ರಾತ್ರಿ ಕನಸಿನಲ್ಲಿ ಬಂದ ವಿಷ್ಣು ದೇವರು ಮರುದಿನ ಭೂಮಿ ಅಗೆದಾಗ ಸಿಕ್ಕಿದ್ದೇನು ಗೊ.ತ್ತಾ

 

ಕನಸುಗಳಲ್ಲಿ ಬಂದದ್ದು ಒಮ್ಮೆಮ್ಮೆ ನಿಜವಾಗುತ್ತದೆ ಎನ್ನುವ ಮಾತಿದೆ ಆದರೆ ಅಚ್ಚರಿಯ ವಿಷಯವೇನೆಂದರೆ, ವ್ಯಕ್ತಿಯೊಬ್ಬರಿಗೆ ಕನಸಿನಲ್ಲಿ ಬಂದ ಸೂಚನೆಯನ್ನು ಅನುಸರಿಸಿ ಜಮೀನೊಂದರಲ್ಲಿ ಉತ್ಖನನ ಮಾಡಿದಾಗ ಪುರಾತನ ಕಾಲದ ಗೋಪಾಲಕೃಷ್ಣನ ವಿಗ್ರಹವೊಂದು ಪತ್ತೆಯಾದ ಘಟನೆ 
ಬೆಳ್ತಂಗಡಿಯ ತೆಕ್ಕಾರು ಎಂಬ ಗ್ರಾಮದಲ್ಲಿ ನಡೆದಿದೆ.

ಹತ್ತಾರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ ಲಕ್ಷ್ಮಣ್ ಎಂಬುವರು, ಇತ್ತೀಚೆಗೆ ತಮ್ಮ ಮೂಲ ಗ್ರಾಮವಾದ ತೆಕ್ಕಾಡಿಗೆ ತೆರಳಿ ಅಲ್ಲಿ ಒಂದಿಷ್ಟು ಭೂಮಿ ಖರೀದಿಸಿದ್ದರು. ಹಾಗೆ ಖರೀದಿಸಿದ್ದ ಭೂಮಿಯಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದರು. ಇತ್ತೀಚೆಗೆ, ಅವರಿಗೊಂದು ವಿಚಿತ್ರವಾದ ಕನಸೊಂದು ಬಿದ್ದಿತ್ತು. ಆ ಕನಸಿನಲ್ಲಿ ಅವರ ಮನೆಯ ಪಕ್ಕದ ಜಮೀನೀನ ಭೂಮಿಯ ಕೆಳಗೆ ಗೋಪಾಲಕೃಷ್ಣನ ವಿಗ್ರಹವೊಂದು ಇರುವುದಾಗಿ ಕನಸು ಬಿದ್ದಿತ್ತು.

ಜಮೀನಿನಲ್ಲಿ ಯಾವ ದಿಕ್ಕಿನಲ್ಲಿ, ಯಾವ ಭಾಗದಲ್ಲಿ ಆ ವಿಗ್ರಹವಿದೆ ಎಂಬುದನ್ನು ಕನಸಿನಲ್ಲಿ ಸೂಚಿಸಲಾಗಿತ್ತು. ಈ ಕನಸು ಕಂಡ ಕೂಡಲೇ ದಿಗ್ಭ್ರಾಂತರಾದ ಲಕ್ಷ್ಮಣ್ ಅವರು ಕೆಲವು ಗ್ರಾಮಸ್ಥರ ಮುಖಂಡರಲ್ಲಿ ಈ ಬಗ್ಗೆ ಪ್ರಸ್ತಾಪಿಸಿದಾಗ ಕುತೂಹಲಕಾರಿಯಾದ ವಿಚಾರವೊಂದು ಹೊರಬಿತ್ತು. ನೂರಾರು ವರ್ಷಗಳ ಹಿಂದೆ, ತೆಕ್ಕಾಡಿ ಗ್ರಾಮದಲ್ಲಿ ಗೋಪಾಲಕೃಷ್ಣನ ದೇವಸ್ಥಾನವಿದ್ದು, ಆನಂತರದ ದಿನಗಳಲ್ಲಿ ಅದು ಕ್ರಮೇಣ ನೆಲಸಮವಾಯಿತು ಎಂದು ಗ್ರಾಮಸ್ಥರ ಮುಖಂಡರು ತಿಳಿಸಿದರು. 

ಆ ಮಾಹಿತಿ ಅವರಿಗೆ ತಮ್ಮ ಹಿರಿಯರಿಂದ ಬಂದಿದ್ದು, ಆ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ದೇವಸ್ಥಾನ ಎಲ್ಲಿತ್ತು ಎಂಬುದನ್ನು ಯಾರಿಗೂ ಗೊತ್ತಿರಲಿಲ್ಲ ಎಂದು ತಿಳಿಸಿದರು. ಅವರು ಹೇಳಿದ ಮತ್ತೊಂದು ಕುತೂಹಲಕಾರಿ ವಿಚಾರವೇನೆಂದರೆ, ಕೆಲವು ವರ್ಷಗಳ ಹಿಂದೆ ಊರಿನ ಕೆಲವು ಸಂಪ್ರದಾಯಸ್ಥರು ಸೇರಿ ಆ ದೇವಾಲಯವನ್ನು ಪತ್ತೆ ಮಾಡಲು ಸ್ಥಳೀಯ ದೈವವೊಂದರ ಮುಂದೆ ಪ್ರಶ್ನೆ ಇಟ್ಟಿದ್ದರಂತೆ. 

ಆಗ, ಆ ದೈವವು ತೆಕ್ಕಾಡಿ ಗ್ರಾಮದ ಹೊರವಲಯದಲ್ಲಿರುವ ಹಾಮಾದ್ ಬಾವಾ ಎಂಬುವರ ಹೆಸರಿಗೆ ಸೇರಿದ ಜಮೀನಿನ ಕೆಳಗಡೆ ಇದೆಯೆಂದು ಹೇಳಲಾಗಿತ್ತಂತೆ. ದೇವರು ಹೇಳಿತ್ತೆಂದು ಹೋಗಿ ಆ ಜಮೀನಿನ ಮಾಲೀಕ ಹಾಮಾದ್ ಬಾವಾ ಅವರಿಗೆ ಕೇಳಿದಾಗ ಅದು ತಮ್ಮ ಪೂರ್ವಿಕರಿಂದ ಬಂದಿರುವ ಜಮೀನೆಂದೂ ಅದರಲ್ಲಿ ಯಾವ ದೇವಸ್ಥಾನದ ಕುರುಹು ಇಲ್ಲವೆಂದೂ ಅವರು ಹೇಳಿದ್ದರು. 

ಒಬ್ಬರ ಮಾಲೀಕತ್ವದಲ್ಲಿರುವ ಜಮೀನಿನಲ್ಲಿ ಉತ್ಖನನ ಕಷ್ಟವಾಗಿದ್ದರಿಂದ ಆ ವಿಚಾರವನ್ನು ಅಲ್ಲಿಗೇ ಬಿಟ್ಟುಬಿಡಲಾಗಿತ್ತೆಂದು ಗ್ರಾಮದ ಹಿರಿಯರು ಲಕ್ಷ್ಮಣ್ ಅವರಿಗೆ ಹೇಳಿದರು. ಆಗ ಲಕ್ಷ್ಮಣ್ ಅವರು ಆ ಹಿರಿಯರಿಗೆ ತಮಗೆ ಬಿದ್ದ ಕನಸಿನ ಬಗ್ಗೆ ವಿವರಿಸಿ, ತಮಗೆ ಹಾಮಾದ್ ಬಾವಾ ಅವರಿಗೆ ಸೇರಿದ ಜಮೀನನಿನ ಅಡಿಯಲ್ಲೇ ಗೋಪಾಲಕೃಷ್ಣನ ವಿಗ್ರಹವಿರುವ ಬಗ್ಗೆ ಕನಸು ಬಿದ್ದಿತ್ತು ಎಂದು ಹೇಳಿದರು. 

ಇದರಿಂದ ಎಲ್ಲರಲ್ಲೂ ಕುತೂಹಲ ಜಾಸ್ತಿಯಾಯಿತು. ಕೂಡಲೇ ಗ್ರಾಮಸ್ಥರು, ಸ್ಥಳೀಯ ಶಾಸಕ ಹರೀಶ್ ಪೂಂಜಾ ಅವರನ್ನು ಸಂಪರ್ಕಿಸಿ, ಅಲ್ಲಿಂದ ಜಿಲ್ಲಾಡಳಿತವನ್ನು ಸಂಪರ್ಕಿಸಿ, ಜಿಲ್ಲಾಡಳಿತದ ಮೂಲಕ ಹಾಮಾದ್ ಬಾವಾ ಅವರ ಜಮೀನಿನ ಉತ್ಖನನಕ್ಕೆ ಮನವೊಲಿಸಿದರು. ಹಾಮಾದ್ ಅವರ ಒಪ್ಪಿಗೆ ಮೇರೆಗೆ, ಲಕ್ಷ್ಮಣ್ ಅವರ ಕನಸಿನಲ್ಲಿ ಹೇಳಲಾದ ಜಾಗದಲ್ಲಿ ಉತ್ಖನನ ನಡೆಸಲಾಯಿತು.

ಜೆಸಿಬಿಯಿಂದ ಸುಮಾರು ಅಡಿಗಳವರೆಗೆ ಉತ್ಖನನ ನಡೆಸಿದ ನಂತರ ಆಳದಲ್ಲಿ ಗೋಪಾಲಕೃಷ್ಣನ ವಿಗ್ರಹ ಪತ್ತೆಯಾಯಿತು. ಉತ್ಖನನಕ್ಕಿಂತಲೂ ಮುಂಚೆ ಸರ್ವೇ ಮಾಡಿದಾಗ, ಮೂರ್ತಿ ಸಿಕ್ಕಿರುವ ಭೂಮಿಯು ಅಸಲಿಗೆ ಹಾಮಾದ್ ಬಾವಾ ಅವರಿಗೆ ಸೇರಿದ್ದಲ್ಲ ಎಂಬುದು ತಿಳಿದುಬಂದಿದೆ. ಮೂರ್ತಿ ಸಿಕ್ಕಿರುವ ಭೂಮಿ ಸರ್ಕಾರಿ ಭೂಮಿಯಾಗಿದ್ದು ಹಾಮಾದ್ ಅವರ ಪೂರ್ವಿಕರಲ್ಲಿ ಯಾರೋ ಸುಮಾರು 25 ಸೆಂಟ್ಸ್ ಇರುವ ಸರ್ಕಾರಿ ಭೂಮಿಯನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆಂದು ಹೇಳಲಾಗಿದೆ.  <a href=https://youtube.com/embed/4X9jMMsWC-Y?autoplay=1&mute=1><img src=https://img.youtube.com/vi/4X9jMMsWC-Y/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಹಾಗಾಗಿ, ಮೂರ್ತಿ ಸಿಕ್ಕಿರುವ ಸರ್ಕಾರಿ ಭೂಮಿಯನ್ನು ಗೋಪಾಲಕೃಷ್ಣ ದೇವಸ್ಥಾನ ಕಟ್ಟಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಗೋಪಾಲಕೃಷ್ಣ ಟ್ರಸ್ಟ್ ಎಂಬ ಸಂಸ್ಥೆಯನ್ನು ಆರಂಭಿಸಿ ಆ ಮೂಲಕ ದೇವಸ್ಥಾನ ಕಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.