ಸಿಹಿಸುದ್ದಿ ಕೊಟ್ಟ ನೇಹಾ ಗೌಡ ದಂಪತಿಗಳು; ಯಾ ವ ಮಗು ಗೊತ್ತಾ

 
ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಗೊಂಬೆಗೆ ಮುದ್ದಾದ ಬೊಂಬೆಯೊಂದು ಬರ್ತಾ ಇದೆ. ಶೀಘ್ರವೇ ಬಿಗ್ ಬಾಸ್ ಸ್ಪರ್ಧಿ ನೇಹಾ ಗೌಡ ಅಮ್ಮನಾಗ್ತಿದ್ದಾರೆ. ಅವರ ಸೀಮಂತ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಅವರ ಸೀಮಂತದ ಫೋಟೋ ಹರಿದಾಡುತ್ತಿದೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರುವ, ನೇಹಾ ಪತಿ ಚಂದನ್ ನಟನೆಯ ಅಂತರಪಟ ಧಾರಾವಾಹಿ ತಂಡ ಈ ಸೀಮಂತ ಕಾರ್ಯಕ್ರಮದಲ್ಲಿ ಪಾಲೊಂಡಿತ್ತು. ಅಂತರಪಟ ಧಾರಾವಾಹಿ ಡೈರೆಕ್ಟರ್ ಸ್ವಪ್ನ ಕೃಷ್ಣ, ಸೀಮಂತದ ಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ಸ್ವಪ್ನ ಕೃಷ್ಣ ಗೊಂಬೆ ಜೊತೆಗಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 
ಫೋಟೋದಲ್ಲಿ ನಟಿ ನೇಹಾ ಗೌಡ, ಪತಿ ಚಂದನ್ ಗೌಡ ಹಾಗೂ ನಿರ್ದೇಶಕಿ ಸ್ವಪ್ನ ಕೃಷ್ಣ ಹಾಗೂ ಅಂತರಪಟ ಧಾರಾವಾಹಿ ನಾಯಕ ನಟಿ ತನ್ವಿಯಾ ಬಾಲರಾಜ್, ನಟಿ ಸೋನು ಗೌಡ, ನಟಿ ಜ್ಯೋತಿ ಸೇರಿದಂತೆ ಅನೇಕ ನಟಿಯರು ಕಾಣಿಸಿಕೊಂಡಿದ್ದಾರೆ. ಚೆಂದದ ಸೀರೆಯುಟ್ಟು ಗೊಂಬೆಯಂತೆ ಕಾಣ್ತಿದ್ದ ನೇಹಾ ಗೌಡ ನೋಡಿದ ಅಭಿಮಾನಿಗಳು ದೃಷ್ಟಿ ಬೀಳದಿರಲಿ ಎನ್ನುತ್ತಿದ್ದಾರೆ.    
ನೇಹಾ ಗೌಡ ಸೀಮಂತದ ಫೋಟೋ ಪೋಸ್ಟ್ ಮಾಡಿದ ನಿರ್ದೇಶಕಿ ಸ್ವಪ್ನ ಕೃಷ್ಣ, ನೇಹಾ ಗೌಡ ಹಾಗೂ ಚಂದನ್ ಗೌಡ ಅವರ ಮುಂದಿನ ಜೀವನ ಸುಂದರವಾಗಿರಲಿ ಎಂದು ಹಾರೈಸುತ್ತೇನೆ ಎಂದು ಶೀರ್ಷಿಕೆ ಹಾಕಿದ್ದಾರೆ. ಈ ಫೋಟೋ ನೋಡ್ತಿದ್ದಂತೆ ಅಭಿಮಾನಿಗಳ ಕಮೆಂಟ್ ಶುರುವಾಗಿದೆ. ನೇಹಾ ಗೌಡಗೆ ಹೆಣ್ಣು ಮಗು ಅಂತ ಕೆಲ ಅಭಿಮಾನಿಗಳು ಭವಿಷ್ಯ ನುಡಿದಿದ್ದಾರೆ. 
ಇಡೀ ತಂಡ ಸುಂದರವಾಗಿ ಕಾಣ್ತಿದೆ ಎಂದು ಅಂತರಪಟ ಟೀಂ ಕಮೆಂಟ್ ಮಾಡಿದೆ. ನಟಿ ನೇಹಾ ಗೌಡ ಸೀಮಂತ ಕಾರ್ಯಕ್ರಮ ಇಂದು ನಡೆದಿದೆ. ಹಾಗಾಗಿ ನೇಹಾ ಗೌಡ ಇನ್ನೂ ಫೋಟೋಗಳನ್ನು ಹಂಚಿಕೊಂಡಿಲ್ಲ. ಅವರ ಖಾತೆಯಿಂದ ಇನ್ನೊಂದಿಷ್ಟು ಸುಂದರ ಫೋಟೋ, ವಿಡಿಯೋ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. 
ಎರಡು ವಾರಗಳ ಹಿಂದೆ ಪತಿ ಚಂದನ್ ಗೌಡ ಜೊತೆ ಫೋಟೋ ಶೂಟ್ ಮಾಡಿಸಿಕೊಂಡಿದ್ದ ನೇಹಾ ಗೌಡ, ಮೂರು ದಿನಗಳ ಹಿಂದೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹಾಗೆಯೇ ಆಪ್ತ ಗೆಳತಿ ಅನುಪಮಾ ಗೌಡ, ನೇಹಾಗೆ ವಿಶ್ ಮಾಡಿದ್ದ ಸುಂದರ ವಿಡಿಯೋ ಒಂದು ಸಾಕಷ್ಟು ಸುದ್ದಿ ಮಾಡಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.