ನಾನು ಈ ರೀತಿ ಆಗುವುದಕ್ಕೆ ನನ್ನ ಗಂಡ ಕಾರಣ; ಸ್ಪಷ್ಟತೆ ಕೊಟ್ಟ ಜ್ಯೋತಿ ರೈ
Nov 16, 2024, 17:52 IST
ಜ್ಯೋತಿ ರೈ ತಮ್ಮ ಫಿಟ್‌ನೆಸ್‌ಗೆ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಪತಿಯೊಂದಿಗೆ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಜ್ಯೋತಿ ರೈ ಫಿಟ್ನೆಸ್ ಬಗ್ಗೆ ಕಾಮೆಂಟ್ ಮಾಡಿದ್ದಾರೆ.ಜ್ಯೋತಿ ರೈ ಹೊಸ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಸಾಮಾನ್ಯವಾಗಿ ತಮ್ಮ ಹಾಟ್ & ಸೆಕ್ಸಿ ಲುಕ್ ಇಮೇಜ್‌ಗಳನ್ನೇ ಪೋಸ್ಟ್ ಮಾಡ್ತಿದ್ದ ಜ್ಯೋತು ರೈ ಈಗ ತಮ್ಮ ಫಿಟ್‌ನೆಸ್‌ಗೆ ಕಾರಣ ಏನು ಅನ್ನೋದನ್ನ ಬಹಿರಂಗ ಮಾಡಿದ್ದಾರೆ.
https://youtube.com/shorts/SDdc2sKzVg4?si=je5rqw1de28DZcz-
ನಟಿ ಜ್ಯೋತಿ ರೈಗೆ ಈಗ ಹೆಚ್ಚೂ ಕಡಿಮೆ 40 ವರ್ಷ. ಹಾಗಿದ್ದರೂ ಪಡ್ಡೆ ಹುಡುಗರು ಕೂಡ ಒಂದು ಕ್ಷಣ ನಿಂತು ನೋಡುವಷ್ಟು ಸಖತ್ ಬೋಲ್ಡ್ ಆಗಿದ್ದಾರೆ. ಆದರೆ, ಇದಕ್ಕಾಗಿ ಅವರು ಗಂಟೆಗಳಾ ಕಾಲ ಜಿಮ್‌ನಲ್ಲಿ ಬೆವರು ಹರಿಸುತ್ತಾರೆ. ಇನ್ನು ಜ್ಯೋತಿ ರೈ ಜಿಮ್‌ನಲ್ಲಿ ಫಿಟ್‌ನೆಸ್ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಹಾಗಂತ ಅವರೊಬ್ಬರೇ ಜಿಮ್‌ನಲ್ಲಿ ವರ್ಕ್‌ಔಟ್ ಮಾಡ್ತಿಲ್ಲ.
ಪತಿ ಸುಕ್ಕು ಪೂರ್ವಜ್ ಜೊತೆ ಅವರು ಜಿಮ್‌ನಲ್ಲಿ ಸಖತ್ತಾಗಿಯೇ ವರ್ಕ್‌ಔಟ್ ಮಾಡಿದ್ದಾರೆ.ಗಂಡನೊಂದಿಗೆ ಈ ರೀತಿ ವರ್ಕ್‌ಔಟ್ ಮಾಡಿದರೆ ನನ್ನಂತೆ ಫಿಟ್ ಆಗ್ತಿರಿ ಅನ್ನೋ ಅರ್ಥದಲ್ಲಿ ಅವರು ವಿಡಿಯೋ ಪೋಸ್ಟ್ ಮಾಡಿದ್ದು, ತಮ್ಮ ಜಿಮ್ ವಿಡಿಯೋಗೆ ನೀವೇ ಕ್ಯಾಪ್ಶನ್ ನೀಡಿ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ.
ಸ್ವತಃ ಜ್ಯೋತಿ ರೈಯೇ ಹೀಗೆ ಹೇಳಿದ ಮೇಲೆ ಅಭಿಮಾನಿಗಳು ಕೇಳ್ಬೇಕಾ, ಈಗಲೇ ನೀವು ದಂತದ ಗೊಂಬೆ ಇದ್ದ ಹಾಗೆ ಇದ್ದೀರಿ, ಮತ್ಯಾಕೆ ಜಿಮ್‌ಗೆ ಹೋಗ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.ನೀವು ಎದೆಗಾಗಿ ವರ್ಕ್‌ಔಟ್ ಮಾಡ್ತಾ ಇದ್ದೀರೋ, ಭುಜಕ್ಕಾಗಿ ವರ್ಕ್‌ಔಟ್ ಮಾಡ್ತಿದ್ದಿರೋ ಅನ್ನೋದು ಗೊತ್ತಾಗ್ತಾ ಇಲ್ಲ. ಜಿಮ್ ಮಷಿನ್‌ನಲ್ಲಿ ಯಾವುದರಲ್ಲಿ ಯಾವ ವರ್ಕ್‌ಔಟ್ ಮಾಡಬೇಕು ಅನ್ನೋದು ನಿಮಗೆ ತಿಳಿದಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.