'ನನ್ನ ಸ್ಕೂಲ್ ಗೆಳತಿಯರು ಇತ್ತೀಚೆಗೆ ಮದುವೆಯಾಗಿ ಮಗು ಕೂಡ ಇದೆ; ನನಿಗೆ ಮಕ್ಕಳಿಲ್ಲ ಎಂದ ಚೈತ್ರ
Aug 5, 2024, 19:43 IST
ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಶೋ ನಿರೂಪಕಿ ಚೈತ್ರಾ ವಾಸುದೇವನ್ ನೋಡಲು ಗೊಂಬೆಯಂತಿದ್ದು, ಪಟ ಪಟನೇ ಮಾತನಾಡುತ್ತಾ ಮೋಡಿ ಮಾಡುತ್ತಾರೆ. ಆದರೆ, ಅವರ ನಗುವಿನ ಹಿಂದೆ ಒಂದು ಕಾರಾಳ ಕಥೆಯಿದೆ. ನಾನು ಕಾಲೇಜು ಓದಿದ ಬ್ಯಾಚ್‌ನಲ್ಲಿ ಮೊದಲು ಮದುವೆ ಆಗಿದ್ದೇನೆ. ಆದರೆ, ನನಗಿಂದ ತಡವಾಗಿ ಮದುವೆಯಾದವರೆಲ್ಲರೂ ಮಕ್ಕಳಿದ್ದಾರೆ, ನನಗೆ ಮಾತ್ರ ಮಗುವಿಲ್ಲ ಎಂದು ಚೈತ್ರಾ ವಾಸುದೇವನ್ ಅಳಲು ತೋಡಿಕೊಂಡಿದ್ದಾರೆ.
ರ್ಯಾಪಿಡ್ ರಶ್ಮಿ ಅವರ ಯೂಟ್ಯೂಬ್ ಸಂದರ್ಶನದಲ್ಲಿ ಜೀವನದ ಕರಾಳ ಕಥೆಯನ್ನು ಹಂಚಿಕೊಂಡಿರುವ ಚೈತ್ರಾ ವಾಸುದೇವನ್ ಹಂಚಿಕೊಂಡಿದ್ದಾರೆ. ಆದರೆ, ಇದಕ್ಕಿಂತಲೂ ಮುಂಚಿತವಾಗಿ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ತಮಗೆ ಡಿವೋರ್ಸ್ ಆಗಿರುವ ಕಹಿ ಘಟನೆಯನ್ನು ಹಂಚಿಕೊಂಡು ಕಣ್ಣೀರಿಟ್ಟಿದ್ದರು. ಇಲ್ಲಿ ನಿರೂಪಕಿ ಅನುಶ್ರೀ ಹಾಗೂ ನವರಸನಾಯಕ ಜಗ್ಗೇಶ್ ಎಲ್ಲರೂ ಸೇರಿ ಧೈರ್ಯವಾಗಿ ಸಮಾಜವನ್ನು ಎದುರಿಸುತ್ತಿದ್ದೀಯ.ಎಲ್ಲ ಕಷ್ಟಗಳ ಹಿಂದೆಯೇ ಸುಖ ಜೀವನವೂ ಬರುತ್ತದೆ. ಮುಂದೆ ಬರುವ ಒಳ್ಳೆಯ ಜೀವನವನ್ನು ಅನುಭವಿಸುತ್ತೀಯ ಎಂದು ಎಲ್ಲರೂ ಧೈರ್ಯ ಹೇಳಿ ಆತ್ಮಸ್ಥೈರ್ಯ ತುಂಬಿದ್ದರು.
ಇದಾದ ಬಳಿಕ ರ್ಯಾಪಿಡ್ ರಶ್ಮಿ ಅವರ ಯೂಟೂಬ್ ಚಾನೆಲ್‌ಗೆ ಸಂದರ್ಶನ ನೀಡಿ ತಮ್ಮ ಜೀವನದಲ್ಲಿ ಎದುರಿಸಿದ ಕರಾಳ ಘಟನೆಗಳನ್ನು ಒಂದೊಂದಾಗಿ ಬಿಚ್ಚಿಡುತ್ತಾ ಹೋಗಿದ್ದಾರೆ. ಇನ್ನು ಈವೆಂಟ್ ಮ್ಯಾನೇಜ್‌ಮೆಂಟ್ ಮಾಡುತ್ತಾ, ನಿರೂಪಣೆ ಮಾಡುತ್ತಾ ಕಿರುತೆರೆಯಲ್ಲಿ ಗುರುತಿಸಿಕೊಂಡ ಚೈತ್ರಾ, ತಮ್ಮ ಕಾಲೇಜು ಬ್ಯಾಚ್‌ನಲ್ಲಿ ಓದುತ್ತಿದ್ದವರ ಪೈಕಿ ಅತಿ ಬೇಗನೇ ಮದುವೆ ಮಾಡಿಕೊಂಡ ಹುಡುಗಿ ಆಗಿದ್ದಳು.
ಅಂದರೆ 2017ರಲ್ಲಿಯೇ ಸತ್ಯ ನಾಯ್ಡು ಎಂಬುವರೊಂದಿಗೆ ಮದುವೆಯಾಗಿ ಜೀವನ ಆರಂಭಿಸುತ್ತಾರೆ. ಆದರೆ, ಚೈತ್ರಾ ವೈವಾಹಿಕ ಜೀವನದ ಕನಸು ಕಂಡಿದ್ದಕ್ಕೂ, ನಿಜ ಜೀವನದಲ್ಲಿ ನಡೆಯುತ್ತಿರುವುದಕ್ಕೂ ಸಂಬಂಧವೇ ಇರಲಿಲ್ಲ. ಗಂಡನೊಂದಿಗೆ ಸಂಸಾರ ಆರಂಭಿಸಿದ ಪ್ರತಿ ಕ್ಷಣಗಳನ್ನು ನರಕದಂತೆ ಕಳೆದ ಚೈತ್ರಾ ವಾಸುದೇವನ್ ಸುಮಾರು 6 ವರ್ಷಗಳು ಎಲ್ಲವನ್ನೂ ಸಹಿಸಿಕೊಂಡು ಕೊನೆಗೆ ಗಂಡನಿಗೆ ಡಿವೋರ್ಸ್ ಕೊಟ್ಟು ತಂದೆ ತಾಯಿಯೊಂದಿಗೆ ಉಳಿದುಕೊಂಡಿರುವ ಸತ್ಯವನ್ನು ಹಂಚಿಕೊಂಡಿದ್ದಾಳೆ.
<a href=https://youtube.com/embed/AdwPc__S9s8?autoplay=1&mute=1><img src=https://img.youtube.com/vi/AdwPc__S9s8/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ನಮ್ಮ ಕಾಲೇಜಿನ ಬ್ಯಾಚ್‌ನಲ್ಲಿಯೇ ನನ್ನದೇ ಬಹುಬೇಗ ಮದುವೆ ಆಗಿದ್ದು. ಆದರೆ, ನನಗಿಂತ ತಡವಾಗಿ ಮದುವೆಯಾದ ಎಲ್ಲ ಸ್ನೇಹಿತರಿಗೂ ಸುಂದರ ಕುಟುಂಬವಿದ್ದು, ಅವರಿಗೆ ಮಕ್ಕಳಿದ್ದಾರೆ. ಆದರೆ, ನನ್ನ ಜೀವನದಲ್ಲಿ ನಾನಂದುಕೊಂಡಂತೆ ಯಾವುದೂ ನಡೆಯಲಿಲ್ಲ. ಮುಂದಿನ ದಿನಗಳಲ್ಲಿ ಟ್ರೂ ಲವ್ ಹುಡುಕಾಟದಲ್ಲಿದ್ದೇನೆ, ನೋಡೋಣ. ಆದರೆ, ನಮ್ಮ ಜೀವನದಲ್ಲಿ ಯಾರೇ ಬಂದು ಹೋದರೂ ಅದಕ್ಕೊಂದು ಕಾರಣವಿರುತ್ತದೆ.
ಕೆಲವರು ನಿಮಗೆ ಒಳ್ಳೆಯ ನೆನಪಾಗಿ ಉಳಿಯುತ್ತಾರೆ. ಇನ್ನು ಕೆಲವರು ಖುಷಿಯನ್ನು ಹಂಚಿ ಹೋಗುತ್ತಾರೆ. ಮತ್ತೆ ಕೆಲವರು ನೀನು ಹೀಗೆ ಮಾರಬಾರದು ಎಂದು ಬುದ್ಧಿಯನ್ನು ಹೇಳಿ ಹೋಗುತ್ತಾರೆ. ಆದರೆ, ಇದಕ್ಕೆಲ್ಲ ನನ್ನ ಪೂರ್ವ ಜ್ಮದ ಕರ್ಮದ ಫಲವೇ ಇರಬೇಕು ಎಂದು ನಾನು ಎಲ್ಲವನ್ನು ನುಂಗಿಕೊಂಡಿದ್ದೇನೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.