ಮೇಘನಾ ಎರಡನೇ ಮದುವೆಗೆ ಗಂಡು ಹುಡುಕಿದ ಪೋಷಕರು, ಕನ್ನಡಿಗರಿಗೆ ಸಿಹಿಸುದ್ದಿ ಕೊಟ್ಟ ಮೇಘಾನ ಕುಟುಂಬ

 
ಸ್ಯಾಂಡಲ್​ವುಡ್ ನಟಿ ಮೇಘನಾ ರಾಜ್ ಅವರು ಎರಡನೇ ಮದುವೆಯಾಗುತ್ತಾರಾ? ಮೇಘನಾ ರಾಜ್ ಅವರ ಎರಡನೇ ಮದುವೆ ಬಗ್ಗೆ ಸಾಕಷ್ಟು ಸಲ ಸುದ್ದಿ ಕೇಳಿ ಬಂದಿದೆ. ಬಹಳಷ್ಟು ಸಲ ಆನ್​ಲೈನ್​ನಲ್ಲಿ ಈ ಬಗ್ಗೆ ಸುದ್ದಿ ಬರುತ್ತಲೇ ಇರುತ್ತವೆ. ಆದರೆ ಅವರ ತಾಯಿ ಹಿರಿಯ ನಟಿ ಪ್ರಮೀಳಾ ಜೋಷಾಯಿ ಅವರು ಈ ಬಗ್ಗೆ ಏನಂತಾರೆ. ಮಗಳ ಮರು ವಿವಾಹದ ಬಗ್ಗೆ ಪ್ರಮೀಳಾ ಜೋಷಾಯಿ ಅವರು ಇತ್ತೀಚೆಗೆ ಮಾತನಾಡಿದ್ದಾರೆ. ಖಾಸಗಿ ಸುದ್ದಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು ಮಗಳ ಮದುವೆಯಾಗಬೇಕೆನ್ನುವುದು ತಮ್ಮ ಆಸೆಯೂ ಆಗಿದೆ ಎನ್ನುವುದನ್ನು ವ್ಯಕ್ತ ಪಡಿಸಿದ್ದಾರೆ. 
ನೀನು ಹೋಗು, ನಿನ್ನ ಫ್ರೆಂಡ್ಸ್ ಬಂದಿದ್ದಾರೆ. ಅವರ ಜೊತೆ ಹೋಗಿ ಸಮಯ ಕಳೆದು ಬಾ, ನಾನು ಮಗುವನ್ನು ನೋಡಿಕೊಳ್ಳುತ್ತೇನೆ, ಅದರ ಬಗ್ಗೆ ಯೋಚನೆ ಮಾಡಬೇಡ ಎನ್ನುತ್ತೇನೆ. ಅವಳು ಯಾವ ರೀತಿ ಸಂತೋಷವಾಗಿರುತ್ತಾಳೋ, ಹೇಗೆ ಸಂತೋಷವಾಗಿರೋಕೆ ಸಾಧ್ಯವೋ ಹಾಗೆ ಇದ್ದಾಗ ಕಳಿಸುತ್ತೇನೆ ಎಂದಿದ್ದಾರೆ ಮೇಘನಾ ರಾಜ್ ಅಮ್ಮ.
ಅಕ್ಕನ ಮನೆಗೆ ಹೋಗ್ತಾಳೆ, ಫುಲ್ ಡೇ ಇರುತ್ತಾಳೆ. ಪಾಪು ಜೊತೆ ಇರುತ್ತಾಳೆ, ಮಾವನ ಮನೆಗೆ ಹೋಗುತ್ತಾಳೆ. ಮಾತಾಡುತ್ತಾಳೆ. ಅದೆಲ್ಲವೂ ಅವಳಿಗೆ ತೃಪ್ತಿ ಕೊಡುತ್ತೆ. ಅವಳಿಗೆ ತೃಪ್ತಿ ಕೊಡೋದೇನೋ ಅದನ್ನೆಲ್ಲ ಮಾಡಲು ಪ್ರೋತ್ಸಾಹಿಸುತ್ತೇನೆ ಎಂದಿದ್ದಾರೆ ಪ್ರಮೀಳಾ.ಇವತ್ತಿನ ತನಕ ನಾನು ನೋಡಿದ ಹಾಗೆ ಅವಳು ಆ ರೀತಿ ಆಸೆ ಎಕ್ಸ್​ಪೋಸ್ ಮಾಡಿಲ್ಲ. ನನ್ನ ಅಕ್ಕ ತಂಗಿಯರು, ಸಂಬಂಧಿಕರು ಹೇಳುತ್ತಾ ಇರುತ್ತಾರೆ. ಮದುವೆ ಆಸೆ ಅವಳು ಎಂದೂ ಹೇಳಿಕೊಂಡಿಲ್ಲ. ಅವಳಿಂದ ನನಗೆ ಯಾವುದೂ ಉತ್ತರ ಇಲ್ಲ. ಅವಳು ಸಹಜವಾಗಿದ್ದಾಳೆ ಎಂದಿದ್ದಾರೆ. <a href=https://youtube.com/embed/k7iZ3z2wSJw?autoplay=1&mute=1><img src=https://img.youtube.com/vi/k7iZ3z2wSJw/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಅವಳು ಏನೂ ಇದ್ದರೂ ಯಾರಲ್ಲೂ ಹೇಳಲ್ಲ. ಖುಷಿ, ನೋವು ಯಾವುದನ್ನೂ ಹೇಳಲ್ಲ. ಹಾಗೆ ಮಾಡೋಕಾಗಲ್ಲ ನಮಗೆ, ಯಾರಲ್ಲಾದರೂ ಹೇಳಿದರೆ ಸಮಾಧನ ಆಗುತ್ತದೆ, ಹೇಳಬೇಕು ಅನಿಸುತ್ತದೆ. ಆದರೆ ಅವಳು ಯಾವತ್ತೂ ಹೇಳಲ್ಲ ಎಂದಿದ್ದಾರೆ. ಅವಳಿಗೆ ಆ ಕಂಟ್ರೋಲ್ ಕೆಪಾಸಿಟಿ ಇದೆ.ತಾಯಿಯಾಗಿ ಮಕ್ಕಳು ಸೆಟ್ಲ್ ಆಗಬೇಕು, ಆಗಲೇಬೇಕು ಎಂದು ನನಗೂ ಅನಿಸುತ್ತದೆ. ನನಗೂ ಅನಿಸಿದೆ.
ಆದರೆ ಅದು ನನಗೆ ಅಲ್ಲ, ಅವರಿಗೂ ಅನಿಸಿದೆ, ನನಗೆ ಮಾತ್ರ ಅನಿಸಿದರೆ ಅದು ಬಲವಂತ ಆಗುತ್ತದೆ.ಅವಳಿಗೆ ತುಂಬಾ ಕ್ಲೋಸ್ ಆಗಿರುವವರು, ಫ್ರೆಂಡ್ಸ್ ಮೂಲಕ ಹೇಳಿಸೋಣ, ಅವಳ ಕಿವಿಗೆ ಹಾಕೋಣ ಅಂದುಕೊಂಡೆ. ಕೆಲವರು ಪ್ರಯತ್ನ ಪಟ್ಟು ಅವಳ ಹತ್ತಿರ ಮಾತನಾಡೋಕಾಗಲ್ಲ, ವಿಷಯ ಹೇಳೋಕೆ ಆಗಲ್ಲ ಅಂತ ಸುಮ್ಮನಾಗಿದ್ದಾರೆ.