'ನಿಂತ ನೀರಿನಲ್ಲಿ ಈಜಾಡುತ್ತಿದ್ದ ಅಣ್ಣ; ಒಮ್ಮೆಲೆ ಹೃದಯಾಘಾತಕ್ಕೆ ಬ ಲಿ

 

ಹಳ್ಳಿಗಳಲ್ಲಿ ಬೇಸಿಗೆ ಕಾಲದಲ್ಲಿ ಬೇಕಂದು ಸಾಮಾನ್ಯವಾಗಿ ನೀರು ಸಂಗ್ರಹಿಸಿಡಲು ಕೃಷಿ ಹೊಂಡಗಳನ್ನು ನಿರ್ಮಿಸುತ್ತಾರೆ. ಅಂತಹ ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ವ್ಯಕ್ತಿಯೊಬ್ಬರು ಈಜಲು ಆಗದೆ ಮುಳುಗಿ ಸಾವನಪ್ಪಿದ ಘಟನೆ ಕೋಲಾರದಲ್ಲಿ ನಡೆದಿದ್ದು, ಅಣ್ಣ ಸಾವಿನ ದವಡೆಯಲ್ಲಿದ್ದರು ಇದರ ಅರಿವೇ ಇಲ್ಲದಂತೆ ಸ್ವತಃ ತಂಗಿಯೇ ಅದರ ವಿಡಿಯೋ ಚಿತ್ರೀಕರಣ ಮಾಡಿದ ಹೃದಯ ವಿದ್ರಾವಕ ಘಟನೆ ಕೋಲಾರ ತಾಲೂಕಿನ ನಾಗನಾಳ ಗ್ರಾಮದಲ್ಲಿ ಸಂಭವಿಸಿದೆ.

ಅಷ್ಟಕ್ಕೂ ಮೃತ ಯುವಕ ಮೈಸೂರಿನ ರಾಘವೇಂದ್ರನಗರ ಬಡಾವಣೆ ನಿವಾಸಿ ಗೌತಮ್ ಗೌಡ  ಎಂದು ಗುರುತಿಸಲಾಗಿದೆ. ಗೌತಮ್ ಗೌಡ ತಂದೆಯ ಊರಾದ ವೇಮಗಲ್ ಸಮೀಪದ ನಾಗನಾಳ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ, ಸರಿಯಾಗಿ ಈಜು ಬಾರದಿದ್ದರೂ ಈಜಲು ಹೋಗಿದ್ದರು. ಆರಂಭದಲ್ಲಿ ಚೆನ್ನಾಗಿಯೇ ಈಜುತ್ತಿದ್ದ ಅವರು ಕ್ರಮವೇಣ ಮುಳುಗಲಾರಂಭಿಸಿದರು.  <a href=https://youtube.com/embed/1nHfAQcs6Lg?autoplay=1&mute=1><img src=https://img.youtube.com/vi/1nHfAQcs6Lg/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಯುವಕ ನೀರಿಗೆ ಧುಮುಕಿದಲ್ಲಿಂದಲೇ ಆತನ ತಂಗಿ ವಿಡಿಯೋ ಮಾಡುತ್ತಿದ್ದರು. ಅಣ್ಣ ಮುಳುಗುತ್ತಿದ್ದಾನೆ ಎಂಬುದು ಅವರಿಗೂ ಅವರಿವಾದಂತಿಲ್ಲ. ದುರದೃಷ್ಟವಶಾತ್, ನೋಡ ನೋಡುತ್ತಿದ್ದಂತೆಯೇ ಗೌತಮ್ ಗೌಡ ನೀರಲ್ಲಿ ಮುಳುಗಿ ಪ್ರಾಣ ಬಿಟ್ಟದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ವೀಡಿಯೋ ಮಾಡಿದ್ದ ತಂಗಿಯ ದುಃಖ ಹೇಳ ತೀರದಾಗಿದೆ.

ಮನೆಯಲ್ಲಿ ಮೌನ ಮಡುವುಗಟ್ಟಿದೆ. ಸ್ವಲ್ಪ ಈಜಾಡಿಕೊಂಡು ವೀಡಿಯೋ ಮಾಡಿಕೊಂಡು ಬರುತ್ತೇನೆ ಎಂದ ಮಗನ ಕಳೆದುಕೊಂಡು ಪಾಲಕರು ಕಣ್ಣೀರು ಹಾಕುತ್ತಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.