ನನ್ನ ಹೆಂಡತಿನೂ ಬಿಟ್ಟಿಲ್ಲ; ಕಾರು ಡ್ರೈವರ್ ಬಿ ಚ್ಚಿಟ್ಟ ಸತ್ಯ
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ತಿರುವುಗಳು ಸಿಕ್ಕಿವೆ. 6 ತಿಂಗಳ ಹಿಂದೆಯೇ ಜಿಲ್ಲೆಯಲ್ಲಿ ಪೆನ್‌ಡ್ರೈವ್ ಸದ್ದು ಮಾಡಿತ್ತು. ಆದರೆ, ಈಗ ಬಿಡುಗಡೆ ಮಾಡಿದ್ದು ಯಾರೆಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಇಬ್ಬರ ಹೆಸರು ಹೆಚ್ಚಾಗಿ ಕೇಳಿಬರುತ್ತಿದ್ದು, ವಕೀಲ ದೇವರಾಜೇಗೌಡ ಹಾಗೂ ಪ್ರಜ್ವಲ್ ಚಾಲಕ ಕಾರ್ತಿಕ್ ಹೆಸರು ಮುನ್ನೆಲೆಗೆ ಬಂದಿದೆ.
ಆದರೆ, ಇಬ್ಬರು ಕೂಡ ನಾವು ವಿಡಿಯೋವನ್ನು ಬಿಡುಗಡೆ ಮಾಡಿಲ್ಲ ಅಂತಿದ್ದಾರೆ. ಆದರೆ ಇದೀಗ ಕಾರ್ತೀಕ್ ತಾವು ಮಾಡಿದ್ದೆಂದು ಒಪ್ಪಿಕೊಂಡಿದ್ದಾರೆ.2976 ಅಶ್ಲೀಲ ವಿಡಿಯೋ ದೃಶ್ಯಾವಳಿ ಇವೆ ಎನ್ನಲಾದ ಪೆನ್‌ಡ್ರೈವ್ ಅನ್ನು ವಕೀಲ ದೇವರಾಜೇಗೌಡನಿಗೆ ನೀಡಿದ್ದೆ ಎಂದು ಸಂಸದ ಪ್ರಜ್ವಲ್ ರೇವಣ್ಣನ ಕಾರಿನ ಮಾಜಿ ಚಾಲಕ ಕಾರ್ತಿಕ್ ನಿಗೂಢ ಸ್ಥಳದಲ್ಲಿ ಕುಳಿತು ಬಿಡುಗಡೆ ಮಾಡಿರುವ ಹೇಳಿಕೆ ತಿರುವು ಪಡೆದುಕೊಂಡಿದೆ.
ಕಳೆದ 15 ವರ್ಷದಿಂದ ಶಾಸಕ ಎಚ್‌ಡಿ ರೇವಣ್ಣ ಅವರ ಕುಟುಂಬದ ಕಾರು ಚಾಲಕನಾಗಿದ್ದೆ ಎಂದು ಹೇಳಿಕೊಂಡಿರುವ ಕಾರ್ತಿಕ್ ವರ್ಷದ ಹಿಂದೆ ಕೆಲಸಬಿಟ್ಟ ಬಳಿಕ ಸಣ್ಣದಾಗಿ ಪೆನ್‌ಡ್ರೈವ್ ಸದ್ದುಮಾಡಲು ಪ್ರಾರಂಭಿಸಿತ್ತು ಎಂಬ ಸಂಗತಿ ಅಲ್ಲಗಳೆಯುವಂತಿಲ್ಲ. ಜಮೀನು ವಿಷಯವಾಗಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಚಾಲಕ ಕಾರ್ತಿಕ್ ನಡುವೆ ವಿವಾದ ಸೃಷ್ಟಿಯಾಗಿತ್ತು.
ಮನೆಗೆ ನುಗ್ಗಿ ಗರ್ಭಿಣಿ ಪತ್ನಿ ಸಹಿತ ತನ್ನ ಮೇಲೆ ಹಲ್ಲೆ ಮಾಡಿ ಜಮೀನನ್ನು ಖಾತೆ ಮಾಡಿಸಿಕೊಂಡಿದ್ದಾರೆ ಎಂದು ಕಾರ್ತಿಕ್ ಕೆಲ ತಿಂಗಳ ಹಿಂದೆಯೇ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು. ಶಾಸಕ ಎಚ್.ಡಿ.ರೇವಣ್ಣ ಕುಟುಂಬದ ವಿರುದ್ಧ ಬುಸುಗುಡುತ್ತಲೇ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಆದಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು .
2023ರ ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ದೇವರಾಜೇಗೌಡನ ಬಳಿ ಹೋದರೆ ತನಗೆ ನ್ಯಾಯ ಸಿಗಬಹುದು ಎಂದು ಭಾವಿಸಿದ್ದ ಕಾರ್ತಿಕ್ ತನಗಾಗಿದೆ ಎನ್ನಲಾದ ಅನ್ಯಾಯ, ದೌರ್ಜನ್ಯದ ವಿವರ ನೀಡುವಾಗ ತನ್ನ ಬಳಿ ಇರುವ ಅಶ್ಲೀಲ ವಿಡಿಯೋಗಳ ಬಗ್ಗೆಯೂ ಪ್ರಸ್ತಾಪಿಸಿದ್ದೆ ಎಂದು ಆತನೇ ಹೇಳಿಕೊಂಡಿದ್ದಾನೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.