ಕೋಟಿಯ ಒಡೆಯ ಮಂಗಳೂರಿನ ನೇತ್ರಾವತಿ ನದಿಗೆ ಹಾರಿ ಆತ್ಮಹ.ತ್ಯೆ, ಯಾಕೆ ಏನಾಯಿತು ಗೊತ್ತಾ

 

ಉಳ್ಳಾಲದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿ ಕೊಂಡಿದ್ದು, ಇದರೊಂದಿಗೆ ಕಳೆದ ಮೂರು ವರ್ಷಗಳಿಂದ ಆತ್ಮಹತ್ಯೆ ತಾಣವೆಂಬ ಕಳಂಕದಿಂದ ಮುಕ್ತಿ ಪಡೆಯುವ ಹಂತದಲ್ಲಿದ್ದ ಉಳ್ಳಾಲದ ನೇತ್ರಾವತಿ ಸೇತುವೆ ಮತ್ತೆ ಸುದ್ದಿಯಲ್ಲಿದೆ.

ಹೌದು 2019 ರಲ್ಲಿ ಕೆಫೆ ಕಾಫಿ ಡೇ ಮಾಲೀಕ ಸಿದ್ದಾಥ್೯ ಚಿಕ್ಕಮಗಳೂರಿನಿಂದ ಮಂಗಳೂರಿನ ಉಳ್ಳಾಲ ನೇತ್ರಾವತಿ ಸೇತುವೆ ಬಳಿಗೆ ಬಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಸರಣಿ ಆತ್ಮಹತ್ಯೆಗಳೇ ಇಲ್ಲಿ ನಡೆದಿದ್ದವು. ಇದನ್ನು ಮನಗಂಡು ನದಿಗೆ ಹಾರಿ ಆತ್ಮಹತ್ಯೆ ಮಾಡುವುದನ್ನು ತಡೆಯಲು ಜಿಲ್ಲಾಡಳಿತವು ಮೂಡಾ ಅಭಿವೃದ್ಧಿ ಅನುದಾನದ ಮೂಲಕ 2020 ರಲ್ಲಿ ಸೇತುವೆಯ ಎರಡೂ ಬದಿ ತಡೆಬೇಲಿ ನಿರ್ಮಿಸಿತ್ತು. 

ಆ ಬಳಿಕ ಈ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಬಹುತೇಕ ನಿಂತು ಹೋಗಿದ್ದವು. ಇದೀಗ ಇಂದು ಕೆಫೆ ಕಾಫಿ ಡೇ ಮಾಲೀಕ ಸಿದ್ದಾಥ್೯ ತವರೂರು ಚಿಕ್ಕಮಗಳೂರಿನ ಮುಗುಳಬಳ್ಳಿ ಗೋಕುಲ್ ಫಾಮ್೯ ನಿವಾಸಿ ಬಿ.ಎಸ್ ಶಂಕರ ಗೌಡ ಎಂಬವರ ಪುತ್ರ 37 ವರ್ಷ ಪ್ರಾಯದ ಪ್ರಸನ್ನ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿನ್ನ ಮಧ್ಯಾಹ್ನ ವೇಳೆ ತೊಕ್ಕೊಟ್ಟು ಕಡೆಯಿಂದ ಬಂದು ರಾಷ್ಟ್ರೀಯ ಹೆದ್ದಾರಿ 66 ರ ಬಳಿ ಕಾರು ನಿಲ್ಲಿಸಿ ತಡೆಬೇಲಿಯ ಬದಿಯಿಂದ ನದಿಗೆ ಹಾರಿದ್ದಾರೆ. ಕೆಲವು ಮಂದಿ ಪ್ರತ್ಯಕ್ಷ ದರ್ಶಿಗಳು ತತ್‌ಕ್ಷಣ ರಕ್ಷಣೆಗೆ ಓಡಿ ಬಂದಿದ್ದರೂ ಅದಾಗಲೇ ನೀರು ಪಾಲಾಗಿದ್ದರು. ಘಟನಾ ಸ್ಥಳದಲ್ಲಿ ಕುತೂಹಲಿಗರು ಜಮಾಯಿಸಿದ್ದರಿಂದ ರಸ್ತೆ ಸಂಚಾರದಲ್ಲಿ ಕೆಲ ಕಾಲ ಅಡಚಣೆ ಉಂಟಾಗಿತ್ತು.

ನಿನ್ನ ಸಂಜೆ ಅಷ್ಟರಲ್ಲಿ ಶವ ದೊರೆತಿದ್ದು ನೀರಿನಲ್ಲಿ ಹಾರಿದ ಬಳಿಕ ತೇಲುತ್ತಾ ಹೋಗುವ ದೃಶ್ಯವನ್ನು ಅದೇ ದಾರಿಯಲ್ಲಿ ಸಾಗುತ್ತಿದ್ದ ಸಾರ್ವಜನಿಕರು ಚಿತ್ರೀಕರಣ ಮಾಡಿದ್ದು, ಬಳಿಕ ಸಾಮಾಜಿಕ ಜಾಲತಾಣದಲ್ಲಿ ಆ ದೃಶ್ಯ ವೈರಲ್ ಆಗಿದೆ. ಸಂಜೆಯ ವೇಳೆಗೆ ಪ್ರಸನ್ನ ಅವರ ಮೃತದೇಹ ಪತ್ತೆಯಾಗಿದೆ. ಪ್ರಸನ್ನ ಅವರು ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಹೆಣ್ಮಕ್ಕಳನ್ನು ಅಗಲಿದ್ದಾರೆ.

(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.