ಅಂಗವಿಕಲನ ಕೈಹಿಡಿದ ಮುದ್ದಾಗಿರುವ ಯುವತಿ, ಮಗು ಮಕ್ಕಳು ಹೇಗೆ ಎಂದು ಪ್ರಶ್ನಿಸಿದ ನೆಟ್ಟಿಗರು
Nov 10, 2024, 08:45 IST
ಈಗೆಲ್ಲಾ ವರ್ಷ 30 ಕಳೆದರೂ ಕೆಲ ಯುವಕರಿಗೆ ವಿವಾಹವಾಗಲು ಹೆಣ್ಣು ದೊರೆಯುವುದಿಲ್ಲ. ಆದ್ರೆ ಇಲ್ಲೊಂದು ಹುಡುಗಿ ನಡೆಯಲು ಬಾರದ ಅಂಗವಿಕಲನನ್ನು ಮದುವೆ ಆಗಿ ಮಾನವೀಯತೆ, ಪ್ರೀತಿ ಜಗತ್ತಿನಲ್ಲಿ ಇನ್ನೂ ಬದುಕಿದೆ ಎಂಬ ನಿಜವನ್ನು ಎತ್ತಿ ತೋರಿಸಿದ್ದಾರೆ.ಕಾಲಿವುಡ್ ಚಿತ್ರರಂಗದ ಜನಪ್ರಿಯ ನಟ ಕಂ ರಾಜಕೀಯ ಮುಖಂಡ ನೆಪೋಲಿಯನ್ ತಮ್ಮ ಕಿರಿಯ ಪುತ್ರನ ಮದುವೆಯನ್ನು ಅದ್ಧೂರಿಯಾಗಿಯೇ ನೆರವೇರಿಸಿದ್ದಾರೆ.
ನಟ ನೆಪೋಲಿಯನ್ ಅವರ ಕಿರಿಯ ಪುತ್ರ ಧನೂಷ್ ಅವರಿಗೆ ಬಾಲ್ಯದಿಂದಲೇ ಸ್ನಾಯು ಕ್ಷಯ ಕಾಯಿಲೆ ಇದೆ. ಇದೊಂದು ಅಪರೂಪದ ಕಾಯಿಲೆ ಆಗಿದ್ದು, ದಿನನಿತ್ಯದ ಚಟುವಟಿಕೆಗಳಿಗೆ ಇತರರನ್ನು ಅವಲಂಬಿಸಬೇಕಾಗುವ ಸ್ಥಿತಿ ರೋಗಿಗೆ ಇರುತ್ತದೆ.ಹೀಗಾಗಿ ನೆಪೋಲಿಯನ್ ಅವರ ಪುತ್ರ ಧನೂಷ್ ವೀಲ್ ಚೇರ್‌ನಲ್ಲೇ ಇದ್ದಾರೆ. ಮಗನ ಈ ಸ್ಥಿತಿಯಿಂದ ನೆಪೋಲಿಯನ್ ದಂಪತಿ ಅಮೆರಿಕದಲ್ಲಿ ನೆಲೆಸಿದ್ದರು.
25 ವರ್ಷದ ಧನೂಷ್ ಅವರಿಗೆ ಮದುವೆ ಮಾಡಿಸಿಕೊಡಬೇಕೆನ್ನುವ ಕನಸು ನೆಪೋಲಿಯನ್ ಅವರಿಗಿತ್ತು. ಆದರೆ ಮಗನ ಆರೋಗ್ಯ ಸ್ಥಿತಿ ಅದಕ್ಕೆ ಅಡ್ಡಿ ಆಗುತ್ತಿತ್ತು.ಅಂತೂ ಚೆನ್ನೈ ಮೂಲದ ಅಕ್ಷಯ ಎಂಬಾಕೆ ವಿವಾಹವಾಗಲು ಮುಂದೆ ಬಂದಿದ್ದಳು. ನಿಶ್ಚಿತಾರ್ಥಕ್ಕೂ ಧನೂಷ್ ಬರಲು ಆಗದ ಕಾರಣ ವಿಡಿಯೋ ಕಾಲ್‌ನಲ್ಲಿ ನಿಶ್ಚಿತಾರ್ಥ ನೆರವೇರಿತ್ತು.
ಸೋಶಿಯಲ್ ಮೀಡಿಯಾದಲ್ಲಿ ಈ ನಿಶ್ಚಿತಾರ್ಥದ ಬಗ್ಗೆ ಚರ್ಚೆ ನಡೆದಿತ್ತು. ಯುವತಿ ಧನೂಷ್ ಅವರನ್ನು ದುಡ್ಡಿಗೋಸ್ಕರ ವಿವಾಹವಾಗಲು ಒಪ್ಪಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು.ಮದುವೆಯೂ ಮುನ್ನ ಭಾವಿ ಪತ್ನಿ ಜತೆ ಧನೂಷ್ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಗುರುವಾರ ಹಿಂದೂ ಸಂಪ್ರದಾಯದಂತೆ ಜಪಾನಿನಲ್ಲಿ ಧನೂಷ್- ಅಕ್ಷಯ ವಿವಾಹ ನೆರವೇರಿದೆ.
ಪತ್ನಿಯ ಕತ್ತಿಗೆ ತಾಳಿ ಹಾಕಲು ಕೂಡ ಸರಿಯಾಗಿ ಆಗದೆ ಇದ್ದಾಗ, ಧನೂಷ್ ತಾಯಿ ಮಗನ ಕೈಹಿಡಿದು ತಾಳಿಯನ್ನು ಹಾಕಿಸಿದ್ದಾರೆ. ಮಗನ ಆರೋಗ್ಯ ಸ್ಥಿತಿಯಿಂದ ಆತನಿಗೆ ಮದುವೆಯೇ ಆಗಲ್ಲ ಎಂದುಕೊಂಡಿದ್ದ ನೆಪೋಲಿಯನ್ ಪುತ್ರನ ಮದುವೆ ಸಂಭ್ರಮವನ್ನು ನೋಡಿ ಕಣ್ಣೀರಿಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.