ಹಿಂದೂ ಸ್ವಾಮಿಜಿಗಳ ಅವಸ್ಥೆ ನೋಡಿ, ಮಠದ ಒಳಗೆ ಕಂತೆ ಕಂತೆ ನೋಟಿನ ಚೀಲ

 
ರರ

ಉದ್ಯಮಿ ಗೋವಿಂದಬಾಬು ಪೂಜಾರಿಗೆ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ್ದರೆನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಬಂಧನಕ್ಕೆ ಒಳಗಾಗಿರುವ ಇನ್ನೊಬ್ಬ ಪ್ರಮುಖ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿಗೆ ಸಂಬಂಧಿಸಿದಂತೆ ಇನ್ನೊಂದಷ್ಟು ಮಾಹಿತಿ 
ಹೊರಬಿದ್ದಿದೆ.

ಈ ಪ್ರಕರಣಕ್ಕೆ ಸಂಬಂಧಿತ 65 ಲಕ್ಷ ರೂ. ಮೊತ್ತವನ್ನು ಹಾಲಶ್ರೀ ಸ್ವಾಮೀಜಿ ತನ್ನ ಚಾಲಕನ ಮೂಲಕ ಮೈಸೂರಿನ ಕಚೇರಿಯೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬನಿಗೆ ತಲುಪಿಸಿದ್ದ. ಆದರೆ ಬಳಿಕ ಆ ಹಣವನ್ನು ತೆಗೆದುಕೊಳ್ಳಲು ಯಾರೂ ಬಂದಿರಲಿಲ್ಲ. ಹೀಗಾಗಿ ಅಪರಿಚಿತ ವ್ಯಕ್ತಿ ಆ ಹಣವನ್ನು ಮಠಕ್ಕೆ ಕೊಂಡೊಯ್ದು ಇರಿಸಿದ್ದ. ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಹಿರೇಹಡಗಲಿಯ ಮಠಕ್ಕೆ ಇಂದು ಬೆಳಗ್ಗೆ ಬಂದಿದ್ದ ಆ ಅಪರಿಚಿತ ವ್ಯಕ್ತಿ ಹಣ ಇಟ್ಟು, ಅದನ್ನು ವಿಡಿಯೋ ಮಾಡಿ ಹೇಳಿಕೊಂಡಿದ್ದಾನೆ. <a href=https://youtube.com/embed/GAP90ycOluo?autoplay=1&mute=1><img src=https://img.youtube.com/vi/GAP90ycOluo/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಮಠಕ್ಕೆ ಬಂದು ಪಲ್ಲಕ್ಕಿ ಬಳಿ ಹಣದ ಬ್ಯಾಗ್ ಇಟ್ಟು, ನಾನು ಸ್ವಾಮೀಜಿ ಕೊಟ್ಟಿದ್ದ ಹಣದ ಬ್ಯಾಗ್ ಇಟ್ಟಿದ್ದೇನೆ ಅಂತ ವಿಡಿಯೋ ಮಾಡಿದ್ದ. ಹಣದ ಬ್ಯಾಗ್ ಪತ್ತೆಯಾದ ಬಳಿಕ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ನಂತರ ಸಿಸಿಬಿ ಪೊಲೀಸರು ಬಂದು ಪರಿಶೀಲನೆ ನಡೆಸಿ ಹಣ ವಶಕ್ಕೆ ಪಡೆದಿದ್ದಾರೆ. ಈ ಹಣದಲ್ಲಿ ವಕೀಲರ ಫೀಸ್ ಖರ್ಚು ಎಂದು ಚಾಲಕ ರಾಜು 4 ಲಕ್ಷ ರೂ. ತೆಗೆದುಕೊಂಡಿದ್ದ. 

ಉಳಿದ ಹಣ ಹಾಲಶ್ರೀ ಮಠದ ಬಳಿ ಇಟ್ಟಿದ್ದೇನೆ ಎಂದು ಈ ಅಪರಿಚಿತ ವ್ಯಕ್ತಿ ವಿಡಿಯೋದಲ್ಲಿ ಪ್ರಸ್ತಾಪಿಸಿದ್ದ. ಇನ್ನು ಆ ದಿನ ಸ್ವಾಮೀಜಿ ಚಾಲಕನನ್ನು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದರಿಂದ ಅವರ ಲಾಸ್ಟ್ ಲೊಕೇಷನ್ ಮೈಸೂರಿನಲ್ಲಿ ಟ್ರೇಸ್ ಆಗಿತ್ತು. ನಂತರ ಮೈಸೂರು ಭಾಗದಲ್ಲಿ ಸಾಕಷ್ಟು ಹುಡುಕಾಟ ನಡೆಸಿದ್ದ ಪೊಲೀಸರು, ಸ್ವಾಮೀಜಿಯ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.