ಧನರಾಜ್ ಗೆ ಕಳಪೆ ಕೊಟ್ಟ ಮೋಕ್ಷಿತಾ ಪೈ; ಸಿ ಡಿದೆದ್ದ ಧನು ಪತ್ನಿ ಪ್ರಜ್ಞಾ

 
ಬಿಗ್‌ಬಾಸ್‌ ಕನ್ನಡ 11ರ ಈ ವಾರದ ಮನೆಯ ಕಳಪೆ ಧನ್‌ರಾಜ್‌ ಪಾಲಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಗೇಮ್‌ ನಲ್ಲಿ ಹೀನಾಯವಾಗಿ ಸೋತ ತಂಡಗಳಿಗೆ ಸಿಗದ ಕಳಪೆ ಧನ್‌ರಾಜ್ ಗೆ ಹೇಗೆ ಸಿಕ್ಕಿತ್ತು, ಜೊತೆಗೆ ಮೋಕ್ಷಿತಾ ಅವರು ಊಸರವಳ್ಳಿ ಎಂದೆಲ್ಲ ಕಮೆಂಟ್‌ ಬರುತ್ತಿದೆ. ಧನ್‌ರಾಜ್‌ ಮೋಕ್ಷಿತಾ ಅವರಿಗೆ ನೀಡಿದ ಉತ್ತರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಗೆ ನೋಡಿದರೆ ಈ ವಾರದ ಟಾಸ್ಕ್‌ ನಲ್ಲಿ ಮೋಕ್ಷಿತಾ ಮತ್ತು ಧನ್‌ರಾಜ್‌ ಜೋಡಿಯ ಆಟ ಚೆನ್ನಾಗಿತ್ತು. 6 ಜನ ಜೋಡಿಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ 4 ನೇ ಜೋಡಿಯಾಗಿತ್ತು. 
ಮೊದಲ ಸ್ಥಾನ 600 ಅಂಕ ಪಡೆದ ಹನುಮಂತು-ಗೌತಮಿ, ಎರಡನೇ ಸ್ಥಾನ ಭವ್ಯಾ-ತ್ರಿವಿಕ್ರಮ್‌ 500 ಅಂಕ, ಮೂರನೇ ಸ್ಥಾನ ಚೈತ್ರಾ-ಶಿಶಿರ್‌ 350 ಅಂಕ, 4ನೇ ಸ್ಥಾನ ಧನು-ಮೋಕ್ಷಿತಾ 325 ಅಂಕ, ಐದನೇ ಸ್ಥಾನ ಅನುಷಾ-ಸುರೇಶ್ 275 ಅಂಕ,  ಮತ್ತು ಕೊನೆ ಸ್ಥಾನ ಧರ್ಮ-ಐಶ್ವರ್ಯಾ 250 ಅಂಕ. ಕೊನೆಯ ಸ್ಥಾನ ಪಡೆದ 2 ಜೋಡಿಗಳಲ್ಲಿ ಯಾರು ಕಳಪೆಗೆ ಹೋಗದೆ ಇದುವುದೇ ಆಶ್ಚರ್ಯ ತರಿಸಿದೆ. ಆದರೆ ಮೋಕ್ಷಿತಾ ಅವರು ತನ್ನದೇ ಜೋಡಿ ಧನುವನ್ನು ಕಳಪೆಗೆ ಹಾಕಿದರು.  <a href=https://youtube.com/embed/KC-reEFp0eg?autoplay=1&mute=1><img src=https://img.youtube.com/vi/KC-reEFp0eg/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಇತ್ತ ಕಡೆ ವಾದ ಪ್ರತಿವಾದ ನಡೆದು ಅಹಂಕಾರ ಎಂದು ಧನ್‌ರಾಜ್‌ ಪದ ಬಳಕೆ ಮಾಡಿದರು. ಇದು ಇಷ್ಟವಾಗದೆ ನನಗೆ ಅಹಂಕಾರ ಇದೆಯಾ ಶಿಶಿರ್‌ ಎಂದು ಮೋಕ್ಷಿತಾ ಕೇಳಿದರು. ಅಹಂಕಾರ ಅಂದ್ರೆ ನೀವೇ ಹೇಳಿ ಡಾಮಿನೇಟ್‌ ಮಾಡ್ತೀನಾ ನಾನು ಎಂದು ಹೇಳಿಕೊಂಡು ಅತ್ತರು. ಆದ್ರೆ ವೀಕ್ಷಕರ ಅಭಿಪ್ರಾಯ ಅಹಂಕಾರ ಇರುವಾಗ ಮೋಕ್ಷಿತಾಗೆ ಈ ಪದ ಬಳಕೆ ಮಾಡಿದ್ದು ಸರಿ ಇದೆ. ಅದೇ ನೀವು ಗೋಮುಖ ವ್ಯಾಘ್ರ ಎಂಬ ಪದವನ್ನು ತ್ರಿವಿಕ್ರಮ್‌ ವಿರುದ್ಧ ಬಳಸಿದ್ದು ಎಷ್ಟು ಸರಿ ಎಂದು ಕೇಳುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ತರಹೇವಾರಿ ಕಮೆಂಟ್‌ ಗಳು ಈ ಬಗ್ಗೆ ಬರುತ್ತಿದೆ. ಮೀಮ್ಸ್ ಗಳು ಕ್ರಿಯೇಟ್ ಆಗಿದೆ. ಇಲ್ಲಿ ಈ ಸನ್ನಿವೇಶದ ಬಗ್ಗೆ ವೀಕ್ಷಕರ ಕಮೆಂಟ್‌ ಗಳನ್ನು ಈ ಕೆಳಗೆ  ನೀಡಲಾಗಿದೆ. ಇನ್ನು ಧನರಾಜ್ ಪತ್ನಿ ಪ್ರಜ್ಞಾ ಕೂಡ ಈ ಕುರಿತಾಗಿ ಬೇಸರ ಹೊರಹಾಕಿದ್ದಾರೆ. ಎಲ್ಲ ಸೇರಿ ಧನರಾಜ್ ಅವರನ್ನ ಟಾಗೇಟ್ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.