ಗಂಡನ ಕೊನೆಯ ಸಿನಿಮಾ ಅಂತ ಬಿಕ್ಕಿ.ಬಿಕ್ಕಿ ಕಣ್ಣೀರಿಟ್ಟ ಮೇಘನಾ ರಾಜ್

 

ತಮ್ಮ ಅಭಿನಯದಿಂದಲೇ ಜನಮನ ಗೆದ್ದ ನಟ ಚಿರಂಜೀವಿ ಸರ್ಜಾ. ಇನ್ನೂ ಬದುಕಿ ಬಾಳಬೇಕಿದ್ದ ಚಿರಂಜೀವಿ ಸರ್ಜಾ ಹಠಾತ್ ನಿಧನರಾದರು. ಜೂನ್ 7 2020 ರಂದು ಚಿರಂಜೀವಿ ಸರ್ಜಾ ನಮ್ಮನ್ನೆಲ್ಲಾ ಅಗಲಿದರು. ಚಿರಂಜೀವಿ ಸರ್ಜಾ ಚಿರನಿದ್ರೆ ಜಾರಿ 3 ವರ್ಷಗಳು ಉರುಳಿವೆ. 

ಚಿರಂಜೀವಿ ಸರ್ಜಾ ನಟನೆಯ ಕೊನೆಯ ಚಿತ್ರ ರಾಜ ಮಾರ್ತಾಂಡ ಈಗ ಬಿಡುಗಡೆಯಾಗಿದೆ. ರಾಜ ಮಾರ್ತಾಂಡ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ನಾಯಕನಾಗಿ ಅಭಿನಯಿಸಿದ್ದರು. ತಮ್ಮ ಭಾಗದ ಚಿತ್ರೀಕರಣವನ್ನು ಚಿರಂಜೀವಿ ಸರ್ಜಾ ಮುಗಿಸಿಕೊಟ್ಟಿದ್ದರು. ಆದರೆ, ಡಬ್ಬಿಂಗ್ ಪಾತ್ರ ಪೂರ್ಣಗೊಂಡಿರಲಿಲ್ಲ. ಚಿರಂಜೀವಿ ಸರ್ಜಾ ನಿಧನದ ಬಳಿಕ ಅಣ್ಣನ ಪಾತ್ರಕ್ಕೆ ಧ್ರುವ ಸರ್ಜಾ ಧ್ವನಿ ನೀಡಿದರು. 

ರಾಜ ಮಾರ್ತಾಂಡ ಸಿನಿಮಾ ಕಂಪ್ಲೀಟ್ ಆಗುವ ಹಾಗೆ ಧ್ರುವ ಸರ್ಜಾ ಹಾಗೂ ಮೇಘನಾ ರಾಜ್ ಸರ್ಜಾ ಸಹಕಾರ ನೀಡಿದರು. ಅದೇನೋ ಗೊತ್ತಿಲ್ಲ. ಚಿರಂಜೀವಿ ಸರ್ಜಾ ನಟಿಸುವ ಬೇರೆ ಚಿತ್ರಗಳ ಸಂಭಾಷಣೆಯನ್ನು ಸೆಟ್‌ನಲ್ಲಿ ಹೇಳಿ, ಹತ್ತು ನಿಮಿಷಕ್ಕೆ ಮರೆತು ಹೋಗತ್ತಿದ್ದರು. ಆದರೆ ರಾಜಮಾರ್ತಾಂಡ ಚಿತ್ರದ ಸಂಭಾಷಣೆ ಮಾತ್ರ ಯಾವಾಗಲೂ ಹೇಳುತ್ತಿದ್ದರು. 

ಕೊನೆಗೆ ಚಿರು ಬಂದರೆ ನಾವೆಲ್ಲಾ ಆ ಡೈಲಾಗ್ ಹೇಳುತ್ತಿದ್ದೆವು. ಈ ಚಿತ್ರವನ್ನು ಅವರು ಅಷ್ಟೊಂದು ಹಚ್ಚಿಕೊಂಡಿದ್ದರು. ಅವರು ನಮ್ಮೊಂದಿಗೆ ಇಲ್ಲದ ಈ ಸಮಯದಲ್ಲಿ ರಾಜಮಾರ್ತಾಂಡ ಚಿತ್ರತಂಡಕ್ಕೆ ಬೆಂಬಲ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ನಮ್ಮ ಎರಡು ಕುಟುಂಬಗಳ ಸಹಕಾರ ಸದಾ ನಿಮಗೆ ಇರುತ್ತದೆ ಎಂದು ಹೇಳಿದರು. <a href=https://youtube.com/embed/YtCfUpDqVZI?autoplay=1&mute=1><img src=https://img.youtube.com/vi/YtCfUpDqVZI/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇನ್ನು ಈ ಹಿಂದೆ ಜೂನಿಯರ್ ಚಿರು ಅಮೃತ ಹಸ್ತದಿಂದ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇದೇ ಮೊದಲ ಬಾರಿ ಚಿತ್ರರಂಗದಲ್ಲಿ ತಂದೆಯ ಚಿತ್ರದ ಟ್ರೈಲರ್ ಪುತ್ರ ಬಿಡುಗಡೆ ಮಾಡುತ್ತಿರುವುದು ಎಂದು ಮೇಘನಾ ರಾಜ್‌ ಹೇಳಿದ್ದಾರೆ. ಸಖತ್ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಚಿರುಗೆ, ಧ್ರುವ ಸರ್ಜಾ ಧ್ವನಿ ತುಂಬಾನೇ ಹೊಂದಿಕೆ ಆಗಿದೆ. 

ಅಲ್ಲದೇ ಅಲ್ಲಲ್ಲಿ ಹೇಳಿರುವ ಪಂಚ್‌ ಡೈಲಾಗ್‌ ಕ್ಯಾಚಿಯಾಗಿದೆ. ದೀಪ್ತಿ ಸತಿ ನಾಯಕಿಯಾಗಿದ್ದಾರೆ. ಇದು ನನ್ನ ಪತಿಯ ಕೊನೆಯ ಸಿನಿಮಾ ಎನ್ನಲು ಬೇಸರವಾಗುತ್ತದೆ ಆದರೆ ಅದೇ ಸತ್ಯ .ನೋಡಿ ಆಶೀರ್ವದಿಸಿ ಎಂದಿದ್ದಾರೆ ಮೇಘನಾ ರಾಜ್. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.