ಇಡೀ ಕರುನಾಡ ಜನತೆಗೆ 'Happy Christmas' ಎಂದ ಮೇಘನಾ ರಾಜ್ ಮಗ, ಫಿದಾ ಆದ ಕನ್ನಡಿಗರು
ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯಾಗಿರುವ ನಟಿ. ನಟ ಚಿರಂಜೀವಿ ಸರ್ಜಾ ಅವರೊಂದಿಗೆ ಮದುವೆಯಾಗಿ ಸುಖಿ ದಾಂಪತ್ಯ ನಡೆಸುತ್ತಿರುವಾಗಲೇ ಇವರ ಬದುಕಿನಲ್ಲಿ ಬರಸಿಡಿಲು ಬಡಿದಿತ್ತು. ಚಿರಂಜೀವಿ ಅವರು ನಿಧನರಾದ ಬಳಿಕ ಆ ಶಾಕ್‌ನಿಂದ ಹೊರಬರಲು ಮೇಘನಾ ಅವರಿಗೆ ವರ್ಷಗಳೇ ಹಿಡಿದವು. ನಂತರ ಸಿನಿಮಾಗಳಿಂದ ದೂರವಾದರು.
ಮಗ ರಾಯನ್ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ವರ್ಷಗಳ ಬಳಿಕ ತತ್ಸಮ ತದ್ಭವದ ಮೂಲಕ ಕಮ್ ಬ್ಯಾಕ್ ಮಾಡ್ತಿದ್ದಾರೆ ಮೇಘನಾ ರಾಜ್. ಕೆಲ ದಿನಗಳ ಹಿಂದಷ್ಟೇ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡು ಸುದ್ದಿಯಾಗಿದ್ದರು. ಸಕತ್ ಸ್ಮಾರ್ಟ್ ಕಾಣಿಸುತ್ತಿದ್ದ ನಟಿಯನ್ನು ಫ್ಯಾನ್ಸ್ ಹಾಡಿ ಹೊಗಳಿದರು. ತಮ್ಮ ಯೂಟ್ಯೂಬ್ ಹೊಂದಿರೋ ನಟಿ ಮೇಘನಾ ಕೆಲವೊಂದು ವಿಷಯಗಳನ್ನು ಅದರಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅದರಲ್ಲಿಯೂ ಬ್ಯೂಟಿಗೆ ಸಂಬಂಧಿಸಿದ ಸುದ್ದಿಗಳು ಹಾಗೂ ತಾವು ಬಳಸುವ ಕೆಲವೊಂದು ಪ್ರಾಡಕ್ಟ್ಗಳ ಬಗ್ಗೆಯೂ ತಿಳಿಸಿಕೊಡುತ್ತಾರೆ.
ಕೆಲವೊಂದು ಅಡುಗೆಗಳ ಬಗ್ಗೆ ನಟಿ ಮೇಘನಾ ತಿಳಿಸಿಕೊಡುತ್ತಾರೆ, ನಾಳೆ ಕ್ರಿಸ್ಮಸ್. ಕ್ರಿಸ್ಮಸ್ ಎಂದರೆ ಎಲ್ಲೆಡೆ ಕೇಕ್ಗಳದ್ದೇ ಸಂಭ್ರಮ. ಇದೇ ಕಾರಣಕ್ಕೆ ನಟಿ ಮೇಘನಾ ಕೇರ್ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ಮನೆಯಲ್ಲಿಯೇ ಸುಲಭದಲ್ಲಿ ಹೇಗೆ ಕೇಕ್ ಮಾಡಬಹುದು ಎಂದು ಅವರು ತಿಳಿಸಿಕೊಟ್ಟಿದ್ದಾರೆ. ಅದರಂತೆ ಬದುಕು ಸಾಗುತ್ತದೆ ಪ್ರೀತಿಸಿದ ಜೀವಗಳೊಂದಿಗೆ ಎಂದು ಸಹಾ ಹೇಳಿದ್ದಾರೆ.
ಇಂದು ವಿಶ್ವದಾದ್ಯಂತ ಕ್ರಿಸ್ ಮಸ್ ಸಡಗರ. ಅನೇಕರು ಈ ಹಬ್ಬವನ್ನು ಸಡಗರದಿಂದ ಆಚರಿಸುತ್ತಿದ್ದಾರೆ. ತಾರೆಯರು ಕೂಡ ಕ್ರಿಸ್ ಮಸ್ ಹಬ್ಬ ಆಚರಿಸುವ ಮೂಲಕ ಶುಭಾಶಯ ಕೋರುತ್ತಿದ್ದಾರೆ. ಅದರಂತೆಯೇ ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಮಗ ರಾಯನ್ ಜೊತೆಗೆ ಕ್ರಿಸ್ ಮಸ್ ಆಚರಣೆ ಮಾಡಿದ್ದಾರೆ.
ರಾಜ್ಯದೆಲ್ಲೆಡೆ ಕ್ರಿಸ್ಮಸ್ ಹಬ್ಬದ ಕಳೆಗಟ್ಟಿದೆ. ಕೋರಮಂಗಲದ ಸಂತ ಅಂತೋನಿ ಫ್ರಾಯರಿ ಚರ್ಚ್ನಲ್ಲಿ ಅದ್ಧೂರಿ ಕ್ರಿಸ್ಮಸ್ ಆಚರಣೆ ಮಾಡಲಾಗಿದೆ. ಇನ್ನು, ಚರ್ಚ್ಗೆ ನಟಿ ಮೇಘನಾ ರಾಜ್ ಭೇಟಿ ನೀಡಿದ್ರು. ಪುತ್ರ ರಾಯನ್ ಹಾಗೂ ಪೋಷಕರಾದ ಸುಂದರ್ ರಾಜ್ ಹಾಗೂ ಪ್ರಮೀಳಾ ದಂಪತಿ ಜೊತೆ ಆಗಮಿಸಿದ್ರು.
ಈ ವೇಳೆ ಮಾತನಾಡಿದ ಮೇಘನಾ ರಾಜ್ , ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು. ಹೊಸ ವರ್ಷಕ್ಕೆ ಮತ್ತೆ ಕಾಲಿಡ್ತಿದ್ದೀವಿ. ಈ ಕ್ರಿಸ್ ಮಸ್ ಎಲ್ಲರಿಗೂ ಮಿರಾಕಲ್ ತರಲಿ. ಎಲ್ಲರೂ ಸೇಫ್ ಆಗಿರಲಿ,ಎಲ್ಲರಿಗೂ ಒಳ್ಳೆಯದಾಗಲಿ. ಕ್ರಿಸ್ ಮಸ್ ಹಬ್ಬ ಕ್ರಿಶ್ಚಿಯನ್ನರು ಮಾತ್ರ ಆಚರಿಸೋದಲ್ಲ. ಕ್ರಿಸ್ ಮಸ್ ಹಬ್ಬ ಎಂದರೆ ಖುಷಿ ಹಂಚೋದು, ಒಳ್ಳೆಯದನ್ನ ಬಯಸೋದು ಎಂದು ತಿಳಿಸಿದ್ರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.