ಮಂಗಳೂರು ಮಹೇಶ್ ಬಸ್ ಮಾಲೀಕ ಸಾ.ವಿಗೆ ಕಾರಣ ಏನು ಗೊತ್ತಾ, ಕೊನೆಗೂ ಬಯಲಾಯಿತು

 

ಮಂಗಳೂರಿನ ಖಾಸಗಿ ಬಸ್ ನ ಮಾಲೀಕರೊಬ್ಬರು ತಾವು ಇರುವ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ಮಹೇಶ್ ಬಸ್ ಮಾಲೀಕ ಪ್ರಕಾಶ್ ಶೇಖ ಎಂದು ಗುರುತಿಸಲಾಗಿದೆ. ಅವರು ಕದ್ರಿ ಕಂಬಳ ಸಮೀಪ ಇರುವ ಅಪಾರ್ಟ್ ಮೆಂಟ್ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. 
ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. 

ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಹೇಶ್ ಹೆಸರಿನಲ್ಲಿ ಹಲವಾರು ಸಿಟಿ ಬಸ್ ಗಳು ದಿನನಿತ್ಯ ಸಂಚರಿಸುತ್ತಿದ್ದು, ಜನಮನ್ನಣೆ ಪಡೆದಿದೆ. ಬಸ್ ಉದ್ಯಮದ ಬಗ್ಗೆ ಭಾರೀ ಪ್ರೀತಿ ಇಟ್ಟುಕೊಂಡಿದ್ದ ಪ್ರಕಾಶ್ ಯಾಕಾಗಿ ಸಾವಿಗೆ ಶರಣಾಗಿದ್ದಾರೆ ಎನ್ನುವುದು ಆಪ್ತ ಬಳಗಕ್ಕೆ ಶಾಕ್ ನೀಡಿದೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕಾಶ್ ಅವರು ಖಾಸಗಿ ಬಸ್, ಟೂರಿಸ್ಟ್, ಲಾರಿ ಉದ್ಯಮದಲ್ಲಿ ಹೆಸರು ಮಾಡಿದ್ದರು. 100ಕ್ಕೂ ಹೆಚ್ಚು ಬಸ್​ಗಳ ಮಾಲೀಕರಾಗಿದ್ದರು. ಪ್ರಕಾಶ್ ಶೇಖ ಸಾರಿಗೆ ಉದ್ಯಮಿ ಜಯರಾಮ್​ ಶೇಖ ಪುತ್ರರಾಗಿದ್ದಾರೆ. ಪ್ರಕಾಶ್​ ದಕ್ಷಿಣ ಕನ್ನಡ ಖಾಸಗಿ ಬಸ್​ ಅಸೋಸಿಯೇಷನ್​ ಅಧ್ಯಕ್ಷರಾಗಿದ್ದರು. ಕದ್ರಿಯ ಮೌರಿಷ್ಮಾ ಅಪಾರ್ಟೆಂಟ್ ನಲ್ಲಿರುವ ಮನೆಯಲ್ಲಿ ಭಾನುವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

50 ವರ್ಷಗಳ ಹಿಂದೆಯೇ 1972ರ ವೇಳೆಗೆ ಜಯರಾಮ ಶೇಖ ಅವರು ಮಹೇಶ್ ಬಸ್ ಟ್ರಾವೆಲ್ಸ್ ಉದ್ಯಮ ಆರಂಭಿಸಿದ್ದರು. ಮೊದಲಿಗೆ ಜ್ಯೋತಿ ಎಂದಿದ್ದ ಹೆಸರನ್ನು ಬಳಿಕ ಎರಡನೇ ಮಗ ಮಹೇಶ್ ಹೆಸರಿಗೆ ಬದಲಿಸಿದ್ದರು. ಆರಂಭದಿಂದಲೇ ಮಂಗಳೂರಿನಿಂದ ಕೊಣಾಜೆ ರೂಟಿನಲ್ಲಿ ಬಸ್‌ ಉದ್ಯಮ ಆರಂಭಿಸಿದ್ದರು. ಆನಂತರ ಇತರ ರೂಟಿನಲ್ಲೂ ಮಹೇಶ್ ಬಸ್ ಸಂಚಾರ ಆರಂಭಿಸಿತ್ತು.  <a href=https://youtube.com/embed/7W6vb1bC1Vo?autoplay=1&mute=1><img src=https://img.youtube.com/vi/7W6vb1bC1Vo/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಮೂರನೇ ಮಗ ಪ್ರಕಾಶ್ ಶೇಖ ಉದ್ಯಮದಲ್ಲಿ ತೊಡಗಿಸಿಕೊಂಡ ಬಳಿಕ ವ್ಯವಹಾರ ವಿಸ್ತರಣೆಯಾಗಿತ್ತು.
ಕಳೆದ 15 ವರ್ಷಗಳಲ್ಲಿ ಮಹೇಶ್‌ ಹೆಸರಲ್ಲಿ ಟೂರಿಸ್ ಉದ್ಯಮ, ಟಿಪ್ಪರ್, ಸಿಮೆಂಟ್ ಮಿಕ್ಸರ್ ಲಾರಿ ಹೀಗೆ ಹಲವಾರು ವ್ಯವಹಾರ ಮಾಡಿಕೊಂಡಿದ್ದರು. ಹಿರಿಯ ಪುತ್ರರಿಬ್ಬರು ಬೆಂಗಳೂರು, ಮುಂಬೈನಲ್ಲಿ ನೆಲೆಸಿದ ಬಳಿಕ ಪೂರ್ತಿ ಬಸ್‌ ಉದ್ಯಮದ ವ್ಯವಹಾರವನ್ನು ಪ್ರಕಾಶ್ ಅವರೇ ನೋಡಿಕೊಂಡಿದ್ದರು. 

ಆಪ್ತರ ಪ್ರಕಾರ, ನೂರಕ್ಕೂ ಹೆಚ್ಚು ಬನ್ಗಳು ಅವರ ಒಡೆತನದಲ್ಲಿದ್ದವು. ಹಲವಾರು ಬಸ್ ಗಳನ್ನು ಬೇರೆ ಬೇರೆ ಕಡೆ ಖಾಸಗಿಯಾಗಿ ಕಾಂಟ್ರಾಕ್ಟ್ ಕೊಟ್ಟಿದ್ದರು. ಬಸ್ ಉದ್ಯಮದ ಬಗ್ಗೆ ಭಾರೀ ಪ್ರೀತಿ ಇಟ್ಟುಕೊಂಡಿದ್ದ ಪ್ರಕಾಶ್ ಯಾಕಾಗಿ ಸಾವಿಗೆ ಶರಣಾಗಿದ್ದಾರೆ ಎನ್ನುವುದು ಆಪ್ತ ಬಳಗಕ್ಕೆ ಶಾಕ್‌ ನೀಡಿದೆ. ಇವರ ಸಾವಿಗೆ ಹಲವಾರು ಜನ ಕಣ್ಣೀರು ಮಿಡಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.