ಹೊಸ ಸಿನಿಮಾಗಾಗಿ ಜಿಮ್ ನಲ್ಲಿ ಕಸರತ್ತು ನಡೆಸುತ್ತಿರುವ ಮೇಘನಾ ರಾಜ್
ಸ್ಯಾಂಡಲ್‌ವುಡ್ ನಾಯಕಿ ನಟಿ ಮೇಘನಾ ರಾಜ್ ಎಲ್ಲ ದುಃಖಗಳ ಮಧ್ಯ ಒಂದು ಸಾಧನೆ ಮಾಡಿದ್ದಾರೆ. ಇದನ್ನ ಯಾರು ಬೇಕಾದ್ರೂ ಮಾಡಬಹುದು. ಆದರೆ ಡೆಡಿಕೇಷನ್ ಬೇಕೆ ಬೇಕು. ಕಠಿಣ ಡಯೆಟ್ ಮೊದಲೇ ಬೇಕು. ಮನಸ್ಸಿಗೆ ಬಂದ ಹಾಗೆ ಮಾಡಿದ್ರೆ ಏನೂ ಸಾಧ್ಯವೇ ಇಲ್ಲ. ಸರಿಯಾಗಿ ಎಲ್ಲವನ್ನೂ ಫಾಲೋ ಮಾಡಿದ್ರೆ, ಎಂತಹವರೂ ಈ ಸಾಧನೆ ಮಾಡಬಹುದು.
ನಿಜ, ಮೇಘನಾ ರಾಜ್ ಈ ಒಂದು ಸಾಧನೆ ಮಾಡಿದ್ದಾರೆ. ಆ ಸಾಧನೆ ಹೆಸರು ಸಣ್ಣ ಆಗೋದು ಅಂತಲೇ ಹೇಳಬಹುದು. ಮೇಘನಾ ಕಳೆದ ಮೂನಾಲ್ಕು ತಿಂಗಳಿನಿಂದಲೂ ದೇಹವನ್ನ ದಂಡಿಸುತ್ತಿದ್ದಾರೆ. ಮೈಯಲ್ಲಿ ಇದ್ದ ಹೆಚ್ಚಿನ ಕೊಬ್ಬನ್ನ ಕರಿಗಿಸಿದ್ದಾರೆ.ಆ ಕರಗಿಸುವಿಕೆಯ ಪ್ರಕ್ರಿಯೆ ಚೆನ್ನಾಗಿಯೇ ವರ್ಕ್ ಆಗಿದೆ. ಹಾಗಾಗಿಯೇ ಮೇಘನಾ ರಾಜ್ ಸಣ್ಣ ಆಗಿದ್ದಾರೆ.
ಮೇಘನಾ ರಾಜ್ ಮದುವೆ ಮುಂಚೆ ಸಣ್ಣ ಇದ್ರು. ಮದ್ವೇ ಆದ್ಮೇಲೆ ದಪ್ಪ ಆಗಿದ್ದರು. ಮಗು ಆದ್ಮೇಲೆ ದೇಹದ ತೂಕ ಹೆಚ್ಚಿತ್ತು. ಆದರೆ ಇತ್ತೀಚಿಗೆ ಕೆಲವು ತಿಂಗಳ ಹಿಂದೆ ಮೇಘನಾ ವರ್ಕೌಟ್ ಮಾಡೋ ನಿರ್ಧಾರ ಮಾಡಿದ್ದರು. ಅದರ ಫಲ ಮೇಘನಾ ಇದೀಗ ಮೊದಲಿನ ಹಾಗೆ ಕಾಣಿಸುತ್ತಿದ್ದಾರೆ. ಜಿಮ್ ನಲ್ಲಿ ಮೇಘನಾ ರಾಜ್ ದಿನವೂ ದೇಹವನ್ನ ದಂಡಿಸಿದ್ದಾರೆ. ಹೊಟ್ಟೆ ಮತ್ತು ದೇಹದ ಇತರ ಕೊಬ್ಬು ಕರಗಿಸೋಕೆ ಪ್ಲಾನ್ ಮಾಡಿದ್ದರು.
ಆ ಒಂದು ಪ್ಲಾನ್ ವರ್ಕೌಟ್ ಆಗಿದೆ. ದೇಹ ಮೊದಲಿನ ಹಾಗೆ ಈಗ ಕಾಣಿಸುತ್ತಿದೆ. ಇನ್ನು ಧೃವ ಸರ್ಜಾ ಅವರೇ ಶಾಕ್ ಆಗಿದ್ದಾರೆ ಎನ್ನಲಾಗುತ್ತಿದೆ. ಮೇಘನಾ ರಾಜ್ ಪ್ರತಿ ದಿನ ದೇಹ ದಂಡಿಸುತ್ತಿದ್ದಾರೆ. ಆ ವರ್ಕೌಟ್‌ನ ವಿಡಿಯೋ ಕೂಡ ಶೇರ್ ಮಾಡಿಕೊಂಡಿದ್ದಾರೆ. ಅವುಗಳನ್ನ ನೋಡಿದರೇನೆ ಸಾಕು, ಮೇಘನಾ ಶ್ರಮ ಎಷ್ಟು ಅನ್ನೋದು ತಿಳಿಯುತ್ತದೆ. ಜೊತೆಗೆ ದೇಹದ ತೂಕ ಇಳಿದಿರೋದು ಕೂಡ ತಿಳಿಯುತ್ತದೆ. ಅಲ್ಲದೆ ಇತ್ತಿಚಿಗೆ ತೆರೆಕಂಡ ತತ್ಸಮ ತದ್ಭವ ಸಿನೆಮಾ ಅಲ್ಲಿ ಕೂಡ ಉತ್ತಮ ಅಭಿನಯ ಮಾಡಿ ಜನರ ಮೆಚ್ಚುಗೆಯನ್ನು ಗಳಿಸಿದ್ದಾರೆ.