'ಪ್ರೀತಿ ಮಾಡಿ ಮ.ಜಾ ಉಡಾಯಿಸಿದ ಪ್ರೇಮಿ' ಮದುವೆ ಮಾತ್ರ ಬೇಡ ಎಂದ ಯುವಕನ‌ ವಿರುದ್ಧ ದೂರು

 

ನವ ವಿವಾಹಿತೆ ಬಾಳಲ್ಲಿ ವಿಲನ್ ಆಗಿದ್ದಾನೆ ಹಳೇಯ ಪ್ರೇಮಿ. ಬೇರೆ ಯುವಕನೊಂದಿಗೆ ಮದುವೆಯಾದ ಮರುದಿನವೇ ಯುವತಿ ಬಾಳಲ್ಲಿ ಪ್ರೇಮಿ ಮುತ್ತುರಾಜ್ ಹೈಡ್ರಾಮಾ ಮಾಡಿದ್ದಾನೆ. ಯುವತಿ ಜೊತೆಗೆ ಇದ್ದ ಖಾಸಗಿ ಫೋಟೋ, ವಿಡಿಯೋ  ತೋರಿಸಿ ವಿಕೃತಿ ಮೆರೆದಿದ್ದಾನೆ. ಫೋಟೋ, ‌ವಿಡಿಯೋ‌ ನೋಡಿ ಇಡೀ ಕುಟುಂಬ ಶಾಕ್ ಆಗಿದ್ದು, ನವ ವಿವಾಹಿತೆಯನ್ನು ಮನೆಯಿಂದ ಹೊರ ಹಾಕಿದ್ದಾರೆ. 

ಇತ್ತ ಪ್ರೇಮಿ ಮನೆ ಎದುರು ನವವಿವಾಹಿತೆ, ಧರಣಿ ಕೂತಿದ್ದಾಳೆ. ಹಳೆ ಪ್ರೇಮಿಯನ್ನು ವಶಕ್ಕೆ ಪಡೆಯಲಾಗಿದೆ.ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಘಟನೆ ನಡೆದಿದ್ದು, ಸಂತ್ರಸ್ತ ಯುವತಿ ಹಾಗೂ ಆರೋಪಿ ಮುತ್ತುರಾಜ್​ ಕಳೆದ 6 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರಂತೆ. ಆದರೆ ಪ್ರಿಯಕರ ಆಕೆಯನ್ನು ಮದುವೆಯಾಗಲು ನಿರಾಕಸಿದ್ದ, ಈ ವೇಳೆ ಕುಟುಂಬಸ್ಥರು ಆಕೆಗೆ ಬೇರೆ ಯುವಕನ ಜೊತೆ ಮದುವೆ ಮಾಡಿಕೊಟ್ಟಿದ್ದಾರೆ. <a href=https://youtube.com/embed/RfqUj1LZgZE?autoplay=1&mute=1><img src=https://img.youtube.com/vi/RfqUj1LZgZE/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಯುವತಿ ಮದುವೆಯಾಗುತ್ತಿದ್ದಂತೆ ರೊಚ್ಚಿಗೆದ್ದ ಆರೋಪಿ ಮುತ್ತುರಾಜ್, ಮದುವೆಯಾದ ದಿನವೇ ಯುವತಿಯ ಪತಿ ಮನೆಗೆ ತೆರಳಿದ್ದನಂತೆ. ಅಲ್ಲದೇ ಯುವತಿ ತನ್ನೊಂದಿಗೆ ಕಳೆದ ಖಾಸಗಿ ಕ್ಷಣಗಳ ಫೋಟೋ ಹಾಗೂ ವಿಡಿಯೋಗಳನ್ನು ಆಕೆಯ ಗಂಡನಿಗೆ ತೋರಿಸಿದ್ದಾನೆ. ಇದರಿಂದ ನೊಂದ ಗಂಡನ ಕುಟುಂಬಸ್ಥರು, ನವ ವಿವಾಹಿತೆಯನ್ನು ಮನೆಯಿಂದ ಹೊರ ಹಾಕಿದ್ದಾರೆ.

ಮದುವೆಯಾದ ಗಂಡನ ಮನೆ ಇತ್ತ ತವರು ಮನೆಯೂ ಇಲ್ಲದೆ ಸದ್ಯ ಯುವತಿ ಬೀದಿಗೆ ಬಿದ್ದಿದ್ದಾಳೆ. ಇತ್ತ ಆರೋಪಿ ಮುತ್ತುರಾಜ್ ಕುಟುಂಬಸ್ಥರು ಆಕೆಯನ್ನು ಮಗನಿಗೆ ಮದುವೆ ಮಾಡಿಕೊಳ್ಳಲು ನಿರಾಕರಿಸುತ್ತಿದ್ದಾರಂತೆ. ದಿಕ್ಕುತೋಚದಂತಾದ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಪೊಲೀಸರಿಗೆ ದೂರು ನೀಡಿ ಆರೋಪಿ ಮನೆಯ ಎದುರು ಧರಣಿ ಕುಳಿತಿದ್ದಾಳೆ. ಈ ವೇಳೆ ಯುವತಿ ಹಾಗೂ ಯುವಕನ ಪೋಷಕರ ನಡುವೆ ತಳ್ಳಾಟ ನೂಕಾಟ ನಡೆದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.