಂದೆ-ತಾಯಿ ಅವರಿಗೆ ಸುಮಾರು ವರ್ಷಗಳಿಂದ ಮಕ್ಕಳ ಆಗಿರುವುದಿಲ್ಲ ಹಾಗೂ ಇವರ ತಂದೆ ತಾಯಿಯನ್ನು ಎಲ್ಲರೂ ಕೂಡ ನೋಡಿ ನಗುತ್ತಿರುತ್ತಾರೆ. 

ನಂತರ ಕೊರಗಜ್ಜನ ತಾಯಿ ಮನಸ್ಸಿಗೆ ತುಂಬಾ ನೋವಾಗುತ್ತದೆ ಅದಕ್ಕಾಗಿ ಅವರು ಹರಕೆಯನ್ನು ಮಾಡಿಕೊಳ್ಳುತ್ತಾರೆ ಅದೇನಪ್ಪ ಅಂದರೆ ನನಗೆ ಸಂತಾನ ಕೊಡು ಸ್ವಾಮಿ ಎಂದು ಮಂಜುನಾಥಸ್ವಾಮಿಯ ಬಳಿ ಕೇಳಿಕೊಂಡು ಹರಕೆ ಕಟ್ಟಿಕೊಳ್ಳುತ್ತಾರೆ ನಂತರ ತಾಯಿಯ ಎದೆ ಹಾಲು ಕುಡಿಯುವ ಭಾಗ್ಯ ಸಿಗಲಿಲ್ಲ. ನಂತರ ತಂದೆಯ ಕೈತುತ್ತು ತಿನ್ನುವಷ್ಟು ಭಾಗ್ಯ ಕೂಡ ಸಿಗಲಿಲ್ಲ ತಂದೆ-ತಾಯಿ ಇಬ್ಬರೂ ಕೂಡ ಸಾವನ್ನಪ್ಪುತ್ತಾರೆ ಹಾಗೂ ಆ ಊರಿಗೆ ಕಾಯಿಲೆ ಬರುತ್ತದೆ ಅಲ್ಲಿ ಇರುವಂತಹ ಜನರೆಲ್ಲ ಸಾವನ್ನಪ್ಪುತ್ತಾರೆ.

ಇನ್ನು ಹಸಿವಾಗಿ ತಿನ್ನಲು ತನಿಯನು ಹಣ್ಣುಗಳನ್ನು ಕೊಯ್ಯಲು ಮುಂದಾಗುತ್ತಾನೆ. ಹಣ್ಣುಗಳು ಅವನಿಗೆ ಎಟುಕಾದ ಕಾರಣ ತನ್ನ ಒಂದು ಕಾಲನ್ನು ದೇವಸ್ಥಾನದ ಮೆಟ್ಟಿಲುಗಳ ಮೇಲೆ ಇಡುತ್ತಾನೆ. ಆಗಲೂ ಅವನಿಗೆ ಮರದ ಕೊಂಬೆಗಳು ಎಟಕುವುದಿಲ್ಲ. ಆದ್ದರಿಂದ ತನ್ನ ಮತ್ಯೊಂದು ಕಾಲನ್ನು ದೇವಾಲಯದ ಕಲಶದ ಮೇಲೆ ಇಡುತ್ತಾನೆ. ದೇವಾಲಯದೊಳಗಿದ್ದ ದೈವವು ಕೋಪದಿಂದ ಮಾಯವಾಯಿತು. 

ಅಂದಿನಿಂದ ತನಿಯ ದೈವತ್ವವನ್ನು ಪಡೆದನು ಎಂದು ಕೆಲವು ಕಥೆಗಳು ಹೇಳಿದರೆ, ಇನ್ನು ಕೆಲವು ಕಥೆಗಳ ಪ್ರಕಾರ, ದೇವಸ್ಥಾನದ ಮೆಟ್ಟಿಲುಗಳ ಮೇಲೆ ತನಿಯನು ಕಾಲಿಟ್ಟ ಕಾರಣ ಕೋಪಗೊಂಡ ಕೆಲವು ಗ್ರಾಮಸ್ಥರು ಕೊಂದಿರಬಹುದೆಂದು ಹೇಳಲಾಗುತ್ತದೆ. ಆದರೆ, ಇಂದಿಗೂ ಕೊರಗಜ್ಜ ಎಂದು ಕರೆಯಲ್ಪಡುವ ಕೊರಗ ತನಿಯನ ಮರಣದ ಕುರಿತು ಯಾವುದೇ ಸ್ಪಷ್ಟವಾದ ಮಾಹಿತಿಯಿಲ್ಲ. <a href=https://youtube.com/embed/EL7rp7q5wmo?autoplay=1&mute=1><img src=https://img.youtube.com/vi/EL7rp7q5wmo/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಕೊರಗಜ್ಜ ಬೆಳೆದಿದ್ದು ಕಳ್ಳು ವ್ಯಾಪಾರ ಮಾಡುವ ಮೈರಕ್ಕನ ಕುಟುಂಬದಲ್ಲಿ. ಕಳ್ಳನ್ನು ಸೇವಿಸುವುದು ಆ ಕುಟುಂಬದ ಕಾರ್ಯಕ್ರಮದ ಭಾಗವಾಗಿತ್ತು ಮತ್ತು ಮೈರಕ್ಕ ಕಳ್ಳನ್ನು ತಯಾರಿಸುವಾಗ ಕೊರಗ ತನಿಯನಿಗೆ ಒಂದಿಷ್ಟು ಕುಡಿಯಲು ನೀಡುತ್ತಿದ್ದಳು ಈ ಕಾರಣದಿಂದ ತನಿಯನಿಗೆ ಮದ್ಯವನ್ನು ಅರ್ಪಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ಕೊರಗ ತನಿಯನಿಗೆ ಸಾಂಪ್ರದಾಯಿಕ ಮದ್ಯವನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತಿತ್ತು. 

ಆದರೆ, ಆಧುನಿಕ ಕಾಲದಲ್ಲಿ ಸಾಂಪ್ರದಾಯಿಕ ಮದ್ಯದ ಅನಾನುಕೂಲತೆಯಿಂದ ಪ್ಯಾಕ್‌ ಮಾಡಿದ ಮದ್ಯವನ್ನು, ಚಕ್ಕುಲಿಯನ್ನು, ಎಲೆ - ಅಡಿಕೆಯನ್ನು ಮತ್ತು ಬೀಡಿ ಪ್ಯಾಕೆಟ್‌ನ್ನು ಅರ್ಪಿಸಲಾಗುತ್ತದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.