ನನ್ನ ಮಗಳಿಗೆ ದಿನಲೂ ಒ ಬ್ಬ ಬೇಕು; ಸ್ವಂತ ಮಗಳ ಬಗ್ಗೆ ತಾಯಿ‌ಯ ದುಃಖದ ಮಾತು

 

ಕಿರುತೆರೆಯ ಖ್ಯಾತ ನಟಿ ಶ್ವೇತಾ ತಿವಾರಿ ಯಾವಾಗಲೂ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವುದಕ್ಕೇ ಹೆಸರುವಾಸಿಯಾಗಿದ್ದಾರೆ. ಇದೀಗ ತಮ್ಮ ಮಗಳ ಬಗ್ಗೆಯೇ ಶಾಕಿಂಗ್‌ ಹೇಳಿಕೆ ನೀಡಿದ ಅವರು, ಅಚ್ಚರಿಗೊಳಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಮ್ಮ ಮಗಳು ಪಾಲಕ್ ಬಗ್ಗೆ ಹರಿದಾಡುತ್ತಿರುವ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಗಾಲ್ಟಾ ಇಂಡಿಯಾದೊಂದಿಗೆ ಮಾತನಾಡಿದ ತಿವಾರಿ, ಪಾಲಕ್ ತುಂಬಾ ಧೈರ್ಯವಂತೆ. ಆಕೆಯ ಬಗ್ಗೆ ಸತ್ಯ ತಿಳಿದಿರುವವರೆಗೂ ಯಾರು ಏನು ಹೇಳುತ್ತಾರೆ ಎಂಬುದನ್ನು ಆಕೆ ಗಮನಿಸಲ್ಲ. ಆಕೆಯ ವಿಚಾರದಲ್ಲಿ ಸಾಕಷ್ಟು ವದಂತಿಗಳು ಹರಡುತ್ತವೆ. ಇವತ್ತು ಒಬ್ಬ, ನಾಳೆ ಮತ್ತೊಬ್ಬ... ಪ್ರತಿ ನಿಮಿಷಕ್ಕೆ ಆಕೆಗೆ ಒಬ್ಬ ಬಾಯ್ ಫ್ರೆಂಡ್‌ ಬೇಕು ಎಂಬೆಲ್ಲಾ ಅರ್ಥಗಳಲ್ಲಿ ವದಂತಿ ಹರಿದಾಡುತ್ತವೆ ಈ ಬಗ್ಗೆ ಹೆಚ್ಚು ಗಮನ ಹರಿಸಲ್ಲ ಎಂದಿದ್ದಾರೆ

ಆಕೆ ಬಲಶಾಲಿ ಹೌದು. ಆದರೆ ನಾಳೆ ಕೆಲವು ಕಾಮೆಂಟ್, ಕೆಲವು ಲೇಖನ, ಕೆಲವು ಅಂತಹ ವಿಷಯಗಳು ಆಕೆಗೆ ಪ್ರಭಾವ ಬೀರಬಹುದು. ಅಷ್ಟೇ ಅಲ್ಲ ಆತ್ಮವಿಶ್ವಾಸವನ್ನು ಅಲುಗಾಡಿಸಬಹುದು. ಹಾಗಾಗಿ ಈ ರೀತಿಯ ಏನಾದರೂ ಸಂಭವಿಸಬಹುದೆಂದು ನಾನು ಹೆದರುತ್ತೇನೆ ಅವಳು ಇನ್ನೂ ಮಗು ಎಂದು ಹೇಳಿದ್ದಾರೆ.

ಪಾಲಕ್ ತಿವಾರಿ, ಶ್ವೇತಾ ಮತ್ತು ರಾಜಾ ಚೌಧರಿ ಅವರ ಪುತ್ರಿ. ಶ್ವೇತಾ ಮತ್ತು ರಾಜಾ 1998 ರಲ್ಲಿ ವಿವಾಹವಾಗಿದ್ದು, ಪಾಲಕ್ 8 ಅಕ್ಟೋಬರ್ 2000 ರಂದು ಜನಿಸಿದರು. ಆದರೆ ಶ್ವೇತಾ ಮತ್ತು ರಾಜಾ ನಡುವಿನ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ವಿವಾದಗಳ ನಂತರ, ಶ್ವೇತಾ ಮತ್ತು ರಾಜಾ 2007 ರಲ್ಲಿ ಪರಸ್ಪರ ವಿಚ್ಛೇದನ ಪಡೆದರು.

2021 ರಲ್ಲಿ, ಪಾಲಕ್ ಹಾರ್ಡಿ ಸಂಧು ಅವರ ಬಿಜ್ಲಿ ಬಿಜ್ಲಿ ಹಾಡಿನಲ್ಲಿ ಕಾಣಿಸಿಕೊಂಡರು. ಅದಾದ ಬಳಿಕ ಸಾಕಷ್ಟು ಖ್ಯಾತಿಯನ್ನು ಪಡೆದರು. ಪಾಲಕ್ ಅನೇಕ ಸ್ಟಾರ್ ಮಕ್ಕಳೊಂದಿಗೆ ಪಾರ್ಟಿ ಮಾಡುತ್ತಿರುವ ವಿಡಿಯೋ ಕೂಡ ಕಂಡುಬಂದಿದೆ. ಹೆಚ್ಚಾಗಿ ಸೈಫ್ ಅಲಿ ಖಾನ್ ಅವರ ಮಗ ಇಬ್ರಾಹಿಂ ಅಲಿ ಖಾನ್‌ ಜೊತೆ ಈಕೆ ಹೆಸರು ತಳುಕು ಹಾಕಿಕೊಂಡಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.