ಆಸ್ತಿ, ಜಮೀನು ಪತ್ರ ಅಡವಿಟ್ಟು ಬ್ಯಾಂಕ್ ಸಾಲ ಮಾಡಿರೋ ಎಲ್ಲರಿಗೂ ಹೊಸ ರೂಲ್ಸ್ ಜಾರಿ

 

 ನಾನು ಬ್ಯಾಂಕ್ನಿಂದ ಸಾಲ  ತೆಗೆದುಕೊಂಡಿದ್ದೆ ಅದನ್ನ ಸರಿಯಾದ ಸಮಯಕ್ಕೆ ಮರುಪಾವತಿ  ಮಾಡಿದ್ದೇನೆ, ಆದರೆ ನಾನು ಅಡವಿಟ್ಟ ಆಸ್ತಿ ಪತ್ರ ಮಾತ್ರ ನನ್ನ ಕೈ ಸೇರಿಲ್ಲ! ಈ ರೀತಿ ಸಂದೇಶವನ್ನು ಹೊಂದಿರುವ ಮೇಲ್ ಅಥವಾ ಮನವಿ ಪತ್ರಗಳು ಆರ್‌ಬಿಐಗೆ  ಸಾಕಷ್ಟು ಸಂದಾಯವಾಗಿದೆ.


ಇದೆಲ್ಲವೂ ಗ್ರಾಹಕರ ಮನವಿಗಳಾಗಿದ್ದು ಆರ್‌ಬಿಐ (RBI) ಇದೀಗ ಗ್ರಾಹಕರ ಪರವಾಗಿ ಹೊಸ ನೀತಿಯನ್ನು ಜಾರಿಗೆ ತಂದಿದೆಎಷ್ಟೋ ಬಾರಿ ಅನಿವಾರ್ಯ ಕಾರಣಗಳಿಗೆ ಬ್ಯಾಂಕ್ ನಲ್ಲಿ ಸಾಲ  ತೆಗೆದುಕೊಳ್ಳಬೇಕಾಗುತ್ತದೆ, ಅದು ಗೃಹಸಾಲ ಇರಬಹುದು, ವಯಕ್ತಿಕ ಸಾಲ  ಇರಬಹುದು ಅಥವಾ ವಾಹನ  ಹಾಗೂ ಚಿನ್ನದ ಮೇಲಿನ  ಸಾಲವೇ ಆಗಿರಬಹುದು.

ತುರ್ತು ಪರಿಸ್ಥಿತಿ ಇದ್ದಾಗ ಬ್ಯಾಂಕ್ ನಲ್ಲಿ ಸಾಲ ಪಡೆದುಕೊಳ್ಳುವುದು ಸಹಜ, ಅದೇ ರೀತಿ ಬ್ಯಾಂಕುಗಳು ಕೂಡ ಬೇರೆ ಬೇರೆ ಸಾಲಕ್ಕೆ ಬೇರೆ ಬೇರೆ ಬಡ್ಡಿ ದರದಲ್ಲಿ ಗ್ರಾಹಕರಿಗೆ ಹಣವನ್ನು ಒದಗಿಸುತ್ತವೆ.ಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಂಡ ಮೇಲೆ ಗ್ರಾಹಕರು ಸರಿಯಾದ ಸಮಯಕ್ಕೆ ಸಾಲವನ್ನು ಬಡ್ಡಿ ಸಮೇತ ಮರುಪಾವತಿ  ಮಾಡಬೇಕು. ಸರಿಯಾಗಿ ಸಾಲ ಮರುಪಾವತಿ ಮಾಡಿ ಕ್ಲೀನ್ ಚಿಟ್ ಸಿಕ್ಕ ನಂತರ ಆ ಗ್ರಾಹಕ ಸಾಲ ತೆಗೆದುಕೊಳ್ಳುವಾಗ ಅಡವಿಟ್ಟ ಚರ ಅಥವಾ ಸ್ಥಿರಾಸ್ತಿ  ಪತ್ರವನ್ನು ಅವರಿಗೆ ಬ್ಯಾಂಕ್ ಹಿಂತಿರುಗಿಸಬೇಕು.

ಆದರೆ ಮೇಲೆ ಹೇಳಿರುವ ಉದಾಹರಣೆಯಂತೆ ಸಾಕಷ್ಟು ಗ್ರಾಹಕರು ಸಾಲ ಮರುಪಾವತಿ ಮಾಡಿದ ನಂತರವೂ ಅಡವಿಟ್ಟ ಆಸ್ತಿ ಪತ್ರವನ್ನು ಪಡೆದುಕೊಳ್ಳದೆ ಕಂಗಾಲಾಗಿದ್ದಾರೆ.ಆರ್‌ಬಿಐ ಇತರ ಬ್ಯಾಂಕ್ ಗೆ ಕಟ್ಟುನಿಟ್ಟಿನ ಆದೇಶವನ್ನು ಜಾರಿಗೆ ತಂದಿದ್ದು, ನಿಗದಿತ ಸಮಯದ ಒಳಗೆ ಗ್ರಾಹಕರು ಸಾಲ ಮರುಪಾವತಿ ಮಾಡಿದ ನಂತರ ಅವರ ಆಸ್ತಿ ಪತ್ರವನ್ನು ಇಟ್ಟುಕೊಳ್ಳುವಂತಿಲ್ಲ. ಒಂದು ತಿಂಗಳ ಒಳಗೆ ಅಂದರೆ 30 ದಿನಗಳಲ್ಲಿ ಸಾಲಗಾರ ಮರುಪಾವತಿ ಮಾಡಿದ ನಂತರ ಆತನ ಆಸ್ತಿ ಪತ್ರವನ್ನು ಹಿಂತಿರುಗಿಸಬೇಕು. ಎಂದು ಹೊಸ ರೂಲ್ಸ್ ಮಾಡಿದ್ದು ತಪ್ಪಿದರೆ ಬ್ಯಾಂಕ ಗಳಿಗೆ ದಂಡ ವಿಧಸಬಹುದಾಗಿದೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.